ಮುದ್ದೇಬಿಹಾಳ : ತಾಲೂಕಿನ ಕೃಷ್ಣಾ ನದಿ ತೀರದ ಮದರಿ ಗ್ರಾಮವ್ಯಾಪ್ತಿಯ ಕಬ್ಬಿನ ಗದ್ದೆಯ ಹತ್ತಿರ ಚಿರತೆಯೊಂದು ಕಾಣಿಸಿಕೊಂಡಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಎರಡ್ಮೂರು ದಿನಗಳಿಂದ ಚಿರತೆ ಈ ಭಾಗದಲ್ಲಿ ಓಡಾಟ ನಡೆಸುತ್ತಿದ್ದು ಗ್ರಾಮದ ಸಿದ್ದಪ್ಪ ಮೇಟಿ ಎಂಬುವ ಹೊಲದ ಬಳಿ ಚಿರತೆ ಕಂಡಿರುವುದನ್ನು ಕಾರಿನಲ್ಲಿ ಕೂತು ಫೋಟೊ ಸೆರೆ ಹಿಡಿದಿರುವ ಮದರಿ ಗ್ರಾಮದ ಯುವ ಮುಖಂಡ ಶಿವು ಕನ್ನೊಳ್ಳಿ ತಿಳಿಸಿದ್ದಾರೆ.
ಚಿರತೆ ಕಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು ಸಾರ್ವಜನಿಕರ ಮತ್ತು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ.
ರಸ್ತೆ ಪಕ್ಕದಲ್ಲೇ ಚಿರತೆ ಪ್ರತ್ಯಕ್ಷವಾಗಿರುವುದು ರೈತರ ಆತಂಕ ಹೆಚ್ಚಿಸಿದ್ದು ತಾಲ್ಲೂಕು ಆಡಳಿತ ತೀವ್ರ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಮದರಿ ಗ್ರಾಮದ ನದಿ ತೀರದ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ: ಹೆಚ್ಚಿದ ಆತಂಕ
ಮದರಿ ಗ್ರಾಮದ ನದಿ ತೀರದ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ: ಹೆಚ್ಚಿದ ಆತಂಕ
Latest News
ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ
ಮುದ್ದೇಬಿಹಾಳ : ನಾವು ಶಿಕ್ಷಣ ಕೊಡುವ ನೆಪದಲ್ಲಿ ನಮ್ಮ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದೇವೆ.ಅವರು ಆಟಗಳಲ್ಲಿ
ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!
ವಿಜಯಪುರ : ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಿಂದ ಅ.3 ,
ಗುರು,ಹಿರಿಯರಿಗೆ ಕೊಡುವ ಗೌರವವೇ ದೇವರ ಪೂಜೆ-ನವಲಿ
ಮುದ್ದೇಬಿಹಾಳ : ಗುರು ಹಿರಿಯರಿಗೆ ಕೊಡುವ ಗೌರವವೇ ನಿಜವಾದ ದೇವರ ಪೂಜೆ ಎಂದು ಗುಡಿಹಾಳದ
ಜ.24 ರಂದು ಸಾವಿತ್ರಿ ಬಾಯಿ ಫುಲೆ ಜಯಂತಿ: ಉತ್ತಮ ಶಿಕ್ಷಕ,ಶಿಕ್ಷಕಿಯರಿಗೆ ಪ್ರಶಸ್ತಿ
ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿAದ ಸಾವಿತ್ರಿಬಾಯಿ ಫುಲೆ ಜಯಂತಿ
ಡಿಜಿಟಲ್ ಇ-ಸ್ಟ್ಯಾಂಪ್ ತರಬೇತಿ; ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ
ಮುದ್ದೇಬಿಹಾಳ : ಉಪ ನೋಂದಣಿ ಕಛೇರಿಯಲ್ಲಿ ನೋಂದಾಯಿತವಲ್ಲದ ಡಿಜಿಟಲ್ ಈ ಸ್ಟ್ಯಾಂಪಿoಗ್ ಆನ್‌ಲೈನ್‌ನಲ್ಲಿ ಸೇವೆ ಸಲ್ಲಿಸುವ ಕುರಿತು ತರಬೇತಿ ಕಾರ್ಯಕ್ರಮ ಈಚೇಗೆ ಜರುಗಿತು. ಜಿಲ್ಲಾ ನೋಂದಣಿ ಇಲಾಖೆಯ ಅಭಿಯಂತರ ಚಂದ್ರಶೇಖರ ಕೊಣ್ಣೂರ,ತಹಶೀಲ್ದಾರ್ ಕೀರ್ತಿ ಚಾಲಕ್, ಉಪ ನೋಂದಣಾಧಿಕಾರಿ ಸಚಿನ ಖೈನೂರ ಅವರು ತಿಳಿವಳಿಕೆ ನೀಡಿದರು. ದಸ್ತು ಬರಹಗಾರ ಸಂಘದ ಅಧ್ಯಕ್ಷ ಎಚ್.ಆರ್.ಬಾಗವಾನ ಮಾತನಾಡಿ, ಡಿಜಿಟಲ್ ಈ ಸ್ಟ್ಯಾಂಪ ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.ವಿಜಯಪುರ ಜಿಲ್ಲಾ ನೋಂದಣಾಧಿಕಾರಿ
ನಕ್ಕು ನಗೆಗಡಲಲ್ಲಿ ತೇಲಿಸಿ ವೈಚಾರಿಕತೆಯತ್ತ ಸೆಳೆದೊಯ್ದ ‘ಕಳ್ಳರ ಸಂತೆ’
ಶoಕರ ಈ.ಹೆಬ್ಬಾಳಮುದ್ದೇಬಿಹಾಳ : ಹೌದು.ಅಕ್ಷರಶಃ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಮುಖ ಸ್ತರದಲ್ಲಿರುವ ಹುದ್ದೆಗಳಲ್ಲಿರುವವರು ಪ್ರಾಮಾಣಿಕರೇ,ದಕ್ಷರೋ ಎಂದು ಒರೆಗಲ್ಲಿಗೆ ಹಚ್ಚಿ ನವೀರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ ಕಳ್ಳರ ಸಂತೆ ನಾಟಕ ವೈಚಾರಿಕ ಚಿಂತನೆಗೆ ಹಚ್ಚಿತು. ರಾಜ್ಯದಲ್ಲಿ ತೀವ್ರ ಬರಗಾಲ ಬಿದ್ದ ಸಮಯದಲ್ಲಿ ಅರಮನೆಯಲ್ಲಿನ ಖಜಾನೆ ಲೂಟಿಗೆ ಬರುವ ಕಳ್ಳರಿಬ್ಬರಲ್ಲಿ ಓರ್ವ ಕಳ್ಳ ತಾನು ನಂಬಿದ ವಿದ್ಯೆಯನ್ನು ತನ್ನ ಜೀವ ಉಳಿಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆ ಎಂಬುದನ್ನು ನಾಟಕ







