ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ ಆರಂಭಿಸಲು ಪ್ರಸ್ತಾವನೆ ಕಳಿಸಲಾಗಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ತಾಲ್ಲೂಕಿನ ಬಿದರಕುಂದಿ ಗ್ರಾಮದ ಆರ್.ಎಂ.ಎಸ್.ಎ ಶಾಲೆಯ ಹತ್ತಿರ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಂ-೨ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕ್ಷೇತ್ರದಲ್ಲಿ ಆರ್.ಎಂ.ಎಸ್.ಎ ಶಾಲೆ, ಮಹಿಳಾ ಹಾಸ್ಟೆಲ್,ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗಳು ನಿರ್ಮಾಣವಾಗಿದ್ದು ಇದೊಂದು ವಿದ್ಯಾಗಿರಿ ಎಂದು ನಾಮಕರಣ ಮಾಡುವಂತೆ ಗ್ರಾಪಂ ಅಧ್ಯಕ್ಷರಿಗೆ ಮನವಿ ಮಾಡಿದರು.ಶಿಕ್ಷಣವೆಂಬುದು ಶಕ್ತಿ.ನಾವೆಲ್ಲ ಮಕ್ಕಳಿಗೋಸ್ಕರ ಮಾಡುವ ಆಸ್ತಿ ಶಾಶ್ವತವಲ್ಲ.ವಿದ್ಯೆ ಶಾಶ್ವತವಾಗಿ ಉಳಿಯುವ ಸಾಧನ ಎಂದರು.
ಸನ್ ೨೦೧೭-೧೮ ರಲ್ಲಿ ಶಾಲೆ ಆರಂಭವಾಗಿದೆ. ೨೦೨೨-೨೩ ರಲ್ಲಿ ಕಾಮಗಾರಿಗೆ ಆದೇಶ ನೀಡಿದ್ದು ೨೦೨೫-೨೦೨೬ ರಲ್ಲಿ ಮುಗಿದಿದೆ.ಬರಲಿರುವ ದಿನಗಳಲ್ಲಿ ೮೬೦ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯಲಿದ್ದಾರೆ.ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಜೊತೆಗೆ ಮಾತನಾಡಿದ್ದು ಕನಿಷ್ಠ ೧೦ ಕೋಟಿ ರೂ.ನೀಡುವಂತೆ ಬೇಡಿಕೆ ಇರಿಸಿದ್ದೇನೆ ಎಂದರು,
ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಶ್ರದ್ಧೆ,ವಿಶ್ವಾಸದಿಂದ ನಡೆದುಕೊಳ್ಳಬೇಕು.ಗುರು ಶಿಷ್ಯರ ಸಂಬoಧ ಸೌಹಾರ್ದ ಆಗಿದ್ದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಶಿಕ್ಷಣ ಶಿಕ್ಷೆ ಆಗಬಾರದು ಎಂದರು.
ಕಾAಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ್ ಮಾತನಾಡಿ, ಅಲ್ಪಸಂಖ್ಯಾತರು,ಹಿoದುಳಿದವರು,ದಲಿತರ ಮಕ್ಕಳು ಶಿಕ್ಷಣವಂತರಾಗಬೇಕು.ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಮಾಡಿಕೊಳ್ಳಬೇಕು ಎಂದರು.
ಅಲ್ಪಸoಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ,ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಚಾರ್ಯ ಖೇಮು ರಾಠೋಡ,ನಿವೃತ್ತ ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರ,ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯ ನಿರ್ದೇಶಕ ಸುರೇಶಗೌಡ ಪಾಟೀಲ ಇಂಗಳಗೇರಿ,ಸoಗನಗೌಡ ಬಿರಾದಾರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ರಾಜು ಕಲ್ಬುರ್ಗಿ,ವಕೀಲರಾದ ಎಂ.ಎ.ಮುದ್ದೇಬಿಹಾಳ,ಎನ್.ಆರ್.ಗುರಿಕಾರ,ಎo.ಎo.ಬೆಳಗಲ್,ಟ್ರಿನಿಜ್ ಗ್ರೂಪ್‌ನ ಪ್ರವೀಣ ನಾಯಕ, ರವಿ ನಾಯಕ,ಈರಣಗೌಡ ಪಾಟೀಲ,ವೆಂಕಟೇಶ ನಾಯಕ,ಗೋಪಿ ಮಡಿವಾಳರ ಮೊದಲಾದವರು ಇದ್ದರು.







