Ahoratri dharna in front of Tehsildar office on 28th: ​​Outrage over slander against Dhavalgi Basava Bal Bharati Education Institute.

ಏ.28ರಂದು ತಹಸೀಲ್ದಾರ್ ಕಚೇರಿ ಎದುರಿಗೆ ಅಹೋರಾತ್ರಿ ಧರಣಿ : ಢವಳಗಿ ಬಸವ ಬಾಲ ಭಾರತಿ ಶಿಕ್ಷಣ ಸಂಸ್ಥೆಯ ವಿರುದ್ಧ ಅಪಪ್ರಚಾರಕ್ಕೆ ಆಕ್ರೋಶ

ಏ.28ರಂದು ತಹಸೀಲ್ದಾರ್ ಕಚೇರಿ ಎದುರಿಗೆ ಅಹೋರಾತ್ರಿ ಧರಣಿ : ಢವಳಗಿ ಬಸವ ಬಾಲ ಭಾರತಿ ಶಿಕ್ಷಣ ಸಂಸ್ಥೆಯ ವಿರುದ್ಧ ಅಪಪ್ರಚಾರಕ್ಕೆ ಆಕ್ರೋಶ

ಮುದ್ದೇಬಿಹಾಳ : ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ತಾತ್ಕಾಲಿಕವಾಗಿ ಸೇವೆ ಸಲ್ಲಿಸಿದ ಶಿಕ್ಷಕಿಯೊಬ್ಬರಿಗೆ ಕೊಟ್ಟಿರುವ ಸೇವಾ ಪ್ರಮಾಣ ಪತ್ರವನ್ನೇ ತಿದ್ದುಪಡಿ ಮಾಡಿ ಅದರ ಆಧಾರದ ಮೇಲೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಶಾಲೆಯ ಮಾನ್ಯತೆ ರದ್ದುಗೊಳಿಸುವಂತೆ ಕಿರುಕಳ ನೀಡುತ್ತಿರುವ ಹೋರಾಟಗಾರನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲ್ಲೂಕಿನ ಢವಳಗಿ ಬಸವ ಬಾಲ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಶನಿವಾರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶಿರಸ್ತೇದಾರ ಎಂ. ಎ. ಬಾಗೇವಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆಯ ವಿರುದ್ಧ ನಿರಂತರವಾಗಿ ತಮಗೆ ಅನ್ಯಾಯವಾಗಿದೆ ಎಂದು ಹಲವು ರೀತಿಯಲ್ಲಿ ಚೇತನ ಶಿವಶಿಂಪಿ ಎಂಬುವರು ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮಲ್ಲಿಕರ‍್ಜುನ ಸಿದರೆಡ್ಡಿ ಮಾತನಾಡಿ, ನಮ್ಮ ಸಂಸ್ಥೆಯಡಿ ನಡೆಯುತ್ತಿರುವ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಭೂದೇವಿ ಹುನಗುಂದ 1994 ರಿಂದ 1997ರವರೆಗೆ ಸೇವೆ ಸಲ್ಲಿಸಿದ್ದಾರೆ. ಆದರೆ ಇವರಿಗೆ ಕೊಟ್ಟಿರುವ ಸೇವಾ ಪ್ರಮಾಣ ಪತ್ರವನ್ನು ಅವರ ಪುತ್ರ ಚೇತನ ಶಿವಶಿಂಪಿ ಹಾಗೂ ಶಿಕ್ಷಕಿ ಭೂದೇವಿ ಹುನಗುಂದ ಅವರು ಸೇರಿಕೊಂಡು 1994 ರಿಂದ 2003 ಎಂದು ತಿದ್ದುಪಡಿ ಮಾಡಿಕೊಂಡು ಶಾಲೆಯಲ್ಲಿ 11 ರ‍್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಎಂದು ಸುಳ್ಳು ಹೇಳುತ್ತಾ ಸೇವಾ ಪ್ರಮಾಣ ಪತ್ರವನ್ನು ತಿದ್ದುಪಡಿ ಮಾಡಿ ವಿವಿಧ ಇಲಾಖೆಗಳಿಗೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಮೇಲಧಿಕಾರಿಗಳ ಆದೇಶವಿಲ್ಲದೇ ಶಿಕ್ಷಕರ ವೇತನ ತಡೆ ಹಿಡಿಯುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದು ಸದರಿ ವ್ಯಕ್ತಿಯನ್ನು ಕರೆದು ಕೂಲಂಕುಷವಾಗಿ ತನಿಖೆ ನಡೆಸಿ 10 ದಿನದೊಳಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ಏ.28ರಂದು ತಹಸೀಲ್ದಾರ್ ಕಚೇರಿ ಎದುರಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಎಂ. ಜಿ.ಬಿ ರಾದಾರ (ಬಾಂಬೆಗೌಡ), ಪದಾಧಿಕಾರಿಗಳಾದ ನಾನಾಗೌಡ ಕೊಣ್ಣೂರ, ಬಾಪುಗೌಡ ಪಾಟೀಲ, ಬಾಪುಗೌಡ ಬಿರಾದಾರ, ವಿಜಯಕುಮಾರ ಪಾಟೀಲ, ಗುರುನಾಥ ಸಜ್ಜನ, ಮಡಿವಾಳಪ್ಪಗೌಡ ಬಿರಾದಾರ ಇದ್ದರು.

