ಇಳಕಲ್: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಿಕನಾಳ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ಬಾಲಪ್ಪ ಬಂಡಿ (13), ಷಣ್ಮುಖಪ್ಪ ತಿಪ್ಪಣ್ಣವರ (30) ಮೃತರು.
ಹೊಲಕ್ಕೆ ಹೋಗುತ್ತಿದ್ದ ವೇಳೆ ಕಾಲು ಜಾರಿ ಬಿದ್ದ ಬಾಲಕ ಮಂಜುನಾಥನ ರಕ್ಷಣೆಗೆ ಹೋಗಿದ್ದ ಯುವಕ ಷಣ್ಮುಖಪ್ಪನೂ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ಯುವಕ ಷಣ್ಮುಖಪ್ಪ ಚಿಕನಾಳ ಗ್ರಾಮದ ನಿವಾಸಿ. ಬಾಲಕ ಮಂಜುನಾಥ್ ಕೊಪ್ಪಳ ಜಿಲ್ಲೆ ಬಳೂಟಗಿ ಗ್ರಾಮದ ನಿವಾಸಿ.
ಇಬ್ಬರು ಮೃತದೇಹ ಹೊರಗೆ ತೆಗೆಯಲಾಗಿದೆ. ಅಮೀನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.