ಚಿಕ್ಕಬಳ್ಳಾಪುರ: ಅಂಗನವಾಡಿ ಕೇಂದ್ರದಲ್ಲಿನ ಪೌಷ್ಟಿಕ ಆಹಾರದ ಬೆಲ್ಲದ ಪಾಕೆಟ್ ನಲ್ಲಿ ಸತ್ತ ಇಲಿ (dead rat in anganawadi food) ಪತ್ತೆಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಗರುಡಾಚಾರ್ಲಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬೆಳಕಿಗೆ ಬಂದಿದೆ.
ಮಕ್ಕಳಿಗೆ ವಿತರಿಸುವ ಪೌಷ್ಟಿಕ ಆಹಾರದ ಜೊತೆಗೆ ಬೆಲ್ಲದ ಪೌಡರ್ ಪಾಕೆಟ್ ಸಹ ಕೊಡಲಾಗುತ್ತದೆ. ಆದರೆ ಗ್ರಾಮದ ರತ್ನಮ್ಮ ಹಾಗೂ ರಾಜು ಎಂಬುವವರ ಮನೆ ಮಕ್ಕಳಿಗೆ ಅಂಗನವಾಡಿ ಕೇಂದ್ರದಿಂದ ವಿತರಿಸಿದ್ದ ಬೆಲ್ಲದ ಪುಡಿಯ ಪಾಕೆಟ್ ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಹಲವು ದಿನಗಳಿಂದ ಬೆಲ್ಲದ ಪುಡಿಯನ್ನ ಹಾಲಿಗೆ ಹಾಕಿ ಮಕ್ಕಳಿಗೆ ಕೊಟ್ಟು ಬಳಸಿದ್ದು, ಅರ್ಧ ಬಳಸಿದ ನಂತರ ಪಾಕೆಟ್ ನಲ್ಲಿ ಸತ್ತು ಕೊಳೆತಿರುವ ಇಲಿ (dead rat in anganawadi food) ಪತ್ತೆಯಾಗಿರೋದ್ರಿಂದ ಆತಂಕಗೊಂಡಿದ್ದಾರೆ.
Join Our Telegram: https://t.me/dcgkannada
ಅದೃಷ್ಟವಶಾತ್ ಸದ್ಯ ಮಕ್ಕಳಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕಳಪೆ ಗುಣಮಟ್ಟದ ಪೌಷ್ಟಿಕ ಆಹಾರ ವಿತರಸುತ್ತಿದ್ದಾರೆ ಅನ್ನೋ ಆರೋಪ ಪದೇಪದೇ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಬೆಲ್ಲದ ಪುಡಿಯ ಪಾಕೆಟ್ ನಲ್ಲಿ ಸತ್ತ ಇಲಿ ಪತ್ತೆಯಾಗಿರೋದು ಕಳಪೆ ಆಹಾರ ವಿತರಣೆಗೆ ಸಾಕ್ಷಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಎಲ್ಲಂಪಲ್ಲಿ ಎಂಎಸ್,ಪಿ,ಸಿ ಆಹಾರ ಘಟಕದಿಂದ ಬೆಲ್ಲದ ಪುಡಿ ಪೂರೈಕೆಯಾಗಿದ್ದು, ಎಂ.ಎಸ್.ಪಿ.ಸಿ. ಘಟಕದ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇಷ್ಟೇ ಅಲ್ಲದೆ ಸತ್ತ ಇಲಿ ಇದ್ದ ಬೆಲ್ಲ ಬಳಸಿ ಮಕ್ಕಳಿಗೆ ಏನಾದರೂ ಹೆಚ್ಚೂ ಕಡಿಮೆಯಾಗಿದ್ರೆ ಯಾರು ಹೊಣೆ ಅಂತ ಮಕ್ಕಳ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಮೊನ್ನೆಯಷ್ಟೆ ಕೊಪ್ಪಳ ಜಿಲ್ಲೆಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಮೊಟ್ಟೆ ಬಡಿಸಿ, ವಿಡಿಯೋ ಮಾಡಿ ತದನಂತರ ಬಡಿಸಿದ್ದ ಮೊಟ್ಟೆಗಳನ್ನು ಮಕ್ಕಳ ತಟ್ಟೆಯಿಂದ ತೆಗೆದುಕೊಂಡಿದ್ದ ಅಂಗನವಾಡಿಯ ಸಹಾಯಕಿ ಮತ್ತು ಕಾರ್ಯಕರ್ತೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಮಾನತು ಮಾಡಿದ್ದರು.
ಇದನ್ನೂ ಓದಿ: Suicide: ಪತ್ನಿಯ ಕಿರುಕುಳ.. ಸರ್ಕಾರಿ ನೌಕರ ಆತ್ಮಹತ್ಯೆ..!
ಈಗ ಬೆಲ್ಲದ ಪೊಟ್ಟಣದಲ್ಲಿ ಇಲಿ ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಸಚಿವೆ ಹೆಬ್ಬಾಳ್ಕರ್ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.