ಮುದ್ದೇಬಿಹಾಳ : ಸಮಾಜದಲ್ಲಿ ನಡೆಯುವ ಘಟನೆಗಳನ್ನೇ ನಾಟಕಗಳು ಪ್ರತಿಬಿಂಬಿಸುತ್ತಿದ್ದು ಉತ್ತಮ ಸಂದೇಶಗಳನ್ನು ರಂಗಭೂಮಿ ಕಲೆ ಸಮಾಜಕ್ಕೆ ಪಸರಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ ಹೇಳಿದರು.
ಸಮೀಪದ ನೆರಬೆಂಚಿ ಗ್ರಾಮದ ಎಚ್ಚರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಈಚೇಗೆ ಏರ್ಪಡಿಸಿದ್ದ ದುಡ್ಡು ದಾರಿ ಬಿಡಿಸಿತು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ.ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡುವ ಕಾರ್ಯವನ್ನು ಪಾಲಕರು ಮಾಡಬೇಕು.ನಮ್ಮ ಪ್ರದೇಶ ಹಾಗೂ ದೇಶದ ಬಗ್ಗೆ ಯುವ ಜನಾಂಗ ಹೆಮ್ಮೆಯಿಂದಿರಬೇಕು ಎಂದರು.
ವೇ.ಸoಗಯ್ಯ ಹಾಲಗಂಗಾಧರಮಠ ಮಾತನಾಡಿ, ಧಾರ್ಮಿಕ ಸಮಾರಂಭಗಳು,ಜಾತ್ರೆ ಉತ್ಸವಗಳು ಸಂಬoಧಗಳನ್ನು ಪುನರಮಿಲನಗೊಳಿಸುತ್ತವೆ.ಸೌಹಾರ್ದತೆಯನ್ನು ಬೆಸೆಯುವ ಮಾರ್ಗಗಳಾಗಿವೆ ಎಂದರು.
ಗ್ಯಾರoಟಿ ಸಮೀತಿ ತಾಲ್ಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಆರ್.ಎಸ್.ಹಿರೇಗೌಡರ, ಉದ್ಯಮಿ ಸಂಜೀವ ಓಸ್ವಾಲ್, ಜೆಡಿಎಸ್ ಮುಖಂಡ ಸುರೇಶಗೌಡ ಬೆಂಗಳೂರ, ವೈದ್ಯ ಡಾ.ವಿಜಯಕುಮಾರ ಗೂಳಿ, ಗಂಗಾವತಿ ಸಮಾಜ ಕಲ್ಯಾಣ ಇಲಾಖೆಯ ಸಂಗಣ್ಣ ಜೈನಾಪೂರ, ವರ್ತಕ ಸಂಗಣ್ಣ ಹಂಪನಗೌಡ್ರ, ಗ್ರಾಪಂ ಸದಸ್ಯ ನಾಗರಾಜ ಹಳ್ಳೆಪ್ಪನವರ,ನಿವೃತ್ತ ಶಿಕ್ಷಕ ಸಂಗಣ್ಣ ವಾಲೀಕಾರ, ಗ್ರಾಪಂ ಸದಸ್ಯ ನಾಗರಾಜ ಬಿರಾದಾರ, ರುದ್ರಮ್ಮ ಬಿರಾದಾರ ಇದ್ದರು.



