Astrology: ಈ ರಾಶಿಯವರ ಮೇಲೆ ಇಂದು ಗ್ರಹಗತಿಗಳ ಧನಾತ್ಮಕ ಪ್ರಭಾವ

Astrology: ಈ ರಾಶಿಯವರ ಮೇಲೆ ಇಂದು ಗ್ರಹಗತಿಗಳ ಧನಾತ್ಮಕ ಪ್ರಭಾವ

ಮೇಷ ರಾಶಿ: ಅತಿಯಾದ ಹಠ ಒಳ್ಳೆಯದಲ್ಲ.ಒತ್ತಡಗಳಿಗೆ ಮಣಿಯುವ ಸನ್ನಿವೇಶಗಳು ಎದುರಾಗಬಹುದು. ಕುಟುಂಬದ ಸಮಸ್ಯೆಗಳು ಉಲ್ಭಣಗೊಳ್ಳ ಬಹುದು.ಪರಿಸ್ಥಿತಿ ಎದುರಿಸಲು ಸಿದ್ಧರಾಗಿ.(ಭಕ್ತಿಯಿಂದ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು. Astrology)

ಇನ್ನಷ್ಟು ಸುದ್ದಿಗಳಿಗಾಗಿ ‌ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada

ವೃಷಭ ರಾಶಿ: ಹಣದ ಕೊರತೆಯು ಇಂದು ಕುಟುಂಬದಲ್ಲಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗ ಬಹುದು. ಇಂತಹ ಪರಿಸ್ಥಿತಿಯಲ್ಲಿ ಇತರ ಕುಟುಂಬ ಸದಸ್ಯರೊಂದಿಗೆ ಮಾತನಾಡುವ ಮೊದಲು ಚೆನ್ನಾಗಿ ಯೋಚಿಸಿ ಮತ್ತು ಅವರಿಂದ ಸಲಹೆ ಪಡೆಯಿರಿ.(ಭಕ್ತಿಯಿಂದ ಶ್ರೀ ಚಾಮುಂಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ: ಈ ದಿನ ನಿಮ್ಮ ಜೀವನವನ್ನು ಹೆಚ್ಚು ಉತ್ಕೃಷ್ಟಗೊಳಿಸಿ. ಚಿಂತೆಯನ್ನು ಮಾಡಬೇಡಿ. ವ್ಯಾಪಾರದಲ್ಲಿನ ಲಾಭವು ಇಂದು ಅನೇಕ ವ್ಯಾಪಾರಿಗಳು ಮತ್ತು ಉದ್ಯಮಿಗಳ ಮುಖದಲ್ಲಿ ಸಂತೋಷವನ್ನು ತರುತ್ತದೆ. ಅನಾರೋಗ್ಯ ಕಾಣಿಸಿ ಕೊಳ್ಳಬಹುದು. ಆರೋಗ್ಯದ ಕಡೆ ಗಮನ ನೀಡಿ.ಕೆಟ್ಟ ಅಭ್ಯಾಸಗಳನ್ನು ತೊಡೆದು ಹಾಕುವುದು ಒಳ್ಳೆಯದು.(ಭಕ್ತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ: ಸಮಸ್ಯೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗದಿರಿ. ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮನಸ್ಸು ಹಗರುವಾಗುತ್ತದೆ. ಸಲಹೆಗಳನ್ನು ಸ್ವೀಕರಿಸಿ. ಇದು ಬಿಕ್ಕಟ್ಟಿನಿಂದ ಹೊರಬರಲು ನಿಮಗೆ ಸಹಾಯ ವಾಗುತ್ತದೆ.(ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಸಿಂಹ ರಾಶಿ: ