ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಗೋವಾದಲ್ಲಿ ಈಚೇಗೆ ಯೂತ್ ಗೇಮ್ಸ್ ಕೌನ್ಸಿಲಿಂಗ್ ಇಂಡಿಯಾ ವತಿಯಿಂದ ನಡೆದ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ 14 ವರ್ಷದ ವಯೋಮಿತಿಯೊಳಗಿನ ಆಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ಸಂಪತ್ ಶಿಂಧೆ, ಆರ್.ಆರ್ಯ, ತನಿಷ್ ಪಾಟೀಲ್, ಸುಮಂಜಿತ್ ಪವಾರ. ಪ್ರೀತಮ ಬೆಳ್ಯಾಳ , 17 ವರ್ಷದ ವಯೋಮಿತಿಯೊಳಗೆ ಮಲ್ಲಿಕಾರ್ಜುನ ಅಸ್ಕಿ ,ಕಾರ್ತಿಕ್ ತಿಮ್ಮಾಪುರ್ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳು ನೆೆÃಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯಗುರು ಅನಿಲ್‌ಕುಮಾರ್ ರಾಥೋಡ, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಎ.ಸಿ.ಕೆರೂರ, ಎನ್.ಎಸ್.ಬಿರಾದಾರ ತಿಳಿಸಿದ್ದಾರೆ. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು,ಶಾಲಾ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಿಪಡಿಸಿದ್ದಾರೆ.



