ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಮುದ್ದೇಬಿಹಾಳ : ನಾವು ಶಿಕ್ಷಣ ಕೊಡುವ ನೆಪದಲ್ಲಿ ನಮ್ಮ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದೇವೆ.ಅವರು ಆಟಗಳಲ್ಲಿ ಭಾಗಿಯಾಗುವ ಸಮಯವನ್ನು ಕಡಿಮೆಗೊಳಿಸಿದ್ದೇವೆ.ಶೇ.95 ಪಡೆದುಕೊಂಡರೂ ಮಗುವಿಗೆ ಪ್ರೋತ್ಸಾಹಿಸದೇ ಶೇ.98 ತಗೆದುಕೊಳ್ಳುವವರೆಗೂ ನಮಗಿಂದು ಸಮಾಧಾನ ಇರುವುದಿಲ್ಲ.ಅಂಕಗಳ ಬೆನ್ನು ಹತ್ತಿದ್ದೇವೆ ಎಂದು ಗದಗನ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎ.ಎನ್.ನಾಗರಳ್ಳಿ ಹೇಳಿದರು.

ಪಟ್ಟಣದ ಶ್ರೀ ಕೃಷ್ಣ ಮಂಗಲಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿoದ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಶೈಕ್ಷಣಿಕ ಕಾರ್ಯಾಗಾರ, ಉತ್ತಮ ಶಿಕ್ಷಕ,ಶಿಕ್ಷಕಿಯರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಮಕ್ಕಳನ್ನು ವ್ಯವಹಾರಿಕ ಜ್ಞಾನ ಹೊಂದಿದವರನ್ನಾಗಿ ಬೆಳೆಸಬೇಕು.ಸಚ್ಛಾರಿತ್ರ‍್ಯವಂತರಾಗಲು ಸಲಹೆ ಮಾಡಬೇಕು.ಓದು ಬರಹ ಮುಖ್ಯವಲ್ಲ, ಹೃದಯವೈಶಾಲ್ಯತೆಯುಳ್ಳ ಮಕ್ಕಳನ್ನು ತಯಾರು ಮಾಡಬೇಕು ಎಂದು ಶಿಕ್ಷಕರಿಗೆ ಸಲಹೆ ಮಾಡಿದರು.ಮೌಲ್ಯ ಶಿಕ್ಷಣ ಕೊಡುವ ಕಾರ್ಯ ಮುಖ್ಯವಾಗಿದೆ. ಪ್ರಾಮಾಣಿಕರಾಗಿರುವವರಿಗೆ ಸಮಾಜದಲ್ಲಿ ಬೆಲೆ ಹೆಚ್ಚು ಎಂಬುದನ್ನು ಮರೆಯಬಾರದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಗದಗ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಸ್.ಡಿ.ಗಾಂಜಿ ಮಾತನಾಡಿ,ಸಾವಿತ್ರಿಬಾಯಿ ಫುಲೆ ಎಲ್ಲ ಮಕ್ಕಳಿಗೆ ತಾಯಿಯಾಗಿ ನಾಡಿಗೆ ಅಕ್ಷರದ ಮೂಲಕ ಬೆಳಕು ಕೊಟ್ಟವರು.ಮಹಿಳೆ ಸಮಾಜದಲ್ಲಿ ಮುಖ್ಯವಾಹಿನಿಗೆ ಬಾರದಿರುವ ದಿನಗಳಲ್ಲೇ 18 ಶಾಲೆಗಳನ್ನು ಸ್ಥಾಪನೆ ಮಾಡಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟವರು.ಪತ್ನಿಯ ಹಂಬಲಕ್ಕೆ ಅವರ ಪತಿ ಜ್ಯೋತಿಬಾ ಫುಲೆ ಬೆಂಬಲ ನೀಡಿದರು.ರಾಜಕೀಯ,ಶೈಕ್ಷಣಿಕ,ಸಾಮಾಜಿಕವಾಗಿ ಬೆಳವಣಿಗೆಗೆ ಹೆಣ್ಣು ಮಕ್ಕಳು ಇಂದು ಬೆಳವಣಿಗೆ ಸಾಧಿಸಲು ಅದರಲ್ಲಿ ಸಾವಿತ್ರಿಬಾಯಿ ಫುಲೆ ಪಾತ್ರವಿದೆ ಎಂದರು.

ಕುAಟೋಜಿ ಭಾವೈಕ್ಯತಾ ಮಠದ ಚೆನ್ನವೀರ ಶಿವಾಚಾರ್ಯರು ಮಾತನಾಡಿ, ಸೇವಾ ಅವಧಿಯಲ್ಲಿಯೇ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಕೊಟ್ಟು ಗೌರವಿಸುವ ಕೆಲಸ ಮಾಡುತ್ತಿರುವ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಇನ್ನಷ್ಟು ಉನ್ನತ ಸ್ಥಾನಕ್ಕೆ ಬೆಳೆಯಲಿ.ಸಮಯದ ಪ್ರಜ್ಞೆ,ಅರಿವು ಎಲ್ಲರಲ್ಲೂ ಬರಬೇಕು ಎಂದರು.

ಸಾವಿತ್ರಿಬಾಯಿ ಫುಲೆ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಎಂ.ಜಿ.ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ನೀಡಿರುವ ಕೊಡುಗೆ ಮಾದರಿಯಾದದ್ದು ಅವರ ಹೆಸರಿನಲ್ಲಿ ರಾಜ್ಯ,ರಾಷ್ಟçಮಟ್ಟದಲ್ಲಿ ಸಂಘಗಳು ರಚನೆಗೊಂಡು ಫುಲೆ ದಂಪತಿ ಹೆಸರು ಚಿರಸ್ಥಾಯಿ ಆಗಿದೆ ಎಂದರು.

ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಬಿ.ಅಸ್ಕಿ ಮಾತನಾಡಿ, ನಾಲ್ಕು ರಾಜ್ಯಗಳಲ್ಲಿ ಗುತ್ತಿಗೆದಾರಿಕೆಯಲ್ಲಿ ಹೆಸರು ಮಾಡಿದ್ದ ಡಿ.ವೈ.ಉಪ್ಪಾರ ಈಚೇಗೆ ನಿಧನರಾಗಿದ್ದು ವಾರ್ಷಿಕ 20 ಸಾವಿರ ಕೋಟಿ ಕೆಲಸಗಳನ್ನು ಅವರು ಮಾಡುತ್ತಿದ್ದರು.ಅಂತಹ ಗುತ್ತಿಗೆದಾರರನ್ನು ಎತ್ತರ ಮಟ್ಟಕ್ಕೆ ಬೆಳೆಯುವಂತೆ ಮಾಡಿದ್ದು ಶಿಕ್ಷಕರ ಮಾರ್ಗದರ್ಶನ ಎಂಬುದನ್ನು ಮರೆಯುವಂತಿಲ್ಲ.ಸಾವಿತ್ರಿಬಾಯಿ ಫುಲೆ ಸಂಘದವರು ಸಂಘದ ಸಭಾಭವನ ಕಟ್ಟಡ ನಿರ್ಮಿಸಲು ಮುಂದಾದರೆ ಅದಕ್ಕೆ ತಮ್ಮಿಂದ ವಯಕ್ತಿಕ ಸಹಕಾರ ಮಾಡುವುದಾಗಿ ಹೇಳಿದರು.

ಗಣ್ಯರಾದ ಐ.ಜಿ.ಬೆನಕೊಪ್ಪ,ಬಿ.ಇ.ಒ ಬಿ.ಎಸ್.ಸಾವಳಗಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅರವಿಂದ ಹೂಗಾರ, ಬಿಇಒ ಬಿ.ಎಸ್.ಸಾವಳಗಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯಶ್ರೀ ಬೆಣ್ಣಿ, ಸಂಘದ ಜಿಲ್ಲಾಧ್ಯಕ್ಷ ಎ.ಬಿ.ನಾಯಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿ.ಆರ್.ಸಿ.ಆರ್.ಬಿ.ಧಮ್ಮೂರಮಠ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎo.ಬೆಳಗಲ್, ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಜೆ.ದಖನಿ , ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎಚ್.ಮುದ್ನೂರ, ಸರ್ಕಾರಿ ನೌಕರರ ಸಂಘದ ಸದಸ್ಯ ಬಿ.ಎಸ್.ಶೇಖಣ್ಣವರ, ಆಲೂರ ಗ್ರಾಪಂ ಅಧ್ಯಕ್ಷೆ ಶೋಭಾ ಶೆಳ್ಳಗಿ,ಎಸ್,ಎಂ,ಪವಾರ,ಮೋಹನ ಚವ್ಹಾಣ ಉಪಸ್ಥಿತರಿದ್ದರು.ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು.ದೀಪಾ ಕೇಶಾಪೂರ ಹಾಗೂ ಆರತಿ ರೂಗಿ ಸ್ವಾಗತಿಸಿದರು.ಬಿ.ಎಂ.ಗದ್ದಿ ಹಾಗೂ ಆರ್.ಬಿ.ಮ್ಯಾಗೇರಿ ನಿರೂಪಿಸಿದರು.ಆರ್.ಬಿ.ಮ್ಯಾಗೇರಿ ವಂದಿಸಿದರು.

ಕಾರ್ಯಕ್ರಮದಲ್ಲಿ ದಾನಿಗಳಾದ ಟಿ.ಎನ್.ರೂಢಗಿ,ಎಫ್.ಎಸ್.ಬಾಗವಾನ,ಶಾರದಾ ಅಡಗಲ್,ಝಡ್.ಬಿ.ಅಗ್ನಿ,ಸುಜಾತಾ ಕಡಿ,ಎಸ್.ಆರ್.ಬಾಗೇವಾಡಿ,ಶ್ರೀಕಾಂತ ಹಡಲಗೇರಿಎಸ್.ಬಿ.ತಳವಾರ,ಎಚ್.ಜಿ.ಗೌರೋಜಿ,ಅಫ್ತಾಬ ಮನಿಯಾರ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕ,ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ : ಆಲೂರು ಕ್ಲಸ್ಟರ್‌ನಿಂದ ಪಿ.ಎಸ್.ವಡವಡಗಿ,ಶಕುಂತಲಾ ಇಲಕಲ್, ರಕ್ಕಸಗಿ ಕ್ಲಸ್ಟರ್‌ನಿಂದ ಸಂಗಣ್ಣ ಟಕ್ಕಳಕಿ, ಶರಣಮ್ಮ ಬಿರಾದಾರ, ನಾಲತವಾಡ ಕ್ಲಸ್ಟರ್‌ನಿಂದ ಬಾಬು ಲಮಾಣಿ ಹಾಗೂ ಶೃತಿ ಮುರಾಳ , ತಂಗಡಗಿ ಕ್ಲಸ್ಟರ್‌ನಿಂದ ಪಿ.ಬಿ.ಗುಬಚಿ ಹಾಗೂ ಶಾಂತಾ ರಾಮವಾಡಗಿ, ಇಂಗಳಗೇರಿ ಕ್ಲಸ್ಟರ್‌ನಿಂದ ಲಕ್ಷö್ಮಣ ಚಲವಾದಿ, ಆರ್.ಸಿ.ಸಂಗಮ ,ಯರಝರಿ ಕ್ಲಸ್ಟರ್‌ನಿಂದ ಎಚ್.ಬಿ.ಲಮಾಣಿ, ರುಕ್ಮಿಣಿ ಬಾಟಿ, ಬಳಬಟ್ಟಿ ಕ್ಲಸ್ಟರ್‌ನಿಂದ ರವಿ ಹಿಪ್ಪರಗಿ ಹಾಗೂ ಜಯಶ್ರೀ ಸಾಲಿಮಠ, ಮಡಿಕೇಶ್ವರ ಕ್ಲಸ್ಟರ್‌ನಿಂದ ಎಸ್.ಎಸ್.ಮಠ ಹಾಗೂ ಟಿ.ಡಿ.ರಾಠೋಡ, ಢವಳಗಿ ಕ್ಲಸ್ಟರ್‌ನಿಂದ ಬಸಮ್ಮ ಗುಡದಿನ್ನಿ ಹಾಗೂ ಸಿ.ಪಿ.ಮುತ್ತಿನ,ಬಸರಕೋಡ ಕ್ಲಸ್ಟರ್‌ನಿಂದ ಬಿ.ಎಸ್.ಜಮದರಖಾನಿ ಹಾಗೂ ಕೆ.ಆರ್.ದೊರೆಗೋಳ,ಅಡವಿ ಸೋಮನಾಳ ಕ್ಲಸ್ಟರ್‌ನಿಂದ ಈರಪ್ಪ ಮ್ಯಾಗೇರಿ ಹಾಗೂ ಸುವರ್ಣ ಬಡಿಗೇರ,ಪ್ರಿಯಾಂಕಾ ಮುರಾಳ,ಹಡಲಗೇರಿ ಕ್ಲಸ್ಟರ್‌ನಿಂದ ಸಿ.ಬಿ.ಯರಂತೇಲಿ ಹಾಗೂ ಬಿ.ಎಸ್.ಕಡು, ಹುಲ್ಲೂರ ಕ್ಲಸ್ಟರ್‌ನಿಂದ ವಾಯ್.ಬಿ.ನಾಯ್ಕೋಡಿ ಹಾಗೂ ಹಮೀದಾಬೇಗಂ ನದಾಫ, ಹಿರೇಮುರಾಳ ಕ್ಲಸ್ಟರ್‌ನಿಂದ ಎಚ್.ವಾಯ್.ಗಲಗಲಿ ಹಾಗೂ ಎಸ್.ಎಮ್.ಕಟ್ಟಿಮಠ,ಮುದ್ದೇಬಿಹಾಳ ಉರ್ದು ಕ್ಲಸ್ಟರ್‌ನಿಂದ ರಾವುತಪ್ಪ ಕೂಡಗಿ ಹಾಗೂ ಎಂ.ಎಸ್.ಅತ್ತಾರ,ಎ.ಆಯ್.ಮOದ್ರೂಪ, ಮುದ್ದೇಬಿಹಾಳ ಕ್ಲಸ್ಟರ್‌ದಿಂದ ಶಿವಲಿಂಗೇಶ ಗುಂಡಕನಾಳ,ಎ.ಎo.ಘoಟಿಮಠ,ಶ್ರೀಮತಿ ನಾಗರತ್ನಾ, ಬಿದರಕುಂದಿ ಕ್ಲಸ್ಟರ್‌ನಿಂದ ಜಮಾಲ್‌ಶೇಖ, ಎನ್.ಬಿ.ಪಿಂಜಾರ ಅವರುಗಳಿಗೆ ಸಾವಿತ್ರಿಬಾಯಿ,ಜ್ಯೋತಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

NEWS BY: SHANKAR HEBBAL

Latest News

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ;                                                ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಮುದ್ದೇಬಿಹಾಳ : ನಾವು ಶಿಕ್ಷಣ ಕೊಡುವ ನೆಪದಲ್ಲಿ ನಮ್ಮ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದೇವೆ.ಅವರು ಆಟಗಳಲ್ಲಿ

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ : ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಿಂದ ಅ.3 ,

ಗುರು,ಹಿರಿಯರಿಗೆ ಕೊಡುವ ಗೌರವವೇ ದೇವರ ಪೂಜೆ-ನವಲಿ

ಗುರು,ಹಿರಿಯರಿಗೆ ಕೊಡುವ ಗೌರವವೇ ದೇವರ ಪೂಜೆ-ನವಲಿ

ಮುದ್ದೇಬಿಹಾಳ : ಗುರು ಹಿರಿಯರಿಗೆ ಕೊಡುವ ಗೌರವವೇ ನಿಜವಾದ ದೇವರ ಪೂಜೆ ಎಂದು ಗುಡಿಹಾಳದ

ಜ.24 ರಂದು ಸಾವಿತ್ರಿ ಬಾಯಿ ಫುಲೆ ಜಯಂತಿ: ಉತ್ತಮ ಶಿಕ್ಷಕ,ಶಿಕ್ಷಕಿಯರಿಗೆ ಪ್ರಶಸ್ತಿ

ಜ.24 ರಂದು ಸಾವಿತ್ರಿ ಬಾಯಿ ಫುಲೆ ಜಯಂತಿ: ಉತ್ತಮ ಶಿಕ್ಷಕ,ಶಿಕ್ಷಕಿಯರಿಗೆ ಪ್ರಶಸ್ತಿ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿAದ ಸಾವಿತ್ರಿಬಾಯಿ ಫುಲೆ ಜಯಂತಿ

