ಮುದ್ದೇಬಿಹಾಳ : ಇಲ್ಲಿನ ದಲಿತ ಸಾಹಿತಿ ಶಿವಪುತ್ರ ಅಜಮನಿ ಅವರ ಅನ್‌ಟಚೇಬಿಲಿಟಿ ಕಿರು ಚಿತ್ರಕ್ಕೆ ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಯೂನಿವರ್ಸಲ್ ಫಿಲ್ಮ್ ಮೇಕರ‍್ಸ್ ಕೌನ್ಸಿಲ್ ವತಿಯಿಂದ ಧಾರವಾಡದಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಿರುಚಿತ್ರ ವಿಭಾಗದಲ್ಲಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಲಭಿಸಿದೆ.
ಸಮಾಜದ ಕೆಳಸ್ತರದಲ್ಲಿರುವ ಜಾತಿಯ ಜನರು ಎದುರಿಸುತ್ತಿರುವ ಘಟನೆಗಳನ್ನು ತಮ್ಮ ಕೃತಿಯಲ್ಲಿ ಬೆಳಕಿಗೆ ತಂದಿದ್ದ ಅಜಮನಿ ಅವರಿಗೆ ಈ ಗೌರವ ಸಂದಿದೆ. ಕಾರ್ಯಕ್ರಮದಲ್ಲಿ ಮಾಲ್ಡಿವ್ಸನ ನಿರ್ಮಾಪಕ ಮಹಮ್ಮದ್ ರಷೀದ್ , ಕನ್ನಡ ನಟ ಮುನಿಕೃಷ್ಣ ಮುರುಗನ್, ಮಾಜಿ ಮೇಯರ್ ವಿರೇಶ ಅಂಚಟಗೇರಿ, ಸಂಯೋಜಕ ರಾಹುಲದತ್ತ ಪ್ರಸಾದ ಇದ್ದರು.
ಅಜಮನಿ ಅವರನ್ನು ಮುದ್ದೇಬಿಹಾಳದ ಕ್ರಿಯೇಟಿವ್ ಪ್ರೆಂಡ್ಸ್ ಕ್ಲಬ್‌ನ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.







