ಪರೀಕ್ಷೆ ಬರೆಯಿರಿ ನಗದು ಹಣ ಗೆಲ್ಲಿ: ಶಹಾಪೂರ : ಜ.25 ರಂದು ಆಕ್ಸಫರ್ಡ್ ಡೈಮಂಡ್ ಹಂಟ್ ಆವಾರ್ಡ್

ಪರೀಕ್ಷೆ ಬರೆಯಿರಿ ನಗದು ಹಣ ಗೆಲ್ಲಿ: ಶಹಾಪೂರ : ಜ.25 ರಂದು ಆಕ್ಸಫರ್ಡ್ ಡೈಮಂಡ್ ಹಂಟ್ ಆವಾರ್ಡ್

ಶಹಾಪೂರ : ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಿAದ ಜ.25ರಂದು ಶಹಾಪೂರದಲ್ಲಿ ಆಕ್ಸಫಡ ಪಾಟೀಲ್ಸ್ ಡೈಮಂಡ್ ಹಂಟ್ ಅವಾರ್ಡ್ ಸ್ಪರ್ಧೆ ಆಯೋಜಿಸಿದೆ ಎಂದು ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ತಿಳಿಸಿದ್ದಾರೆ.

ಪರೀಕ್ಷೆಯನ್ನು 10ನೇ ತರಗತಿ ಪರೀಕ್ಷೆ ಬರೆದಿರುವ ರಾಜ್ಯ ಪರೀಕ್ಷಾ ಮಂಡಳಿ, ಐಸಿಎಸ್‌ಇ,ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದ್ದು ಇದನ್ನು ಪ್ರಥಮ ಪಿಯುಸಿ ಪರೀಕ್ಷೆಯ ಪ್ರವೇಶ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ.ಪರೀಕ್ಷೆ ಶಹಾಪೂರದ ಕೋರ್ಟ್ ಹತ್ತಿರ ಇರುವ ಶಾರದಾ ವಿದ್ಯಾನಿಕೇತನ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಮದ್ಯಾಹ್ನ 12ಕ್ಕೆ ಪರೀಕ್ಷೆ ನಡೆಯಲಿದೆ.

ಪ್ರಥಮ ಸ್ಥಾನ ಪಡೆದುಕೊಳ್ಳು ವಿದ್ಯಾರ್ಥಿಗೆ 50 ಸಾವಿರ ರೂ.,ಎರಡನೇ ಬಹುಮಾನ 40 ಸಾವಿರ ರೂ., ಮೂರನೇ ಬಹುಮಾನ 30 ಸಾವಿರ ರೂ., ನಾಲ್ಕನೇ ಬಹುಮಾನ 15 ಸಾವಿರ ರೂ., ಐದನೇ ಬಹುಮಾನ 10 ಸಾವಿರ, ಆರನೇ ಬಹುಮಾನ ಐದು ಸಾವಿರ ರೂ. ಹಾಗೂ ಅತೀ ಹೆಚ್ಚು ಅಂಕ ಪಡೆದ ಮೊದಲ ಹತ್ತು ವಿದ್ಯಾರ್ಥಿಗಳಿಗೆ 2500 ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಆಸಕ್ತ ವಿದ್ಯಾರ್ಥಿಗಳು ವಿದ್ಯಾರ್ಥಿ ಹೆಸರು,ತರಗತಿ,ಶಾಲೆ ಹೆಸರು,ಮೊಬೈಲ್ ನಂಬರ್‌ನ್ನು 9380095756ಗೆ ಮೆಸೇಜ್ ಕಳುಹಿಸಬಹುದಾಗಿದೆ.ಹೆಚ್ಚಿನ ಮಾಹಿತಿಗೆ 7483147040,8310035858ನ್ನು ಸಂಪರ್ಕಿಸಬಹುದಾಗಿದೆ.

Latest News

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ;                                                ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಮುದ್ದೇಬಿಹಾಳ : ನಾವು ಶಿಕ್ಷಣ ಕೊಡುವ ನೆಪದಲ್ಲಿ ನಮ್ಮ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದೇವೆ.ಅವರು ಆಟಗಳಲ್ಲಿ

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ : ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಿಂದ ಅ.3 ,

