ಮುದ್ದೇಬಿಹಾಳ : ಗುರು ಹಿರಿಯರಿಗೆ ಕೊಡುವ ಗೌರವವೇ ನಿಜವಾದ ದೇವರ ಪೂಜೆ ಎಂದು ಗುಡಿಹಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಂಗಮೇಶ ನವಲಿ ಹೇಳಿದರು.
ತಾಲ್ಲೂಕಿನ ಗುಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರು ನಮ್ಮೊಳಗೆ ಇದ್ದಾನೆ. ನಮ್ಮ ತಂದೆ ತಾಯಿ ಗುರುಹಿರಿಯರ ರೂಪದಲ್ಲಿ ಇದ್ದಾನೆ. ಅವರನ್ನು ಗೌರವಿಸುವುದನ್ನು ಅಂಬಿಗರ ಚೌಡಯ್ಯನವರು ಹೇಳಿದ್ದಾರೆ ಎಂದು ಹೇಳಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಾಂತಗೌಡ ಮಾಡಗಿ,ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯ ಶಿವನಗೌಡ ಪಾಟೀಲ, ನಾಗಪ್ಪ ಹಿರೇಕುರುಬರ, ಯಲಗೂರದಪ್ಪ ಜಂಗಾಣಿ, ಶಾಂತಪ್ಪ ಹಡ್ಲಗೇರಿ, ಆನಂದ ಚಲವಾದಿ, ನಿಜಶರಣ ಅಂಬಿಗರ ಚೌಡಯ್ಯ ಗೆಳೆಯರ ಬಳಗ ಸದಸ್ಯರಾದ ಶಿವಪ್ಪ ಅಂಬಿಗೇರ, ಬಸಪ್ಪ ಕೋಲಕಾರ, ಪರಶುರಾಮ ಅಂಬಿಗೇರ, ಮಲ್ಲಣ್ಣ ಕೋಲಕಾರ , ಪ್ರದೀಪ ಅಂಬಿಗೇರ, ಕಲ್ಲಪ್ಪ ಅಂಬಿಗೇರ, ಬಸಪ್ಪ ಕೋಲಕಾರ, ಸಹದೇವಪ್ಪ ಕೋಲಕಾರ , ಮಹಾದೇವಪ್ಪ ಅಂಬಿಗೇರ, ಸೋಮಪ್ಪ ಕೋಲಕಾರ, ಮಲ್ಲಿಕಾರ್ಜುನ ಅಂಬಿಗೇರ, ಮಡಿವಾಳಪ್ಪ ಅಂಬಿಗೇರ, ಸಹ ಶಿಕ್ಷಕಿಯರಾದ ಲಕ್ಷ್ಮೀ ಮನ್ನಿಕಟ್ಟಿ,ಅತಿಥಿ ಶಿಕ್ಷಕಿ ಕಾಶೀಬಾಯಿ ಹಾದಿಮನಿ ಇದ್ದರು.
ವಿದ್ಯಾರ್ಥಿಗಳಿಗೆ ಸ್ಕೆಚ್ ಪೆನ್ ಕಿಟ್‌ನ್ನು ನಿಜಶರಣ ಅಂಬಿಗರ ಚೌಡಯ್ಯ ಗೆಳೆಯರ ಬಳಗದ ಸದಸ್ಯರು ವಿತರಿಸಿದರು.







