A teacher who arranged a bus to the last village of the district

ಜಿಲ್ಲೆಯ ಕೊನೆಯ ಗ್ರಾಮಕ್ಕೂ ಬಸ್ ವ್ಯವಸ್ಥೆ ಮಾಡಿಸಿದ ಶಿಕ್ಷಕ

ಜಿಲ್ಲೆಯ ಕೊನೆಯ ಗ್ರಾಮಕ್ಕೂ ಬಸ್ ವ್ಯವಸ್ಥೆ ಮಾಡಿಸಿದ ಶಿಕ್ಷಕ

ಕೊಡೇಕಲ್ಲ : ಯಾದಗಿರಿ ಜಿಲ್ಲೆಯ ಕಟ್ಟ ಕಡೆಯ ಗ್ರಾಮ ಬಸ್ಸಾಪುರ. ಈ ಗ್ರಾಮವು ಇಲ್ಲಿಯವರೆಗೆ ಬಸ್ಸಿನ ಮುಖವನ್ನೇ ನೋಡಿರಲಿಲ್ಲ. ಗ್ರಾಮದ ಜನರಿಗೆ ಹಾಗೂ ಮುಂದಿನ ಶಿಕ್ಷಣಕ್ಕಾಗಿ ಮಕ್ಕಳಿಗೆ ಬೇರೆ ಗ್ರಾಮಕ್ಕೆ ಹೋಗಿ ಬರಲು ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತುಂಬಾ ತೊಂದರೆಯಾಗಿತ್ತು.

ಇದನ್ನು ಗಮನಿಸಿದ ಶಿಕ್ಷಕರಾದ ಶ್ರೀ ನೀಲಪ್ಪ ತೆಗ್ಗಿಯವರು, ಗ್ರಾಮಸ್ಥರ ಸಹಕಾರದಿಂದ ಘಟಕ ವ್ಯವಸ್ಥಾಪಕರು ಸುರಪುರ ಇವರಿಗೆ ಮನವಿಯನ್ನು ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಘಟಕ ವ್ಯವಸ್ಥಾಪಕರು ಕೇವಲ 15 ದಿನಗಳಲ್ಲಿ ಬಸ್ಸಾಪುರ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆಯನ್ನು ಮಾಡಿದರು. ಹೀಗಾಗಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು, ವಿಶೇಷವಾಗಿ ಬೇರೆ ಗ್ರಾಮದಲ್ಲಿ ಶಾಲೆಗೆ ದಾಖಲಾದ ಹೆಣ್ಣು ಮಕ್ಕಳು ಬಹಳಷ್ಟು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಘಟಕ ವ್ಯವಸ್ಥಾಪಕರಾದ ಶ್ರೀ ಭೀಮಪ್ಪ ರಾಠೋಡ ಮತ್ತು ಸಂಗಮೇಶ ದಳವಾಯಿ ಸರ್ ಅವರಿಗೆ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಬಸ್ಸನ್ನು ಟೆಂಗಿನ ಗರಿಗಳಿಂದ ಅಲಂಕಾರಿಸಿ ಪೂಜೆ ಮಾಡುವಲಾಯಿತು. ಹಾಗೂ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಇವರಿಗೆ ‌ಶಾಲು ಹಾಗೂ ಹಾರ ಹಾಕುವ ಮೂಲಕ ಸನ್ಮಾನಿಸಲಾಯಿತು.
ಗ್ರಾಮಕ್ಕೆ ಬಸ್ಸು ಬರಲು ಸತತ ಪ್ರಯತ್ನ ಮಾಡಿದ ಶ್ರೀ ನೀಲಪ್ಪ ತೆಗ್ಗಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಊರಿನ ಮುಖಂಡರಾದ ನಿಂಗಪ್ಪ ಕೊಂಡೇಕಾರ, ನೀಲಕಂಠ ಕೊಂಡೇಕಾರ, ಸಿದ್ದಪ್ಪ ಬಿರಾದಾರ, ಶಂಕ್ರಪ್ಪ ಕೊಂಡೇಕಾರ, ಸುರೇಶ ಬಿರಾದಾರ, ಪವನ್ ಕೊಂಡೇಕಾರ, ಯಮನಪ್ಪ ಜೈನಾಪುರ ಹಾಗೂ ಇತರರು ಉಪಸ್ಥಿತರಿದ್ದರು.

ಈ ಗ್ರಾಮದ ಜನರು ರೈತರು ಮತ್ತು ಕೂಲಿ ಕೆಲಸಗಾರರು. ಇವರು ತಮ್ಮ ಮಕ್ಕಳನ್ನು ಮುಂದಿನ ಶೈಕ್ಷಣಕ್ಕಾಗಿ ಹೆಚ್ಚಿನ ಹಣವನ್ನು ನೀಡಿ ಹಾಸ್ಟೆಲ್ ಇರುವ ಶಾಲೆಗಳಿಗೆ, ಇಲ್ಲವೆ ತಮ್ಮ ಸಂಬಂಧಿಕರು ಇರುವ ಊರುಗಳಲ್ಲಿನ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ನಾನು ಹೇಗಾದರೂ ಮಾಡಿ ಈ ಊರಿಗೆ ಬಸ್ಸಿನ ವ್ಯವಸ್ಥೆ ಮಾಡಲೇಬೇಕು ಎಂದು ನಿರ್ಧರಿಸಿದೆನು. ಗ್ರಾಮಸ್ಥರ ಸಹಕಾರದಿಂದ ಮನವಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಈ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಮಾಡಿದ ಘಟಕ ವ್ಯವಸ್ಥಾಪಕರಾದ ಶ್ರೀ ಭೀಮಪ್ಪ ರಾಠೋಡ ಸಾಹೇಬರಿಗೆ ಹಾಗೂ ಶ್ರೀ ಸಂಗಣ್ಣ ದಳವಾಯಿ ಸರ್ ಅವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಶ್ರೀ ನೀಲಪ್ಪ ತೆಗ್ಗಿ ಶಿಕ್ಷಕರು ಬಸ್ಸಾಪೂರ

