Abortion sounds again in Bagalkot

ಬಾಗಲಕೋಟೆಯಲ್ಲಿ ಮತ್ತೆ ಗರ್ಭಪಾತದ ಸದ್ದು..! ಹೆಣ್ಣೆಂದು ಗರ್ಭಪಾತ ಮಾಡಿಸಿದಾಗ ಗಂಡು ಮಗು ಪತ್ತೆ..!

ಬಾಗಲಕೋಟೆಯಲ್ಲಿ ಮತ್ತೆ ಗರ್ಭಪಾತದ ಸದ್ದು..! ಹೆಣ್ಣೆಂದು ಗರ್ಭಪಾತ ಮಾಡಿಸಿದಾಗ ಗಂಡು ಮಗು ಪತ್ತೆ..!

ಬಾಗಲಕೋಟೆ: ಗರ್ಭಪಾತದಿಂದ ಮಹಾರಾಷ್ಟ್ರದ ಮಿರಜ್ ಮೂಲದ ಗೃಹಿಣಿಯೊಬ್ಬಳು ಮೃತಪಟ್ಟ ಘಟನೆ ಇನ್ನೂ ಹಸಿರಿರುವಾಗಲೇ ಮತ್ತೊಂದು ಗರ್ಭಪಾತ ಪ್ರಕರಣ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ವರದಿಯಾಗಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಗರ್ಭಪಾತ ಪ್ರಕರಣ ಬೆಳಕಿಗೆ ಬಂದಿದ್ದು, ಹೆಣ್ಣು ಎಂದು ಗರ್ಭಪಾತ ಮಾಡುವ ವೇಳೆ ಗಂಡು ಮಗು ಎಂದು ಗೊತ್ತಾಗಿದೆ.

ಪಟ್ಟಣದ ಪಾಟೀಲ್ ಆಸ್ಪತ್ರೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಡಾ.ರಾಜೇಂದ್ರ ಪಾಟೀಲ್ ವಿರುದ್ದ ದೂರು ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

ಮುಧೋಳ ತಾಲೂಕಿನ ರನ್ನಬೆಳಗಲಿ ಗ್ರಾಮದ 24 ವರ್ಷದ ಮಹಿಳೆಗೆ 14 ವಾರಗಳ ಭ್ರೂಣದ ಗರ್ಭಪಾತ ಮಾಡಲಾಗಿದೆ ಎಂದು ಹೇಳಲಾಗಿದೆ.

ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಾಗಲಕೋಟೆ ಡಿಹೆಚ್‌ಓ ಸುವರ್ಣ ಕುಲಕರ್ಣಿ ಹಾಗೂ ಮುಧೋಳ ಟಿಹೆಚ್‌ಒ ಮಲಘಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣ ಡೆಲಿವರಿ ಥಿಯೇ ಟರ್, ಸ್ಕ್ಯಾನಿಂಗ್ ಸೆಂಟರ್, ಎಮ್‌ರ್ಆಡಿ ರೂಮ್ ಸೀಜ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಮಹಾಲಿಂಗಪುರದಲ್ಲಿ ಗರ್ಭಪಾತದಿಂದ ಮಹಾರಾಷ್ಟ್ರ ಮಹಿಳೆ ಅಸುನೀಗಿದ್ದಳು. ಹೀಗಾಗಿ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

ಇದನ್ನೂ ಓದಿ: ಛೇ..ಅಶ್ಲೀಲ ವಿಡಿಯೋ… ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ‌ಅನುಷಾ!

ಅಧಿಕಾರಿಗಳ ಭೇಟಿ, ಪರಿಶೀಲನೆ:

ಗರ್ಭಪಾತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಡಿಎಚ್‌ಒ ಸುವರ್ಣ ಕುಲಕರ್ಣಿ, ಮುಧೋಳ ಟಿಎಚ್‌ಒ ಮಲಘಾಣ ಅವರು ಆಸತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಯೋಗ ಮೆಚ್ಚುಗೆ:

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಪಾಟೀಲ್ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ನಡೆದ ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ ಹಠಾತ್ ಕುಟುಕು ಕಾರ್ಯಾಚರಣೆ ಮಾಡಿ ಸ್ಕ್ಯಾನಿಂಗ್ ರೂಂ, ಹೇರಿಗೆ ಕೋಣೆಗಳು ಸೀಜ್ ಮಾಡಿರುವ ಕ್ರಮಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ತಿಳಿಸಿದ್ದಾರೆ.

