ಮುದ್ದೇಬಿಹಾಳ : ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎನ್.ಎಸ್.ಯೂ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಖರ್ಗೆಯವರು ತಮ್ಮ ಪತ್ರದಲ್ಲಿ ಎಲ್ಲಿಯೂ ಆರ್.ಎಸ್.ಎಸ್ ನಿಷೇಧಿಸಬೇಕು ಎಂದು ಹೇಳಿರಲಿಲ್ಲ.ಆದರೆ ಆ ಸಂಘಟನೆಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ತಿಳಿಸಿದ್ದರು.ಇದರ ಬಳಿಕ ಕೆಲವರು ಸಚಿವ ಖರ್ಗೆ ಅವರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿರುವುದು ಖಂಡನೀಯ ಎಂದು ಹೇಳಿದರು.
ಆರ್.ಎಸ್.ಎಸ್ ನವರು ಸ್ವಾತಂತ್ರö್ಯ ಬಂದ ಬಳಿಕವೂ 52 ವರ್ಷಗಳ ಕಾಲ ತಮ್ಮ ಕಚೇರಿ ಮೇಲೆ ಭಾರತದ ರಾಷ್ಟçಧ್ವಜ ಹಾರಿಸಿರಲಿಲ್ಲ.ಇಂತಹ ಕೋಮುವಾದಿ ಸಂಘಟನೆಯವರು ದೇಶಪ್ರೇಮದ ಕುರಿತು ಮುಗ್ಧ ಜನರಲ್ಲಿ ಉಪದೇಶ ಮಾಡುತ್ತಿದ್ದಾರೆ.ಆರ್.ಎಸ್.ಎಸ್ ಒಂದೇ ಅಲ್ಲದೇ ಇನ್ನೀತರ ಖಾಸಗಿ ಸಂಘ,ಸAಸ್ಥೆಯ ಚಟುವಟಿಕೆಗಳಿಗೆ ಸರ್ಕಾರಿ ಜಾಗೆಯಲ್ಲಿ ಆಸ್ಪದ ನೀಡಬಾರದು ಎಂದು ರಾಜ್ಯ ಸರ್ಕಾರ ಆದೇಶಿಸಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಸಿ.ಜಿ.ವಿಜಯಕರ್ ಮಾತನಾಡಿ, ಆರ್.ಎಸ್.ಎಸ್ ನಲ್ಲಿ ಕೇಂದ್ರ ಮಂತ್ರಿ ಜೋಷಿ, ಬಿಜೆಪಿ ವಿಪಕ್ಷ ನಾಯಕ ಅಶೋಕ ಅವರಂತಹ ಹಿರಿಯ ನಾಯಕರ ಮಕ್ಕಳು ಭಾಗಿಯಾಗುವುದಿಲ್ಲ.ಹಿಂದುಳಿದವರು,ದಲಿತರ ಮಕ್ಕಳನ್ನೇ ಇವರು ಟಾರ್ಗೆಟ್ ಮಾಡುತ್ತಾರೆ ಎಂದು ಆರೋಪಿಸಿದರು.
ಜಗದೀಶ ಶೆಟ್ಟರ ಸಿಎಂ ಇದ್ದಾಗಲೇ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ,ಸAಸ್ಥೆಗಳ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಕಡ್ಡಾಯ ಎಂದು ಆದೇಶ ಹೊರಡಿಸಿದ್ದನ್ನು ತಪ್ಪಾಗಿ ಭಾವಿಸಿರುವವರು ವಿನಾಕಾರಣ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡ ರಾಜು ರಾಯಗೊಂಡ, ಶ್ರೀಕಾಂತ ಚಲವಾದಿ, ಮಹ್ಮದರಫೀಕ ಶಿರೋಳ,ಸಿಕಂದರ ಜಾನ್ವೇಕರ,ಮುತ್ತು ಚಲವಾದಿ,ರಾಮಣ್ಣ ನಾಯ್ಕಮಕ್ಕಳ,ಜಾಕೀರ ಮೂಲಿಮನಿ,ಸಮೀರ ದ್ರಾಕ್ಷಿ ಇದ್ದರು.







