ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸರ್ಕಾರಿ ನೌಕರರ ಕ್ರಿಕೆಟ್‌ ಪಂದ್ಯಾವಳಿ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸರ್ಕಾರಿ ನೌಕರರ ಕ್ರಿಕೆಟ್‌ ಪಂದ್ಯಾವಳಿ

Ad
Ad

ಲಕ್ಷ್ಮೇಶ್ವರ: ಇಲಾಖೆಗಳಲ್ಲಿ ವರ್ಷಪೂರ್ತಿ ಕೆಲಸದ ಒತ್ತಡದಿಂದ ಕುಗ್ಗಿ ಜರ್ಜರಿತರಾದ ಸಿಬ್ಬಂದಿಗೆ ಮಾನಸಿಕವಾಗಿ ನಿರಾಳತೆ, ಸಕ್ರಿಯವಾಗಿ ತಮ್ಮ ಕರ್ತವ್ಯದಲ್ಲಿ ಉತ್ಸಾಹ, ಹುಮ್ಮಸ್ಸಿನಿಂದ ಕರ್ತವ್ಯ ನಿರ್ವಹಿಸಲು ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಲು ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಾ ದಂಡಾಧಿಕಾರಿಗಳು ಮತ್ತು ತಹಶೀಲ್ದಾರ್ ವಿ ವಾಸುದೇವ ಹೇಳಿದರು.

Ad
Ad

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪಟ್ಟಣದಲ್ಲಿ ಸರಿಕಾರಿ ವಿವಿಧ ಇಲಾಖೆಗಳ ಸಿಬ್ಬಂದಿಗಳ ಕ್ರಿಕೆಟ್‌ ಪಂದ್ಯಾವಳಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಎಲ್ಲ ಇಲಾಖೆಯ ಸಿಬ್ಬಂದಿ ಒಬ್ಬರಿಗೊಬ್ಬರು ಪರಿಚಿತರಾಗಲು ಒಳ್ಳೆಯ ಸ್ನೇಹ ಸಂಬಂಧದ ಸೇತುವೆಯಾಗಿ ಈ ಕ್ರಿಕೆಟ್ ಕ್ರಿಡೆ ಸಹಾಯವಾಗಲಿದೆ, ಜೊತೆಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಸ್ವತಃ ಲಕ್ಷ್ಮೇಶ್ವರ ತಾಲ್ಲೂಕ ತಹಶೀಲ್ದಾರ್ ಕ್ರಿಕೆಟ್ ಆಟದಲ್ಲಿ ತಮ್ಮ ಕಂದಾಯ ಇಲಾಖೆಯ ಮುಖ್ಯ ನಾಯಕರಾಗಿ ಮೈದಾನದಲ್ಲಿ ಉತ್ತಮ ಆಟ ಪ್ರದರ್ಶಿಸುವವ ತಮ್ಮ ಸಿಬ್ಬಂದಿಗೆ ಮತ್ತು ಎದುರು ಆಟಗಾರರಿಗೂ ಚಪ್ಪಳೆ ತಟ್ಟುವುದರ ಮೂಲಕ ಹುರಿದುಂಬಿಸಿ ಉತ್ಸಹ ತುಂಬುತ್ತಿದ್ದರು. ತಾಲೂಕ ಪಂಚಾಯತ ಉಪ ನಿರ್ದೇಶಕರ ಧರ್ಮಣ್ಣ ಅವರ ವೀಕ್ಷಕರ ವಿವರಣೆ (ಕಾಮೆಂಟ್ರಿ) ಉತ್ತಮವಾಗಿತ್ತು. ಮತ್ತು ಎಲ್ಲಾ ತಂಡದವರಿಗೂ ಉತ್ಸಾಹ ತುಂಬುವಂತಿತ್ತು. ಕ್ರಿಡೆ ವೀಕ್ಷಿಸುವ ವೀಕ್ಷಕರ ಮೆಚ್ಚುಗೆಯ ಮಾತುಗಳೂ ಕೇಳಿ ಬಂದವು.

ಲಕ್ಷ್ಮೇಶ್ವರ ಸಬ್ ಇನ್ಸ್‌ಪೆಕ್ಟರ್ ಈರಣ್ಣ ರಿತ್ತಿ, ತಾಲೂಕ ಪಂಚಾಯತಿ ಉಪ ನಿರ್ದೇಕರು ಧರ್ಮಣ್ಣ, ತಾಲೂಕಾ ಗ್ರೇಡ್ ಟೂ ತಹಶಿಲ್ದಾರ ಮಂಜುನಾಥ ಅಮಾಸಿ, ಉಪ ತಹಶಿಲ್ದಾರ ಕಿಮ್ಮಾಯಿ, ತಾಲೂಕಾ ಕಂದಾಯ ಇಲಾಖೆ ರಾಜಸ್ವ ಅಧಿಕಾರಿ ನಧಾಪ ಇದ್ದರು.

