Accident: Transport bus-private bus collision, conductor dies

Accident: ಸಾರಿಗೆ ಬಸ್-ಖಾಸಗಿ ಬಸ್ ಡಿಕ್ಕಿ, ಕಂಡಕ್ಟರ್ ದುರ್ಮರಣ

Accident: ಸಾರಿಗೆ ಬಸ್-ಖಾಸಗಿ ಬಸ್ ಡಿಕ್ಕಿ, ಕಂಡಕ್ಟರ್ ದುರ್ಮರಣ

ರಾಯಚೂರು : ಖಾಸಗಿ ಹಾಗೂ ಸರ್ಕಾರಿ ಬಸ್‌ ನಡುವೆ ಅಪಘಾತ ಸಂಭವಿಸಿ ಖಾಸಗಿ ಬಸ್‌ ಕಂಡಕ್ಟರ್ ಮೃತಪಟ್ಟಿದ್ದಾನೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ಈ ದುರ್ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಹಾರಾಪುರ ಗ್ರಾಮದ ಬಳಿ ಹೆದ್ದಾರಿಯಲ್ಲಿ ಸಂಭವಿಸಿದ್ದು, ನಿರ್ವಾಹಕ ಪುಂಡಲೀಕ (38) ಅಸುನೀಗಿದ್ದಾರೆ. ಅಪಘಾತದಲ್ಲಿ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಸಿಸಲಾಗಿದೆ.

ಬೆಂಗಳೂರಿನಿಂದ ಯಾದಗಿರಿ ಮಾರ್ಗವಾಗಿ ಹೊರಟಿದ್ದ KSRTC ಬಸ್ ಪ್ರಯಾಣಿಕರನ್ನು ಇಳಿಸುವಾಗ ಹಾರಾಪುರದಲ್ಲಿ ನಿಲ್ಲಿಸಲಾಗಿತ್ತು. ಇದೇ ವೇಳೆ ಕಲಬುರಗಿ ಜಿಲ್ಲೆಯತ್ತ ಹೊರಟಿದ್ದ ಖಾಸಗಿ ಬಸ್, ಸಾರಿಗೆ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: Murder: ಹೆಂಡತಿ ಎದುರೇ ಗಂಡನನ್ನು ಕೊಚ್ಚಿ ಕೊಚ್ಚಿ ಕೊಂದ್ರು, ಪತ್ನಿಯ ಕೈವಾಡದ ಶಂಕೆ!

ಈ ಸಂದರ್ಭದಲ್ಲಿ ಡಿಕ್ಕಿಯ ರಭಸಕ್ಕೆ ಸರ್ಕಾರಿ ಬಸ್ ರಸ್ತೆ ಬದಿ ಉರುಳಿ ಬಿದ್ದಿದೆ. ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest News

ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ಮುದ್ದೇಬಿಹಾಳ : ಸನ್ 2025-26ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ರೈತರು ಹೊಲಗಳಲ್ಲಿ ಕೃಷಿ

ಮುದ್ದೇಬಿಹಾಳ : ಜ.6 ರಂದು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಮುದ್ದೇಬಿಹಾಳ : ಜ.6 ರಂದು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಮುದ್ದೇಬಿಹಾಳ : ತಾಲ್ಲೂಕಿನ 220-110ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಬಸರಕೋಡದಿಂದ ಹಾಲಿ ಇರುವ 110

ಕೆಕೆಆರ್‌ಟಿಸಿ ನೂತನ ಘಟಕ ವ್ಯವಸ್ಥಾಪಕರಾಗಿ ಅಶೋಕಕುಮಾರ ಭೋವಿ ಅಧಿಕಾರ ಸ್ವೀಕಾರ

ಕೆಕೆಆರ್‌ಟಿಸಿ ನೂತನ ಘಟಕ ವ್ಯವಸ್ಥಾಪಕರಾಗಿ ಅಶೋಕಕುಮಾರ ಭೋವಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮುದ್ದೇಬಿಹಾಳ ಘಟಕಕ್ಕೆ

ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಚುನಾವಣೆ;                                                                                          ಠೇವಣಿ ಕಳೆದುಕೊಂಡ ಮಂಜೇಗೌಡ, ಭರ್ಜರಿ ಗೆಲುವು ಸಾಧಿಸಿದ ಆನಂದಗೌಡ

ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಚುನಾವಣೆ; ಠೇವಣಿ ಕಳೆದುಕೊಂಡ ಮಂಜೇಗೌಡ, ಭರ್ಜರಿ ಗೆಲುವು ಸಾಧಿಸಿದ ಆನಂದಗೌಡ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ ಬೆಂಗಳೂರು ಈ

ಶ್ರಮಿಕರಿಗಾಗಿ ಗ್ರಾಮ ವ್ಯಾಪ್ತಿಗೆ ವಿಸ್ತಿರಿಸಿದ- ನೆರವು ಸಂಸ್ಥೆ.

ಯಾದಗಿರಿ : ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾದ ಅಶ್ವಥ್ ಟಿ ಮರಿಗೌಡ ಅಣ್ಣ ರವರ ಆದೇಶದ ಮೇರೆಗೆ ಇಂದು ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಹತ್ತಿಕುಣಿ ಮತ್ತು ತಾಲೂಕು ಅಧ್ಯಕ್ಷರು ವೀರೇಶ್ ಗಣಪುರ್ ನೇತೃತ್ವದಲ್ಲಿ ತಾಲೂಕಿನ ಮಲಾರ್ ಗ್ರಾಮದಲ್ಲಿ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮಲಾರ್ ಗ್ರಾಮ ಘಟಕದ ನೂತನ ಅಧ್ಯಕ್ಷರಾಗಿ ವಿಜಯ್ ಮತ್ತು ಗೌರವಾಧ್ಯಕ್ಷರಾಗಿ ಗೋಪಾಲ್, ಪ್ರಧಾನ ಕಾರ್ಯದರ್ಶಿಯಾಗಿ ಈರಪ್ಪ, ಸಂಘಟನೆ ಕಾರ್ಯದರ್ಶಿಯಾಗಿ

ಮಡಿಕೇಶ್ವರದ ಹಾಲುಮತದ ಹಿರಿಯ ಜೀವಿ ಮಲ್ಲಮ್ಮ ರೂಡಗಿ ನಿಧನ

ಮಡಿಕೇಶ್ವರದ ಹಾಲುಮತದ ಹಿರಿಯ ಜೀವಿ ಮಲ್ಲಮ್ಮ ರೂಡಗಿ ನಿಧನ

ಮುದ್ದೇಬಿಹಾಳ : ತಾಲ್ಲೂಕಿನ ಮಡಿಕೇಶ್ವರ ಗ್ರಾಮದ ನಿವಾಸಿ ಮಲ್ಲಮ್ಮ ಬಸಪ್ಪ ರೂಡಗಿ ಶುಕ್ರವಾರ ನಿಧನರಾದರು. ಅಂತ್ಯಕ್ರಿಯೆ ಜ.3 ರಂದು ಮದ್ಯಾಹ್ನ 3 ಕ್ಕೆ ಮಡಿಕೇಶ್ವರದಲ್ಲಿ ನಡೆಯಲಿದೆ. ಮೃತರು ಮುದ್ದೇಬಿಹಾಳ ಬಿಇಒ ಕಚೇರಿ ಅಧೀಕ್ಷಕಿ ಎನ್.ಬಿ.ರೂಡಗಿ,ಹಾರ್ವರ್ಡ್ ಪಿಯು ಕಾಲೇಜಿನ ಪ್ರಾಚಾರ್ಯೆ ಆರ್.ಬಿ.ರೂಡಗಿ ಅವರ ತಾಯಿಯವರು ಹಾಗೂ ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಎಂ.ನೆರಬೆಂಚಿ,ಹಿರಿಯ ವಕೀಲ ಎಸ್.ಬಿ.ಬಾಚಿಹಾಳ ಅವರ ಅತ್ತೆಯವರಾಗಿದ್ದಾರೆ. .