ಡಿಜಿಟಲ್ ಇ-ಸ್ಟ್ಯಾಂಪ್ ತರಬೇತಿ;                                           ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ

ಡಿಜಿಟಲ್ ಇ-ಸ್ಟ್ಯಾಂಪ್ ತರಬೇತಿ; ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ

ಮುದ್ದೇಬಿಹಾಳ : ಉಪ ನೋಂದಣಿ ಕಛೇರಿಯಲ್ಲಿ ನೋಂದಾಯಿತವಲ್ಲದ ಡಿಜಿಟಲ್ ಈ ಸ್ಟ್ಯಾಂಪಿoಗ್ ಆನ್‌ಲೈನ್‌ನಲ್ಲಿ ಸೇವೆ ಸಲ್ಲಿಸುವ ಕುರಿತು ತರಬೇತಿ ಕಾರ್ಯಕ್ರಮ ಈಚೇಗೆ ಜರುಗಿತು. ಜಿಲ್ಲಾ ನೋಂದಣಿ ಇಲಾಖೆಯ ಅಭಿಯಂತರ ಚಂದ್ರಶೇಖರ ಕೊಣ್ಣೂರ,ತಹಶೀಲ್ದಾರ್ ಕೀರ್ತಿ ಚಾಲಕ್, ಉಪ ನೋಂದಣಾಧಿಕಾರಿ ಸಚಿನ ಖೈನೂರ ಅವರು ತಿಳಿವಳಿಕೆ ನೀಡಿದರು. ದಸ್ತು ಬರಹಗಾರ ಸಂಘದ ಅಧ್ಯಕ್ಷ ಎಚ್.ಆರ್.ಬಾಗವಾನ ಮಾತನಾಡಿ, ಡಿಜಿಟಲ್ ಈ ಸ್ಟ್ಯಾಂಪ ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.ವಿಜಯಪುರ ಜಿಲ್ಲಾ ನೋಂದಣಾಧಿಕಾರಿ

ನಕ್ಕು ನಗೆಗಡಲಲ್ಲಿ ತೇಲಿಸಿ ವೈಚಾರಿಕತೆಯತ್ತ ಸೆಳೆದೊಯ್ದ ‘ಕಳ್ಳರ ಸಂತೆ’

ನಕ್ಕು ನಗೆಗಡಲಲ್ಲಿ ತೇಲಿಸಿ ವೈಚಾರಿಕತೆಯತ್ತ ಸೆಳೆದೊಯ್ದ ‘ಕಳ್ಳರ ಸಂತೆ’

ಶoಕರ ಈ.ಹೆಬ್ಬಾಳಮುದ್ದೇಬಿಹಾಳ : ಹೌದು.ಅಕ್ಷರಶಃ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಮುಖ ಸ್ತರದಲ್ಲಿರುವ ಹುದ್ದೆಗಳಲ್ಲಿರುವವರು ಪ್ರಾಮಾಣಿಕರೇ,ದಕ್ಷರೋ ಎಂದು ಒರೆಗಲ್ಲಿಗೆ ಹಚ್ಚಿ ನವೀರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ ಕಳ್ಳರ ಸಂತೆ ನಾಟಕ ವೈಚಾರಿಕ ಚಿಂತನೆಗೆ ಹಚ್ಚಿತು. ರಾಜ್ಯದಲ್ಲಿ ತೀವ್ರ ಬರಗಾಲ ಬಿದ್ದ ಸಮಯದಲ್ಲಿ ಅರಮನೆಯಲ್ಲಿನ ಖಜಾನೆ ಲೂಟಿಗೆ ಬರುವ ಕಳ್ಳರಿಬ್ಬರಲ್ಲಿ ಓರ್ವ ಕಳ್ಳ ತಾನು ನಂಬಿದ ವಿದ್ಯೆಯನ್ನು ತನ್ನ ಜೀವ ಉಳಿಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆ ಎಂಬುದನ್ನು ನಾಟಕ