Latest News

ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಂಗಲ:                 ತುಳಿಯುವವರ ಮಧ್ಯೆ ಬೆಳೆದು ನಿಲ್ಲುವುದೇ ಸಾಧನೆ-ಸಿದ್ಧಲಿಂಗ ಶ್ರೀ

ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಂಗಲ: ತುಳಿಯುವವರ ಮಧ್ಯೆ ಬೆಳೆದು ನಿಲ್ಲುವುದೇ ಸಾಧನೆ-ಸಿದ್ಧಲಿಂಗ ಶ್ರೀ

ಮುದ್ದೇಬಿಹಾಳ : ಎಲ್ಲದಕ್ಕೂ ಮನಸ್ಸೆ ಕಾರಣವಾಗಿದ್ದು ಇನ್ನೊಬ್ಬರ ಮನೆ ಹಾಳು ಮಾಡುವುದು ಮನಸ್ಸೇ ಆಗಿದೆ.ತುಳಿಯುವವರ

ಮುದ್ದೇಬಿಹಾಳ : ಸಾಯಿ ಇಂಡೆನ್ ಗ್ಯಾಸ್ ಎಜೆನ್ಸಿ ವಿರುದ್ದ ಕ್ರಮಕ್ಕೆ ಆಗ್ರಹ

ಮುದ್ದೇಬಿಹಾಳ : ಸಾಯಿ ಇಂಡೆನ್ ಗ್ಯಾಸ್ ಎಜೆನ್ಸಿ ವಿರುದ್ದ ಕ್ರಮಕ್ಕೆ ಆಗ್ರಹ

ಮುದ್ದೇಬಿಹಾಳ ತಾಲೂಕಿನ ಸಾಯಿ ಇಂಡೆನ್ ಗ್ಯಾಸ್ ಸರ್ವಿಸ್ ಎಜೆನ್ಸಿಯವರು ಗ್ಯಾಸ್ ವಿತರಣಾ ಸೇವೆಯಲ್ಲಿ ವಿಳಂಬ

ನಾಲತವಾಡ ವೈದ್ಯರ ವರ್ಗಾವಣೆಗೆ ವಿರೋಧ

ನಾಲತವಾಡ ವೈದ್ಯರ ವರ್ಗಾವಣೆಗೆ ವಿರೋಧ

ನಾಲತವಾಡ : ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳಿನಿAದ ಒಳ್ಳೆಯ ಸೇವೆ ನೀಡುತ್ತಿದ್ದ ವೈದ್ಯ

ಹಿಂದಿನ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ:  ಮುದ್ದೇಬಿಹಾಳ ಅಂಜುಮನ್ ಸಂಸ್ಥೆಯ ಅವ್ಯವಹಾರ ತನಿಖೆಗೆ ಆಗ್ರಹ

ಹಿಂದಿನ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ: ಮುದ್ದೇಬಿಹಾಳ ಅಂಜುಮನ್ ಸಂಸ್ಥೆಯ ಅವ್ಯವಹಾರ ತನಿಖೆಗೆ ಆಗ್ರಹ

ಮುದ್ದೇಬಿಹಾಳ : ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿಯ 2018ರ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ

BREAKING : ನಟ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಮದುವೆಗೆ ಮುಹೂರ್ತ ಫಿಕ್ಸ್.!

BREAKING : ನಟ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಮದುವೆಗೆ ಮುಹೂರ್ತ ಫಿಕ್ಸ್.!

ಬೆಂಗಳೂರು: ಹೀರೋ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ಮುಹೂರ್ತ ಫಿಕ್ಸ್ ಆಗಿದ್ದು, 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಎನ್ನಲಾಗಿದೆ. ಇತ್ತೀಚೆಗೆ ಈ ಇಬ್ಬರೂ ಬಹಳ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಇಬ್ಬರೂ ಎಲ್ಲಿಯೂ ನಿಶ್ಚಿತಾರ್ಥದ ಫೋಟೋ ಗಳನ್ನು ಹಂಚಿಕೊಂಡಿಲ್ಲ, ವಿಜಯ್ ಮತ್ತು ರಶ್ಮಿಕಾ. ನಿಶ್ಚಿತಾರ್ಥದ ನಂತರ, ಅವರು ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. ಆದಾಗ್ಯೂ, ಅವರ ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂದು

ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಸುಮಲತಾ ಕ್ಷೌರದ ಹಾವೇರಿ ವಿಶ್ವವಿದ್ಯಾಲಯ ಮಹಿಳಾ ಯೋಗಾಸನ ತಂಡಕ್ಕೆ ಆಯ್ಕೆ.

ಶಿಗ್ಗಾಂವ: ಶಿಗ್ಗಾಂವ ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕ್ರೀಡಾಪಟುಗಳು ಯೋಗಾಸನ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.ಹಾವೇರಿ ವಿಶ್ವವಿದ್ಯಾಲಯ, ಕೆರೆಮತ್ತಿಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಯೋಗಾಸನ ಕ್ರೀಡೆಯಲ್ಲಿ ಹಾವೇರಿ ವಿಶ್ವವಿದ್ಯಾಲಯ ಮಹಿಳಾ ತಂಡದ ವಿ.ವಿ ಆಯ್ಕೆ ಪ್ರಕ್ರಿಯೆ ಜರುಗಿದ್ದು, ಈ ಆಯ್ಕೆಯಲ್ಲಿ ಶ್ರೀ ರಂಭಾಪುರಿ ಪದವಿ ಮಹಾವಿದ್ಯಾಲಯದ ಕ್ರೀಡಾಪಟುಗಳು ಭಾಗವಹಿಸಿದ್ದರು. ಇದರಲ್ಲಿ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಸುಮಲತಾ ಕ್ಷೌರದ ಅವರು ಹಾವೇರಿ ವಿಶ್ವವಿದ್ಯಾಲಯ ಮಹಿಳಾ ಯೋಗಾಸನ