ಗುರು,ಹಿರಿಯರಿಗೆ ಕೊಡುವ ಗೌರವವೇ ದೇವರ ಪೂಜೆ-ನವಲಿ

ಗುರು,ಹಿರಿಯರಿಗೆ ಕೊಡುವ ಗೌರವವೇ ದೇವರ ಪೂಜೆ-ನವಲಿ

ಮುದ್ದೇಬಿಹಾಳ : ಗುರು ಹಿರಿಯರಿಗೆ ಕೊಡುವ ಗೌರವವೇ ನಿಜವಾದ ದೇವರ ಪೂಜೆ ಎಂದು ಗುಡಿಹಾಳದ

ಜ.24 ರಂದು ಸಾವಿತ್ರಿ ಬಾಯಿ ಫುಲೆ ಜಯಂತಿ: ಉತ್ತಮ ಶಿಕ್ಷಕ,ಶಿಕ್ಷಕಿಯರಿಗೆ ಪ್ರಶಸ್ತಿ

ಜ.24 ರಂದು ಸಾವಿತ್ರಿ ಬಾಯಿ ಫುಲೆ ಜಯಂತಿ: ಉತ್ತಮ ಶಿಕ್ಷಕ,ಶಿಕ್ಷಕಿಯರಿಗೆ ಪ್ರಶಸ್ತಿ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿAದ ಸಾವಿತ್ರಿಬಾಯಿ ಫುಲೆ ಜಯಂತಿ

ಡಿಜಿಟಲ್ ಇ-ಸ್ಟ್ಯಾಂಪ್ ತರಬೇತಿ;                                           ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ

ಡಿಜಿಟಲ್ ಇ-ಸ್ಟ್ಯಾಂಪ್ ತರಬೇತಿ; ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ

ಮುದ್ದೇಬಿಹಾಳ : ಉಪ ನೋಂದಣಿ ಕಛೇರಿಯಲ್ಲಿ ನೋಂದಾಯಿತವಲ್ಲದ ಡಿಜಿಟಲ್ ಈ ಸ್ಟ್ಯಾಂಪಿoಗ್ ಆನ್‌ಲೈನ್‌ನಲ್ಲಿ ಸೇವೆ ಸಲ್ಲಿಸುವ ಕುರಿತು ತರಬೇತಿ ಕಾರ್ಯಕ್ರಮ ಈಚೇಗೆ ಜರುಗಿತು. ಜಿಲ್ಲಾ ನೋಂದಣಿ ಇಲಾಖೆಯ ಅಭಿಯಂತರ ಚಂದ್ರಶೇಖರ ಕೊಣ್ಣೂರ,ತಹಶೀಲ್ದಾರ್ ಕೀರ್ತಿ ಚಾಲಕ್, ಉಪ ನೋಂದಣಾಧಿಕಾರಿ ಸಚಿನ ಖೈನೂರ ಅವರು ತಿಳಿವಳಿಕೆ ನೀಡಿದರು. ದಸ್ತು ಬರಹಗಾರ ಸಂಘದ ಅಧ್ಯಕ್ಷ ಎಚ್.ಆರ್.ಬಾಗವಾನ ಮಾತನಾಡಿ, ಡಿಜಿಟಲ್ ಈ ಸ್ಟ್ಯಾಂಪ ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.ವಿಜಯಪುರ ಜಿಲ್ಲಾ ನೋಂದಣಾಧಿಕಾರಿ

ನಕ್ಕು ನಗೆಗಡಲಲ್ಲಿ ತೇಲಿಸಿ ವೈಚಾರಿಕತೆಯತ್ತ ಸೆಳೆದೊಯ್ದ ‘ಕಳ್ಳರ ಸಂತೆ’

ನಕ್ಕು ನಗೆಗಡಲಲ್ಲಿ ತೇಲಿಸಿ ವೈಚಾರಿಕತೆಯತ್ತ ಸೆಳೆದೊಯ್ದ ‘ಕಳ್ಳರ ಸಂತೆ’

ಶoಕರ ಈ.ಹೆಬ್ಬಾಳಮುದ್ದೇಬಿಹಾಳ : ಹೌದು.ಅಕ್ಷರಶಃ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಮುಖ ಸ್ತರದಲ್ಲಿರುವ ಹುದ್ದೆಗಳಲ್ಲಿರುವವರು ಪ್ರಾಮಾಣಿಕರೇ,ದಕ್ಷರೋ ಎಂದು ಒರೆಗಲ್ಲಿಗೆ ಹಚ್ಚಿ ನವೀರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ ಕಳ್ಳರ ಸಂತೆ ನಾಟಕ ವೈಚಾರಿಕ ಚಿಂತನೆಗೆ ಹಚ್ಚಿತು. ರಾಜ್ಯದಲ್ಲಿ ತೀವ್ರ ಬರಗಾಲ ಬಿದ್ದ ಸಮಯದಲ್ಲಿ ಅರಮನೆಯಲ್ಲಿನ ಖಜಾನೆ ಲೂಟಿಗೆ ಬರುವ ಕಳ್ಳರಿಬ್ಬರಲ್ಲಿ ಓರ್ವ ಕಳ್ಳ ತಾನು ನಂಬಿದ ವಿದ್ಯೆಯನ್ನು ತನ್ನ ಜೀವ ಉಳಿಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆ ಎಂಬುದನ್ನು ನಾಟಕ