ಮುದ್ದೇಬಿಹಾಳ : ಎಳ್ಳ ಅಮವಾಸ್ಯೆಯ ನಿಮಿತ್ಯ ಶುಕ್ರವಾರ ತಾಲ್ಲೂಕಿನೆಲ್ಲೆಡೆ ರೈತರು ಸಂಭ್ರಮದಿAದ ಚರಗ ಚೆಲ್ಲಿದರು.
ಬೆಳಗ್ಗೆಯಿಂದಲೇ ಚಕ್ಕಡಿ,ಟ್ರಾö್ಯಕ್ಟರ್, ಜೀಪು,ಕಾರು,ಬೈಕುಗಳಲ್ಲಿ ತಮ್ಮ ಹೊಲಗಳಿಗೆ ತೆರಳಿದ ರೈತರು ಭೂಮಿ ತಾಯಿಗೆ ಪೂಜೆ ಸಲ್ಲಿಸಿದರು.ಬಳಿಕ ವಿವಿಧ ಖಾದ್ಯಗಳನ್ನು ಚರಗದೂಟದಲ್ಲಿ ಸವಿದರು.ಜೋಳ,ಕಡಲೆ,ಕಬ್ಬು,ಸೂರ್ಯಕಾಂತಿ ಬೆಳೆಗಳು ಹೊಲದಲ್ಲಿದ್ದು ರೈತರು ತುಸು ಮಂದಹಾಸದಿAದ ಈ ವರ್ಷದ ಚರಗ ಚೆಲ್ಲಿದರು.
ಮುದ್ದೇಬಿಹಾಳ ತಾಲ್ಲೂಕಿನ ಗೆದ್ದಲಮರಿಯ ರೈತ ಮಹದೇವಪ್ಪ ಕನ್ನೂರ ಅವರ ಹೊಲದಲ್ಲಿ ಅವರ ಸ್ನೇಹಿತರು, ಚರಗ ಚೆಲ್ಲಿದರು.ಪೊಲೀಸ್ ಇಲಾಖೆಯ ಪ್ರಕಾಶ ಪೂಜಾರಿ, ಪತ್ರಕರ್ತರಾದ ಶಂಕರ ಹೆಬ್ಬಾಳ, ಗುಲಾಮಮೊಹ್ಮದ ದಫೇದಾರ, ರೇವಣಸಿದ್ದ ನಾಯಕ, ಕನ್ನೂರ ಕುಟುಂಬದ ಮುತ್ತು ಕನ್ನೂರ, ಮಾಳಪ್ಪ ಕನ್ನೂರ, ವಿಷ್ಣು ದಾಸರ,ಅರುಣ ದಾಸರ ಮೊದಲಾದವರು ಇದ್ದರು.