Latest News

ಹೋಳಿ, ರಂಜಾನ್ ಶಾಂತಿಪಾಲನಾ ಸಭೆ:ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬಾರದಂತೆ ಹಬ್ಬದಾಚರಣೆhu ಮಾಡಿ

ಹೋಳಿ, ರಂಜಾನ್ ಶಾಂತಿಪಾಲನಾ ಸಭೆ:ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬಾರದಂತೆ ಹಬ್ಬದಾಚರಣೆhu ಮಾಡಿ

ಮುದ್ದೇಬಿಹಾಳ : ಹೋಳಿ ಹಾಗೂ ರಂಜಾನ್ ಹಬ್ಬಗಳು ಶಾಂತಿ,ಸಹೋದರತೆ ಪ್ರೀತಿ ಹಾಗೂ ಸಹೋದರತೆಯ ಸಂಕೇತಗಳಾಗಿದ್ದು

ಕ್ಷೌರಿಕ ಜನಾಂಗಕ್ಕೆ ಅಪಮಾನ-ಕ್ಷಮೆಯಾಚನೆಗೆ ಆಗ್ರಹ

ಕ್ಷೌರಿಕ ಜನಾಂಗಕ್ಕೆ ಅಪಮಾನ-ಕ್ಷಮೆಯಾಚನೆಗೆ ಆಗ್ರಹ

ಮುದ್ದೇಬಿಹಾಳ : ಪಟ್ಟಣದ ಹೆಸ್ಕಾಂನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಟಿಸಿ ದುರಸ್ತಿ ಕೇಂದ್ರದ ಉದ್ಘಾಟನಾ¸ ಸಮಾರಂಭದಲ್ಲಿ

ಕುಂಟೋಜಿ ಗ್ರಾಪಂ ಮುಂದೆ ಧರಣಿ: ನಕಲಿ ದಾಖಲೆ ಸೃಷ್ಟಿಸಿ ನೇಮಕವಾದ ವಾಟರ್‌ಮನ್‌ಗಳ ವಜಾಗೆ ಆಗ್ರಹ

ಕುಂಟೋಜಿ ಗ್ರಾಪಂ ಮುಂದೆ ಧರಣಿ: ನಕಲಿ ದಾಖಲೆ ಸೃಷ್ಟಿಸಿ ನೇಮಕವಾದ ವಾಟರ್‌ಮನ್‌ಗಳ ವಜಾಗೆ ಆಗ್ರಹ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೇಮಕಗೊಂಡಿರುವ ಮೂವರು

ಜೀವನಾಂಶ ಕೇಳಿದ್ದ ಪತ್ನಿಯ ಮನವೊಲಿಕೆ: ದಂಪತಿಗಳನ್ನು ಒಂದುಗೂಡಿಸಿದ ಲೋಕಅದಾಲತ್

ಜೀವನಾಂಶ ಕೇಳಿದ್ದ ಪತ್ನಿಯ ಮನವೊಲಿಕೆ: ದಂಪತಿಗಳನ್ನು ಒಂದುಗೂಡಿಸಿದ ಲೋಕಅದಾಲತ್

ಮುದ್ದೇಬಿಹಾಳ : ಕೌಟುಂಬಿಕ ಹಿನ್ನೆಲೆಯ ದಂಪತಿಗಳಿಬ್ಬರ ಪ್ರಕರಣವನ್ನು ಇಲ್ಲಿನ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ

ಇಟಗಿ ಗ್ರಾಮದ ಶರಣಮ್ಮ ಬ. ಪಾಟೀಲ ನಿಧನ

ಇಟಗಿ ಗ್ರಾಮದ ಶರಣಮ್ಮ ಬ. ಪಾಟೀಲ ನಿಧನ

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ಶರಣಮ್ಮ ಬಸನಗೌಡ ಪಾಟೀಲ (72) ಅವರು ಬುಧವಾರ ಫೆ.12ರ ಬೆಳಗಿನ ಜಾವ ಸುಮಾರು 12:30ಕ್ಕೆ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ನಾಲ್ವರು ಮೊಮ್ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಫೆ.12ರ ಮಧ್ಯಾಹ್ನ 2 ಗಂಟೆಗೆ ಸ್ವಗ್ರಾಮ ಇಟಗಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಅಧಿಕಾರಿಗಳೇ ಗೈರು ಹಾಜರಿ

ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಅಧಿಕಾರಿಗಳೇ ಗೈರು ಹಾಜರಿ

ಬೀಳಗಿ: ನಮ್ಮೆಲ್ಲರ ಸಂಘಟಿತ ಹೋರಾಟದ ಫಲವಾಗಿ 7ನೇ ವೇತನ ಆಯೋಗ ಯಥಾವತ್ತಾಗಿ ಜಾರಿಗೆ ಬಂದಿದಲ್ಲದೆ, ನಮ್ಮ ಕುಟುಂಬ ವರ್ಗದಲ್ಲಿ ಅನಾರೋಗ್ಯಕೀಡಾದ ಸಂದರ್ಭದಲ್ಲಿ ಉಚಿತ ಚಿಕಿತ್ದೆಗಾಗಿ ಆರೋಗ್ಯ ಸಂಜವೀನಿ ಅನುಷ್ಟಾನಗೊಳಿಸಲು ಯಶಸ್ಬಿಯಾಗಿದ್ದು, 2006 ರಿಂದ ನೇಮಕಗೊಂಡ ಸರಕಾರಿ ನೌಕರರ ಹಿತ ದೃಷ್ಡಿಯಿಂದ ಸರಕಾರ ಜಾರಿಗೊಳಿಸಿದ ಎನ್ ಪಿ ಎಸ್ ರದ್ದುಗೊಳಿಸಿ ಓ ಪಿ ಎಸ್ ಜಾರಿಯಾಗಲು ಹೋರಾಟ ಮಾಡಿ ಯಶಸ್ವಿಯಾಗಲು ಪ್ರತಿಯೊಬ್ಬರು ಸಂಘಟೀತರಾಗೋಣ ಎಂದು ಕ.ರಾ.ಸ. ನೌಕರರ ಸಂಘದ ಜಿಲ್ಲಾಧ್ಯಕ್ಷ ಎಮ್.