ಮುದ್ದೇಬಿಹಾಳ : ಪತ್ನಿ ತವರು ಮನೆಯಲ್ಲಿದ್ದಿರುವುದನ್ನು ಸಹಿಸದೇ ಆಕೆಗೆ ಮೇಲೆ ಹೊಲಿಗೆ ಮಷಿನ್ ಎತ್ತಿ ಹಾಕಿ ಕೊಲೆಗೈದಿದ್ದ ಆರೋಪಿಗೆ ಇಲ್ಲಿನ ಐದನೇ ಹೆಚ್ಚುವರಿ ಜಿಲ್ಲಾ ವ ಸತ್ರ ನ್ಯಾಯಾಧೀಶ ಸಚೀನ ಕೌಶಿಕ್ ಅವರು ಜೀವಾವಧಿ ಶಿಕ್ಷೆಯೊಂದಿಗೆ 1.50 ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣ ಏನು : ಮುದ್ದೇಬಿಹಾಳ ತಾಲ್ಲೂಕಿನ ಅಬ್ಬಿಹಾಳ ಗ್ರಾಮದ ಲಕ್ಷö್ಮಣ ಬಲವಂತಪ್ಪ ಕಾರಕೂರ ಎಂಬಾತ ಶಿವಮ್ಮ ಎಂಬುವಳನ್ನು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ.ಮದುವೆಯ ಬಳಿಕ ಗಂಡ ಹೆಂಡಿರಲ್ಲಿ ವೈಮನಸ್ಸು ಮೂಡಿ ಶಿವಮ್ಮ ತವರು ಮನೆಯಲ್ಲಿದ್ದಳು.ಇದನ್ನು ಸಹಿಸದೇ ಆಕೆಯ ಮೇಲೆ ಸಿಟ್ಟಾಗಿದ್ದ ಪತಿ ಲಕ್ಷö್ಮಣ ಅ.13,2024 ರಂದು ಹೆಂಡತಿಯ ತವರು ಮನೆಗೆ ಬಂದು ಆಕೆಗೆ ಹೊಲಿಗೆ ಯಂತ್ರದಿAದ ತಲೆಗೆ ಎತ್ತಿ ಒಗೆದು ಕೊಲೆ ಮಾಡಿದ್ದ.ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಬಿಎನ್ಎಸ್ ಕಾಯ್ದೆ 103(1)ರಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಐದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಸಚಿನ ಕೌಶಿಕ್ ಅವರು ಸಾಕ್ಷಿ ಪುರಾವೆಗಳನ್ನು ಅವಲೋಕಿಸಿ ಆರೋಪಿಗೆ ಜೀವಾವಧಿ ಶಿಕ್ಷೆಯೊಂದಿಗೆ 1.50 ಲಕ್ಷ ರೂ.ದಂಡ ವಿಧಿಸಿ ಫೆ.16,2026 ರಂದು ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ.ಮಾಮನಿ ವಾದ ಮಂಡಿಸಿದ್ದರು.ಪ್ರಕರಣದ ತನಿಖೆಯನ್ನು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಬ.ಬಾಗೇವಾಡಿ ಪಿಎಸ್ಐ ಗುರುಶಾಂತ ದಾಶ್ಯಾಳ,ಪಿಎಸ್ಐ ಸಂಜಯ ತಿಪರೆಡ್ಡಿ,ಪೊಲೀಸ್ ಸಿಬ್ಬಂದಿ ಎಸ್.ಎಸ್.ಕೌಲಗಿ, ಸಂಗಮೇಶ ಚಲವಾದಿ ಆರೋಪಿಗೆ ಶಿಕ್ಷೆಯಾಗಲು ಶ್ರಮಿಸಿದ್ದರು.