Latest News

ಅ.21 ರಂದು ಶಿಕ್ಷಕರ ಕವಿಗೋಷ್ಠಿ

ಅ.21 ರಂದು ಶಿಕ್ಷಕರ ಕವಿಗೋಷ್ಠಿ

ಮುಧೋಳ :ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕಗಳ

ಭಾರೀ ಮಳೆ: ಮನೆ ಕುಸಿದು ನಾಲ್ವರಿಗೆ ಗಾಯ

ಭಾರೀ ಮಳೆ: ಮನೆ ಕುಸಿದು ನಾಲ್ವರಿಗೆ ಗಾಯ

ಮುದ್ದೇಬಿಹಾಳ : ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮನೆಯೊಂದು ಕುಸಿದು ಮನೆಯಲ್ಲಿ ಮಲಗಿದ್ದ

ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ – ಎ.ಸಿ.ಕೆರೂರ

ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ – ಎ.ಸಿ.ಕೆರೂರ

ಅಡವಿ ಹುಲಗಬಾಳ : ಅಹಿಲ್ಯದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಅಡವಿ ಹುಲುಗಬಾಳದಲ್ಲಿ 2025-26 ನೇ

ಅಮೆರಿಕದಲ್ಲಿ ಕುಳಿತು ಮನೆ ಕಳ್ಳತನ ತಪ್ಪಿಸಿದ ಪುತ್ರಿ

ಅಮೆರಿಕದಲ್ಲಿ ಕುಳಿತು ಮನೆ ಕಳ್ಳತನ ತಪ್ಪಿಸಿದ ಪುತ್ರಿ

ಮುಧೋಳ: ಟೆಕ್ಕಿ ಯುವತಿಯೊಬ್ಬರು ಅಮೆರಿಕದಲ್ಲಿ ಕುಳಿತೇ ತನ್ನ ಮನೆಯಲ್ಲಿ ನಡೆಯಬಹುದಾದ ಕಳ್ಳತನವನ್ನು ತಪ್ಪಿಸಿ ಸುದ್ದಿಯಾಗಿದ್ದಾರೆ.

ಜೈನಸಾಬ ಹಗೇದಾಳ ಅಧ್ಯಕ್ಷ, ದೊಡ್ಡಪ್ಪ ದಂಡಿನ ಉಪಾಧ್ಯಕ್ಷ

ಜೈನಸಾಬ ಹಗೇದಾಳ ಅಧ್ಯಕ್ಷ, ದೊಡ್ಡಪ್ಪ ದಂಡಿನ ಉಪಾಧ್ಯಕ್ಷ

ಹುನಗುಂದ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೈನಸಾಬ ಹಗೇದಾಳ, ಉಪಾಧ್ಯಕ್ಷಾಗಿ ದೊಡ್ಡಪ್ಪ ಶರಣಪ್ಪ ದಂಡಿನ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದರು. ನಿರ್ದೇಶಕರಾದ ಬಸವಂತಪ್ಪ ಆಂಟರದಾನಿ,  ಬಸವರಾಜ  ಬಂಗಾರಿ,  ಗಿರಿಜಾಗಂಜಿಹಾಳ, ಮಹಾಂತಮ್ಮ ಹೊಸೂರ,  ಶಾಂತಾ  ಗೌಡಗೇರಿ,  ಹನುಮಂತ ಹಾದಿಮನಿ,  ಗುರುಸಂಗಪ್ಪ ಗಾಣಿಗೇರ,  ಬಸಪ್ಪ ಕತ್ತಿ,  ಮಹಾಂತೇಶ ನಾಡಗೌಡ ತಾಪಂ ಇಒ ಚುನಾವಣಾಧಿಕಾರಿ ಮುರಳೀಧರ ದೇಶಪಾಂಡೆ ಇದ್ದರು.

ವಿಮಾ‌ ಕಂಪನಿಗಳಿಂದ ಅನ್ನದಾತರಿಗೆ ಮೋಸ

ವಿಮಾ‌ ಕಂಪನಿಗಳಿಂದ ಅನ್ನದಾತರಿಗೆ ಮೋಸ

ಇಲಕಲ್ : ಅತಿವೃಷ್ಟಿ, ಅನಾವೃಷ್ಟಿ ಹಾಗೂ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆಹಾನಿ ಆದರೆ ಪರಿಹಾರಕ್ಕಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಡಿಯಲ್ಲಿ ವಿಮಾ ಕಂಪನಿಗೆ ಹೋಬಳಿವಾರು ಸರಕಾರ ನಿಗದಿಪಡಿಸಿದ ಬೆಳೆಗೆ ಪ್ರತಿ ವರ್ಷ ರೈತರು ವಿಮಾ ಪ್ರೀಮಿಯಮ್ ಪಾವತಿಸಿದರೂ ಬೆಳೆ ಹಾನಿ ಆದ ಸಂದರ್ಭದಲ್ಲಿ ವಿಮಾ ಕಂಪನಿಯವರು ಜಿಲ್ಲೆಯಲ್ಲಿ ಕ್ಲೇಮ ಪಾವತಿಸದೇ ಸದಾ ಕಾಲ ಮೋಸ ಮಾಡಿ‌ ನಿಗದಿಪಡಿಸಿದ ಇನ್ಸೂರೆನ್ಸ ಕಂಪನಿಯವರು ಬ್ರಹ್ಮಾಂಡ ಬ್ರಷ್ಟಾಚಾರದಲ್ಲಿ ತೊಡಗಿದ್ದು