ಸರಣಿ ಸೋಲು ತಪ್ಪಿಸಿಕೊಳ್ಳಲು ಭಾರತ ಏನು ಮಾಡಬೇಕು?

ಸರಣಿ ಸೋಲು ತಪ್ಪಿಸಿಕೊಳ್ಳಲು ಭಾರತ ಏನು ಮಾಡಬೇಕು?

ಕೊಲೊಂಬೊ: ಶ್ರೀಲಂಕಾ ವಿರುದ್ಧ 27 ವರ್ಷದಲ್ಲಿ ಮೊದಲ ಬಾರಿಗೆ ಏಕದಿನ ಸರಣಿ ಸೋಲುವ ಭೀತಿಗೆ ಭಾರತ ತಂಡ ಸಿಲುಕಿದ್ದು, ಬುಧವಾರ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿದೆ.

ಕೋಚ್ ಆಗಿ ನೇಮಕಗೊಂಡ ಬಳಿಕ ಗೌತಮ್ ಗಂಭೀರ್ ಮೊದಲ ಏಕದಿನ ಸರಣಿ ಇದು. 2025ರ ಚಾಂಪಿಯನ್ ಟ್ರೋಫಿಗೆ ಆಟಗಾರರನ್ನು ಗುರುತಿಸಲು ಎದುರು ನೋಡುತ್ತಿರುವ ಅವರಿಗೆ ಇದು ಸಹಜವಾಗಿಯೇ ಉತ್ತಮ ಆರಂಭ ಎನಿಸಿಲ್ಲ. ಹೀಗಾಗಿ, 3ನೇ ಪಂದ್ಯದಲ್ಲಿ ತಂಡದಿಂದ ಸುಧಾರಿತ ಪ್ರದರ್ಶನವನ್ನು ಗಂಭೀರ್ ನಿರೀಕ್ಷೆ ಮಾಡುತ್ತಿದ್ದಾರೆ.

ಭಾರತ ಕೊನೆಯ ಬಾರಿಗೆ ಲಂಕಾ ವಿರುದ್ಧ ಏಕದಿನ ಸರಣಿ ಸೋತಿದ್ದು 1997ರಲ್ಲಿ. ಅರ್ಜುನ ರಣತುಂಗಾ ನೇತೃತ್ವದ ಲಂಕಾ ತಂಡ ಭಾರತವನ್ನು 0-3ರಲ್ಲಿ ಮಣಿಸಿತ್ತು. ಆ ಬಳಿಕ ಉಭಯ ತಂಡಗಳ ನಡುವೆ ಎರಡೂ ದೇಶಗಳಲ್ಲಿ ಒಟ್ಟು 13 ಏಕದಿನ ಸರಣೆಗಳು ನಡೆದಿದ್ದು, ಭಾರತ ಸೋತೇ ಇಲ್ಲ.

ಈ ಸರಣಿಯ ಮೊದಲ ಪಂದ್ಯ ಟ್ರೈ ಆದ ಬಳಿಕ, 2ನೇ ಪಂದ್ಯದಲ್ಲಿ ಭಾರತ 32 ರನ್‌ ಗಳಿಂದ ಸೋತಿತ್ತು. ಸರಣಿ ಸೋಲು ತಪ್ಪಿಸಲು ಈ ಪಂದ್ಯ ಗೆದ್ದು, ಸರಣಿ ಡ್ರಾ ಮಾಡಿಕೊಳ್ಳಲು ಒತ್ತಡದಲ್ಲಿ ರೋಹಿತ್ ಪಡೆ ಇದೆ. ಇದಕ್ಕಾಗಿ, ಭಾರತೀಯ ಬ್ಯಾಟರ್‌ಗಳ ಮೇಲೆ ಭಾರಿ ಒತ್ತಡ ಇದೆ.

Latest News

ಯಲಗೂರ ಕ್ರಾಸ್‌ನ ಹೋರಾಟಕ್ಕೆ ಡಿಸಿ,ಎಸ್ಪಿ ಭೇಟಿ:                         ದರ ಘೋಷಿಸಿದ ನಂತರವೇ ಕಾರ್ಖಾನೆ ಆರಂಭ-ಡಿಸಿ ಡಾ.ಆನಂದ್

ಯಲಗೂರ ಕ್ರಾಸ್‌ನ ಹೋರಾಟಕ್ಕೆ ಡಿಸಿ,ಎಸ್ಪಿ ಭೇಟಿ: ದರ ಘೋಷಿಸಿದ ನಂತರವೇ ಕಾರ್ಖಾನೆ ಆರಂಭ-ಡಿಸಿ ಡಾ.ಆನಂದ್

ವಿಜಯಪುರ : ಯಾವುದೇ ಕಾರ್ಖಾನೆ ದರ ನಿಗದಿಪಡಿಸದೇ ಚಾಲನೆ ಮಾಡಬಾರದು ಎಂದು ಕಬ್ಬು ಬೆಳಗಾರರ

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಅ.

