ಸ್ಥಳ ಬದಲಿಸಿದ ಚಿರತೆ : ಹಂಡರಗಲ್ ಸೀಮೆಯಲ್ಲಿ ಪ್ರತ್ಯಕ್ಷ..!

ಸ್ಥಳ ಬದಲಿಸಿದ ಚಿರತೆ : ಹಂಡರಗಲ್ ಸೀಮೆಯಲ್ಲಿ ಪ್ರತ್ಯಕ್ಷ..!

ಮುದ್ದೇಬಿಹಾಳ : ಕಳೆದ ಒಂದು ವಾರದಿಂದ ತಾಲ್ಲೂಕಿನ ಯರಝರಿ ಗ್ರಾಪಂ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಸಂಚರಿಸುತ್ತಿರುವ ಕಾಡುಪ್ರಾಣಿಯ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿದ್ದು ಅದು ಚಿರತೆಯೇ ಎಂದು ದೃಢಪಟ್ಟಿದೆ.

ತಾಲ್ಲೂಕಿನ ಹಂಡರಗಲ್ ಗ್ರಾಮದ ಹಳ್ಳದಲ್ಲಿ ಶನಿವಾರ ಬೆಳಗ್ಗೆ ಕುರಿ ಮೇಯಿಸಲು ಹೋಗಿದ್ದ ಯರಝರಿ ಗ್ರಾಮದ ಕುರಿಗಾಹಿ ಯಲ್ಲಾಲಿಂಗ ವಾಲೀಕಾರ ಎಂಬುವರ ಕಣ್ಣಿಗೆ ಚಿರತೆ ಕಾಣಿಸಿಕೊಂಡಿದೆ. ಇದನ್ನು ಸ್ವತಃ ಯಲ್ಲಾಲಿಂಗ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಕುರಿಗಾಹಿ ಯಲ್ಲಾಲಿಂಗ ಅವರು, ‘ಬೆಳಗ್ಗೆ ಕುರಿಮೇಯಿಸಲು ಹೋದ ವೇಳೆ ಹಳ್ಳದ ಬಳಿ ಚಿರತೆ ಹೋಗಿದ್ದನ್ನು ಕಣ್ಣಾರೆ ಕಂಡಿದ್ದೇನೆ.ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.ಮಧ್ಯಮ ಗಾತ್ರದಲ್ಲಿ ಚಿರತೆ ಇದೆ’ ಎಂದು ತಿಳಿಸಿದರು.

ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಬಸನಗೌಡ ಬಿರಾದಾರ ಮಾತನಾಡಿ, ಗ್ರಾಮಸ್ಥರೊಬ್ಬರು ಚಿರತೆ ನೋಡಿದ್ದಾಗಿ ತಿಳಿಸಿದ್ದಾರೆ. ಅದರ ಸೆರೆಗೆ ಎರಡು ಬೋನುಗಳನ್ನು ಹಳ್ಳದ ದಡದಲ್ಲಿ ಇಡಲಾಗುತ್ತಿದೆ.ಚಿರತೆ ಓಡಾಡಿದ ಜಾಗೆ ಅತ್ಯಂತ ಇಕ್ಕಟ್ಟಾಗಿದ್ದು ಮುಳ್ಳುಕಂಟಿಗಳಿಂದ ಆವೃತವಾಗಿದೆ. ಕಾರ್ಯಾಚರಣೆ ಮುಂದುವರೆಸಿದ್ದೇವೆ ಎಂದು ತಿಳಿಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಚಿರತೆ ಸೆರೆಗೆ ಕಾರ್ಯಚರಣೆ ತೀವ್ರಗೊಳಿಸಲು ಸೂಚನೆ ನೀಡಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಕಂದಗನೂರು ಗ್ರಾಮದ ಭಾಗದಲ್ಲಿ ಎರಡು ಜಾನುವಾರುಗಳನ್ನು ಕೊಂದಿದ್ದ ಚಿರತೆ ಇದೀಗ ಸ್ಥಳ ಬದಲಿಸಿ ಓಡಾಡುತ್ತಿರುವುದು ಗ್ರಾಮಸ್ಥರ ನಿದ್ದೆಗಡಿಸಿದೆ.ತಾಲ್ಲೂಕು ಆಡಳಿತ ಚಿರತೆ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿವೆ.

