ಕಲಬುರಗಿ : ಪತ್ನಿಯ ಎದುರಿಗೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಗಂಡನನ್ನು ಭೀಕರವಾಗಿ ಕೊಲೆಗೈಯಲಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಕಲಬುರಗಿ ನಗರದ ಹೊರವಲಯದ ಕೆಸರಟಗಿ ಗ್ರಾಮದ ಕ್ವಾಟ್ರಸ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಹತ್ಯೆಯಾದ ವ್ಯಕ್ತಿಯನ್ನು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಕಪಿಲ್ ಗಾಯಕ್ವಾಡ್ (40) ಎಂದು ಗುರುತಿಸಲಾಗಿದೆ.
ಕೆಲಸ ಮುಗಿಸಿಕೊಂಡು ಪತ್ನಿಯೊಂದಿಗೆ ಕಪಿಲ್ ಮನೆಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ದುಷ್ಕರ್ಮಿಯೋರ್ವ ಅಡ್ಡಗಟ್ಟಿ ಕೊಚ್ಚಿ ಕೊಚ್ಚಿ ಹತ್ಯೆ ಮಾಡಿ ಎಸ್ಕೆಪ್ ಆಗಿದ್ದಾನೆ. ಕತ್ತಿಗೆ, ಹೊಟ್ಟೆ, ಮುಖದ ಭಾಗಕ್ಕೆ ಗಂಭೀರವಾಗಿ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಹತ್ಯೆಯ ಹಿಂದೆ ಕಪಿಲ್ ಪತ್ನಿ ಭಾಗ್ಯ ಕೈವಾಡವಿದೆ ಎಂದ ಗಂಭೀರವಾದ ಆರೋಪವನ್ನು ಮೃತನ ಕುಟುಂಬಸ್ಥರು ಮಾಡಿದ್ದಾರೆ.
ಇದನ್ನು ಓದಿ: Viral video: ಪಾಕಿಸ್ತಾನದಲ್ಲಿ ಯುವತಿಯ ತಲೆಗೆ CCTV ಫಿಕ್ಸ್ ಮಾಡಿದ ಪೋಷಕರು! (ವಿಡಿಯೋ ವೈರಲ್)
ಈ ಕೊಲೆ ಕುರಿತು ಗುಲಬರ್ಗಾ ವಿ.ವಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.