ರಾಷ್ಟ್ರೀಯ ಹೆದ್ದಾರಿ 50-ಸ್ತಬ್ಧ :                                               ರೈತರು ಯಾರ ಗುಲಾಮರೂ ಅಲ್ಲ- ಶಾಂತಗೌಡ ಪಾಟೀಲ್

ರಾಷ್ಟ್ರೀಯ ಹೆದ್ದಾರಿ 50-ಸ್ತಬ್ಧ : ರೈತರು ಯಾರ ಗುಲಾಮರೂ ಅಲ್ಲ- ಶಾಂತಗೌಡ ಪಾಟೀಲ್

ವಿಜಯಪುರ : ಕಬ್ಬಿನ ಎಂ.ಎಸ್.ಪಿ ದರ ಹೆಚ್ಚಳ,ಕೇಂದ್ರ ಸರ್ಕಾರ ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೇನಾಲ್‌ನ್ನು ಖರೀದಿಸುವುದು

ಕಬ್ಬು ಬೆಳೆಗಾರರ ಜೊತೆ ಕೇಂದ್ರದ ಚರ್ಚೆ ವಿಫಲ:              ಅ.13 ರಿಂದ ನಿಡಗುಂದಿ-ಆಲಮಟ್ಟಿ ಹೈವೆಯಲ್ಲಿ ರಸ್ತೆ ತಡೆ

ಕಬ್ಬು ಬೆಳೆಗಾರರ ಜೊತೆ ಕೇಂದ್ರದ ಚರ್ಚೆ ವಿಫಲ: ಅ.13 ರಿಂದ ನಿಡಗುಂದಿ-ಆಲಮಟ್ಟಿ ಹೈವೆಯಲ್ಲಿ ರಸ್ತೆ ತಡೆ

ವಿಜಯಪುರ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅ.13ರಿಂದ ನಿಡಗುಂದಿ-ಆಲಮಟ್ಟಿ ರಾಷ್ಟ್ರೀಯ

‘ಕುತಂತ್ರಿ ನೀವು ಎನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದೇನೆ,ನನ್ನ ಬಗ್ಗೆ ನೀವು ಸಾಕ್ಷಿ ಕೊಡಿ’

‘ಕುತಂತ್ರಿ ನೀವು ಎನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದೇನೆ,ನನ್ನ ಬಗ್ಗೆ ನೀವು ಸಾಕ್ಷಿ ಕೊಡಿ’

ಮುದ್ದೇಬಿಹಾಳ : ಕೆರೆಗಳನ್ನು ತುಂಬಿಸಲು,ಕುಡಿಯುವುದಕ್ಕೆAದು ನಾಲ್ಕು ಟಿಎಂಸಿ ನೀರು ಹರಿಸಬೇಕು ಎಂದು ಕಾನೂನು ಬದ್ಧವಾದ ಆದೇಶ ಇದೆ.ಆದರೆ ಇವರು ಅರ್ಧ ಟಿಎಂಸಿ ಮಾತ್ರ ನೀರು ಹರಿಸುತ್ತಿದ್ದಾರೆ.ಶಾಸಕ ನಾಡಗೌಡರು ಎಲ್ಲ ಕೆರೆಗಳನ್ನು ತುಂಬಿಸುವ ಕುರಿತು ಐಸಿಸಿ ಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು. ಪಟ್ಟಣದ ತಮ್ಮ ದಾಸೋಹ ನಿಲಯದ ಆವರಣದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆರೆಗಳಿಗೆ ನೀರು

ವಣಕಿಹಾಳ ಗ್ರಾಮದಲ್ಲಿ ಘಟನೆ :                                                   ವಿದ್ಯುತ್ ಶಾಟ್ ಸರ್ಕಿಟ್: 12 ಎಕರೆಗೆ ಕಬ್ಬು ಬೆಂಕಿಗೆ ಆಹುತಿ

ವಣಕಿಹಾಳ ಗ್ರಾಮದಲ್ಲಿ ಘಟನೆ : ವಿದ್ಯುತ್ ಶಾಟ್ ಸರ್ಕಿಟ್: 12 ಎಕರೆಗೆ ಕಬ್ಬು ಬೆಂಕಿಗೆ ಆಹುತಿ

ಮುದ್ದೇಬಿಹಾಳ : ವಿದ್ಯುತ್ ಶಾಟ್ ಸರ್ಕಿಟ್‌ನಿಂದಾಗಿ ಹನ್ನೆರಡು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿನ ಬೆಳೆ ಹಾನಿಯಾಗಿರುವ ಘಟನೆ ತಾಲ್ಲೂಕಿನ ವಣಕಿಹಾಳ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ವಣಕಿಹಾಳ ಗ್ರಾಮದ ಶಾಂತಗೌಡ ಬಿರಾದಾರಗೆ ಸೇರಿದ 3.32 ಎಕರೆ,ಗೀತಾ ಬಿರಾದಾರಗೆ ಸೇರಿದ 2.02 ಎಕರೆ , ಶಿವನಗೌಡ ಬಿರಾದಾರಗೆ ಸೇರಿದ 4 ಎಕರೆ,ನಾಗಪ್ಪ ಹುಮನಾಬಾದ ಅವರಿಗೆ ಸೇರಿದ 5.10 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ.