ಮುದ್ದೇಬಿಹಾಳ : ತಾಲ್ಲೂಕಿನ ರೂಢಗಿ ಗ್ರಾಮದಲ್ಲಿ ಮೆಕ್ಕೆಜೋಳದ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿದ್ದು ಹೊಲದಲ್ಲಿದ್ದ ಶೆಡ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ಹಾನಿ ಸಂಭವಿಸಿದ ಘಟನೆ ಶುಕ್ರವಾರ ನಡೆದಿದೆ.
ಗ್ರಾಮದ ಸಿದ್ದನಗೌಡ ಸಂಕನಾಳ ಎಂಬುವರ ಹೊಲದಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿದ ಕೂಡಲೇ ಮುದ್ದೇಬಿಹಾಳದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದರು.
ಘಟನೆಯಲ್ಲಿ ಆಕಳು,ಕರು,ಎರಡು ಮೇಕೆಗಳನ್ನು ಹಾಗೂ ಮನೆಗೆ ಬೆಂಕಿ ತಗುಲುವುದನ್ನು ಅಗ್ನಿಶಾಮಕ ಸಿಬ್ಬಂದಿ ತಪ್ಪಿಸಿ ರಕ್ಷಣೆ ಮಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ.
ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬಸವರಾಜ ಬಿರಾದಾರ, ನಾಗೇಶ ರಾಥೋಡ, ಬಸವರಾಜ, ರಾಜು ರಾಥೋಡ, ವಿರುಪಾಕ್ಷಿ, ಕಾರ್ತಿಕ್, ಪಿಡ್ಡಪ್ಪ, ತಮ್ಮಣ್ಣ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸಿದರು.