ನಮ್ಮೂರಿಗೆ ಬಸ್ಸಿನ ಅವಶ್ಯಕತೆ ಬಹಳಷ್ಟು ಇತ್ತು. ನಮ್ಮೂರ ಶಿಕ್ಷಕರಾದ ಶ್ರೀ ನೀಲಪ್ಪ ತೆಗ್ಗಿ ಇವರ ಸತತ ಪ್ರಯತ್ನದಿಂದಾಗಿ, ನಮ್ಮೂರಿಗೆ ಇಂದು ಬಸ್ಸಿನ ವ್ಯವಸ್ಥೆಯಾಗಿದೆ. ಅದಕ್ಕಾಗಿ ಶಿಕ್ಷಕರಾದ ಶ್ರೀ ನೀಲಪ್ಪ ತೆಗ್ಗಿ ಸರ್ ಇವರಿಗೆ ನಮ್ಮ ಮಕ್ಕಳ ಮತ್ತು ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ. ಶ್ರೀ ನಿಂಗಪ್ಪ ಕೊಂಡೇಕಾರ. ಶ್ರೀ ನೀಲಕಂಠ ಕೊಂಡೇಕಾರ. ಬಸ್ಸಾಪೂರ.

ಬಸ್ ಬರುವ ಸಮಯ: ಹುಣಸಗಿ ಯಿಂದ ಹೊರಟು ಕೊಡೇಕಲ್ಲ, ಮಾರನಾಳ, ಯಣ್ಣೀವಡಗೇರಿಯಿಂದ ಒಳಗಡೆ 4 ಕಿಲೋ ಮೀಟರ್ ದೂರದಲ್ಲಿರುವ ಬಸ್ಸಾಪೂರಕ್ಕೆ ಬೆಳಿಗ್ಗೆ 7. 30 ಕ್ಕೆ ಹಾಗೂ ಸಾಯಂಕಾಲ 4.30 ಕ್ಕೆ ಬಂದು ನಾಲತ್ವಾಡಕ್ಕೆ ಹೊಗುತ್ತದೆ.

ವರದಿಗಾರ : ಶಿವು ರಾಠೋಡ

Latest News

JavaScript isn’t montys millions slot free spins readily available

ArticlesTotally free Revolves | montys millions slot free spinsTrendy Fruits Slot

ಕೆಲವು ಸ್ವಾಮೀಜಿಗಳು ಮಾತನಾಡಿದಂತೆ ನಡೆದುಕೊಳ್ಳುವುದಿಲ್ಲ-ಮಹಾಂತೇಶ ಬಿರಾದಾರ

ಕೆಲವು ಸ್ವಾಮೀಜಿಗಳು ಮಾತನಾಡಿದಂತೆ ನಡೆದುಕೊಳ್ಳುವುದಿಲ್ಲ-ಮಹಾಂತೇಶ ಬಿರಾದಾರ

ಮುದ್ದೇಬಿಹಾಳ : ಕೆಲವು ಸ್ವಾಮೀಜಿಗಳಿರುತ್ತಾರೆ.ಜನರಿಗೆ ತಾವು ಯೂಟ್ಯೂಬ್ , ಸೋಷಿಯಲ್ ಮೀಡಿಯಾದಲ್ಲಿ ಪುಕ್ಕಟೆ ಉಪದೇಶ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ಮುದ್ದೇಬಿಹಾಳ : ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಪಾಲಿಸಬೇಕು ಎಂದು ಪಿಎಸ್‌ಐ ಸಂಜಯ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದಿಂದ ಘಾಳಪೂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಆಂಧ್ರಪ್ರದೇಶದಿAದ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಮುದ್ದೇಬಿಹಾಳ : ಸಿರಿವಂತರು ಸಿರಿವಂತಿಕೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಬಡವರ ಕುರಿತು ಮಾತನಾಡುವುದು ಅಪರೂಪ.ಆದರೆ ಬಡವನ ಸ್ನೇಹ ಮಾಡಿದರೆ ಆತ ಬದುಕಿನ ಅನುಭವದ ಪಾಠ ಹೇಳುತ್ತಾನೆ ಎಂದು ಹಿರಿಯ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಹೇಳಿದರು. ಪಟ್ಟಣದ ಗಣೇಶ ನಗರದಲ್ಲಿ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಅವರ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದಾಶಿವ ಮಠ ಹಾಗೂ ಮೊಹ್ಮದ ರಫೀಕ ಶಿರೋಳ ಅವರ ತಂದೆಯವರು ನನಗೆ ಆಪ್ತರು.ಅವರ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಮುದ್ದೇಬಿಹಾಳ : ಮೂಲತಃ ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರು ತಾಂಡಾದ ಡಾ.ಮೋತಿಲಾಲ ರೂ.ಚವ್ಹಾಣ ಅವರನ್ನು ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ಡಾ. ಎ.ಆರ್. ಗೋವಿಂದಸ್ವಾಮಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ತೆರವಾಗಿದ್ದ ಸ್ಥಾನಕ್ಕೆ ಡಾ. ಮೋತಿಲಾಲ ಚವ್ಹಾಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಡಾ. ಮೋತಿಲಾಲ ರೂ. ಚವ್ಹಾಣ