ಮುದ್ದೇಬಿಹಾಳ : ವಸತಿ ನಿಲಯದ ವಿದ್ಯಾರ್ಥಿನಿಗೆ ತಾಳಿ ಕಟ್ಟಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧನದ ಭೀತಿಯಲ್ಲಿ ಪೆಟ್ರೋಲ್ ಕುಡಿದು ಅಸ್ವಸ್ಥಗೊಂಡು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಆರೋಪಿ ಮೌನೇಶ ಮಾದರ ಗುಣಮುಖನಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಸೇವಾ ನ್ಯೂನತೆ ಆಪಾದನೆ ಮೇರೆಗೆ ಘಾಳಪೂಜಿ ಸರ್ಕಾರಿ ವಸತಿ ನಿಲಯದ ವಾರ್ಡನ್ ಶಿವಲಿಂಗಪ್ಪ ಕಾಂಬಳೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಹಾಗೂ ವಸತಿ ಶಾಲೆಯ ಪ್ರಾಚಾರ್ಯರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲೀಕ ಮಾನವರ ತಿಳಿಸಿದ್ದಾರೆ.
ಮತ್ತೆ ಇಬ್ಬರ ಬಂಧನ:
ನಾಲತವಾಡ ಪಟ್ಟಣದಲ್ಲಿ ಚುಡಾಯಿಸಿ, ಕಿರುಕುಳ ನೀಡಿದ್ದ ಯುವಕರ ವಿರುದ್ಧ ಪೋಕ್ಸೊ ದೂರು ದಾಖಲಿಸಿ, ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಮಸಬಿನಾಳ ಮತ್ತು ಸಂಗಮೇಶ ಮಾದರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ ತಿಳಿಸಿದ್ದಾರೆ.
ಅಪ್ರಾಪ್ತೆಗೆ ತಾಳಿಕಟ್ಟಿ ಬಂಧಿತನಾಗಿರುವ ಮೌನೇಶ ಮಾದರ ನಾಲತವಾಡದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತೆಗೆ ತಾಳಿಕಟ್ಟಿದ ಆರೋಪಿ ಬಂಧನ: ವಸತಿ ಶಾಲೆ ವಾರ್ಡನ್ ಅಮಾನತು
ಅಪ್ರಾಪ್ತೆಗೆ ತಾಳಿಕಟ್ಟಿದ ಆರೋಪಿ ಬಂಧನ: ವಸತಿ ಶಾಲೆ ವಾರ್ಡನ್ ಅಮಾನತು
Latest News
ದಿನಕ್ಕೊಂದು ಧನಾತ್ಮಕ ಕಥೆ: ಸಣ್ಣ ಬದಲಾವಣೆ, ದೊಡ್ಡ ಪರಿಣಾಮ
ಒಂದು ದೊಡ್ಡ ನಗರದ ಹೊರವಲಯದಲ್ಲಿ ಒಬ್ಬ ಅನುಭವಿ ಕುಂಬಾರ ವಾಸಿಸುತ್ತಿದ್ದನು. ಆತನ ಹೆಸರು ರಾಘವ.
ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ
ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ ಆರಂಭಿಸಲು ಪ್ರಸ್ತಾವನೆ ಕಳಿಸಲಾಗಿದೆ
ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು
ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು
ಜಲಾನಯನ ಮಹೋತ್ಸವ-2025 : ಕುಂಟೋಜಿ,ಕವಡಿಮಟ್ಟಿ ವ್ಯಾಪ್ತಿಯಲ್ಲಿ 2800 ಹೆಕ್ಟೇರ್ ನೀರಾವರಿಗೆ ಆದ್ಯತೆ
ಮುದ್ದೇಬಿಹಾಳ : ಜಲಾನಯನ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಿರ್ಮಿಸಲಾಗುವ ಕೃಷಿ ಹೊಂಡ,ಜಿನುಗು
ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಆಯ್ಕೆ; ಮುದ್ದೇಬಿಹಾಳ ಕಾನಿಪ ಸಂಘಕ್ಕೆ ಚುನಾವಣೆ : ವಡವಡಗಿ ಪೆನಲ್‌ಗೆ ಜಯ
ಮುದ್ದೇಬಿಹಾಳ : ಕಾನಿಪ ಸಂಘದ ತಾಲ್ಲೂಕು ಘಟಕದ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗೆ ಬುಧವಾರ ಚುನಾವಣೆ ನಡೆಸಲಾಗಿದ್ದು ವಡವಡಗಿ-ಬನ್ನೆಟ್ಟಿ ಪೆನಲ್ ಮಧ್ಯೆ ಏರ್ಪಟ್ಟ ಸ್ಪರ್ಧೆಯಲ್ಲಿ ವಡವಡಗಿ ಪೆನಲ್ ಪದಾಧಿಕಾರಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಡಿ.ಬಿ.ವಡವಡಗಿ ಹಾಗೂ ಮಕ್ಬೂಲ್ ಬನ್ನೆಟ್ಟಿ ನಾಮಪತ್ರ ಸಲ್ಲಿಸಿದ್ದು ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಅವರು 19 ಮತ ಪಡೆದು ಆಯ್ಕೆಯಾಗಿ ಪ್ರತಿಸ್ಪರ್ಧಿ ಮಕ್ಬುಲ್ ಬನ್ನೆಟ್ಟಿ ಅವರನ್ನು 10 ಮತಗಳ ಅಂತರದಿoದ ಪರಾಭವಗೊಳಿಸಿದರು. ಉಪಾಧ್ಯಕ್ಷ
ಡಿ.೧೫ ರಂದು ಕಾನಿಪ ಧ್ವನಿ ಸಂಘದಿoದ ಬೆಳಗಾವಿ ಚಲೋ: ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನಿಯಮ ಸರಳೀಕರಣಕ್ಕೆ ಆಗ್ರಹಿಸಿ ಹೋರಾಟ
ಮುದ್ದೇಬಿಹಾಳ : ರಾಜ್ಯದ ಎಲ್ಲಾ ಪತ್ರಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ನೀಡಲು ಸರ್ಕಾರ ಹೊರಡಿಸಿರುವ ಆದೇಶದಲ್ಲಿನ ಕಠಿಣ ಮಾನದಂಡಗಳನ್ನು ಸರಳೀಕರಣಗೊಳಿಸಬೇಕು. ಪತ್ರಕರ್ತರ ಹಿತರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಪ್ರಮುಖ ೧೨ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ಡಿ.೧೫ ರಂದು ಬೆಳಗಾವಿಯ ವಿಧಾನಸೌಧದ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ








