ಮುದ್ದೇಬಿಹಾಳ ; ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರಕಾರಿ ಹೆಣ್ಣು ಮಕ್ಕಳ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ,ಚೇತನ್ ಹಿರಿಯ ಪ್ರಾಥಮಿಕ ಶಾಲೆಗೆ ದ್ವಿತೀಯ,ಕೆಜಿಎಸ್ ನಂ.2 ಶಾಲೆಗೆ ತೃತೀಯ ಸ್ಥಾನ ಪಡೆದುಕೊಂಡರು.
ಪಥಸoಚಲನದಲ್ಲಿ ಎಸ್.ಎಸ್.ಎಂ ಪ್ರೌಢಶಾಲೆಗೆ ಪ್ರಥಮ, ಸಂತ ಕನಕದಾಸ ಶಾಲೆಗೆ ದ್ವಿತೀಯ , ರೇವಣಸಿದ್ದೇಶ್ವರ ಶಾಲೆಗೆ ತೃತೀಯ ಸ್ಥಾನ ಪಡೆದುಕೊಂಡರು.
ಬಳಬಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂಜಾ ಬಡಿಗೇರ ಹಾಗೂ ರಕ್ಕಸಗಿ ಕೆಪಿಎಸ್ ಶಾಲೆಯ ತ್ರಿವೇಣಿ ಪಾಟೀಲ ಅವರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಹಿನ್ನೆಲೆಯಲ್ಲಿ ಡಿಬಿಟಿ ಮೂಲಕ 50 ಸಾವಿರ ರೂ.ನಗದು ಹಣವನ್ನು ಅವರ ಖಾತೆಗೆ ಜಮಾ ಮಾಡಿರುವ ಕುರಿತು ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಲಾಯಿತು.