ಕಂದಗನೂರು,ನಾಗರಾಳ, ಚಿರ್ಚನಕಲ್, ಹಂಡರಗಲ್ ಭಾಗದಲ್ಲಿ ರೈತರು ಚಿರತೆ ಭೀತಿಯಿಂದ ಹೊಲಗಳಿಗೆ ತಿರುಗಾಡುವುದನ್ನೇ ಬಿಟ್ಟು ಕೂತಿದ್ದಾರೆ. ಆದಷ್ಟು ಬೇಗ ಚಿರತೆಯನ್ನು ಪತ್ತೆ ಹಚ್ಚಬೇಕು ಎಂದು ಹಂಡರಗಲ್ ಗ್ರಾಮದ ಸಾಹೇಬಗೌಡ ಪಟೇಲ್, ಬಸವರಾಜ ನರಸಣಗಿ, ಮುತ್ತು ಕನ್ನೂರ ಆಗ್ರಹಿಸಿದ್ದಾರೆ.

Latest News

ಸಹಕಾರ ಸಪ್ತಾಹ ಸಮಾರೋಪ:                                                   ಸಹಕಾರ ತತ್ವದಿಂದ ಗ್ರಾಮೀಣರ ಆರ್ಥಿಕಾಭಿವೃದ್ಧಿ-ಬಿರಾದಾರ

ಸಹಕಾರ ಸಪ್ತಾಹ ಸಮಾರೋಪ: ಸಹಕಾರ ತತ್ವದಿಂದ ಗ್ರಾಮೀಣರ ಆರ್ಥಿಕಾಭಿವೃದ್ಧಿ-ಬಿರಾದಾರ

ಮುದ್ದೇಬಿಹಾಳ : ಸಹಕಾರ ಚಳುವಳಿಯಿಂದ ಗ್ರಾಮೀಣ ಪ್ರದೇಶದಲ್ಲಿ ರೈತರು,ದುರ್ಬಲ ವರ್ಗದವರ ಏಳ್ಗೆಗೆ ಆಸರೆಯಾಗಿದೆ ಎಂದು

ಬಸವಣ್ಣನವರ ಅವಹೇಳನ : ಬಸವಾಭಿಮಾನಿಗಳ ಆಕ್ರೋಶ

ಬಸವಣ್ಣನವರ ಅವಹೇಳನ : ಬಸವಾಭಿಮಾನಿಗಳ ಆಕ್ರೋಶ

ಮುದ್ದೇಬಿಹಾಳ : ಬಸವಣ್ಣನವರ ಬಗ್ಗೆ ಬಂದಿರುವಷ್ಟು ಸಾಹಿತ್ಯ ಬೇರೆಯವರ ಬಗ್ಗೆ ಬಂದಿಲ್ಲ.ಆದರೆ ಕೆಲವು ಕುತ್ಸಿತ

ನ.24 ರಂದು ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ

ನ.24 ರಂದು ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಹಾಗೂ

ಬಾಲಾಜಿ ಸಕ್ಕರೆ ಕಾರ್ಖಾನೆ: ಮೊದಲ ಕಂತಿನಲ್ಲೇ 3800 ರೂ.ಪಾವತಿ..!

ಬಾಲಾಜಿ ಸಕ್ಕರೆ ಕಾರ್ಖಾನೆ: ಮೊದಲ ಕಂತಿನಲ್ಲೇ 3800 ರೂ.ಪಾವತಿ..!

ಮುದ್ದೇಬಿಹಾಳ : ತಾಲೂಕಿನ ಯರಗಲ್‌ನಲ್ಲಿರುವ ಬಾಲಾಜಿ ಸಕ್ಕರೆ ಕಾರ್ಖಾನೆಯು 2026–27ನೇ ಸಾಲಿನ ಕಬ್ಬು ನುರಿಸುವ

ಬೀರಪ್ಪನ ಬೆಟ್ಟದ ದೇವಸ್ಥಾನಗಳ ಅಭಿವೃದ್ಧಿಗೆ 35 ಲಕ್ಷ ರೂ. ದೇಣಿಗೆ ; ಸಿ.ಬಿ.ಅಸ್ಕಿ ಭರವಸೆ

ಬೀರಪ್ಪನ ಬೆಟ್ಟದ ದೇವಸ್ಥಾನಗಳ ಅಭಿವೃದ್ಧಿಗೆ 35 ಲಕ್ಷ ರೂ. ದೇಣಿಗೆ ; ಸಿ.ಬಿ.ಅಸ್ಕಿ ಭರವಸೆ

ಮುದ್ದೇಬಿಹಾಳ : ಹಾಲಿ,ಮಾಜಿ ಶಾಸಕರು,ಸರ್ಕಾರಗಳಿಂದ ಬೀರಪ್ಪನ ಬೆಟ್ಟದ ದೇವಸ್ಥಾನ ಹಾಗೂ ಸಂಪರ್ಕ ರಸ್ತೆಯ ಅಭಿವೃದ್ಧಿಪಡಿಸಲು ಆಗುವುದಿಲ್ಲವೆಂದು ಘೋಷಿಸಿದರೆ ನಾನು ಸ್ವತಃ 35 ಲಕ್ಷ ರೂ.ದೇಣಿಗೆ ನೀಡಿ ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಭರವಸೆ ನೀಡಿದರು. ತಾಲ್ಲೂಕಿನ ಅಡವಿ ಹುಲಗಬಾಳದ ಬೀರಪ್ಪನ ಬೆಟ್ಟದಲ್ಲಿ ಮಂಗಳವಾರ ದೀಪಾವಳಿ ಪಾಡ್ಯದಂಗವಾಗಿ ಸಿಡಿಯಾನ ದ್ಯಾಮವ್ವ ದೇವಿ ,ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿ ವರ್ಷವೂ ಜಾತ್ರೆ ಇಲ್ಲಿ

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ; ಆಕ್ಷೇಪಣೆ ಸಲ್ಲಿಕೆಗೆ ಸೂಚನೆ

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ; ಆಕ್ಷೇಪಣೆ ಸಲ್ಲಿಕೆಗೆ ಸೂಚನೆ

ಮುದ್ದೇಬಿಹಾಳ : ಮುದ್ದೇಬಿಹಾಳ ಉಪ ನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಸ್ಥಿರಾಸ್ತಿಗಳ 2026-27ನೇ ಸಾಲಿನ ಮಾರ್ಗಸೂಚಿ ಬೆಲೆಗಳನ್ನು (ಗೈಡಲೈನ್ಸ್ ವ್ಯಾಲ್ಯೂ) ಪರಿಷ್ಕರಿಸಲಾಗಿದ್ದು, ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ನವೆಂಬರ್ 28 ಕೊನೆಯ ದಿನವಾಗಿದೆ. ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಹಶೀಲದಾರರ ಅಧ್ಯಕ್ಷತೆಯಲ್ಲಿ ನವೆಂಬರ್ 7 ರಂದು ನಡೆದ ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪಸಮೀತಿ ಸಭೆಯಲ್ಲಿ ಈ ಬೆಲೆ ಪರಿಷ್ಕರಣೆಯ ತೀರ್ಮಾನ ಕೈಗೊಳ್ಳಲಾಗಿದೆ. ಪರಿಷ್ಕೃತ ಬೆಲೆ ಪಟ್ಟಿಯ ಕರಡು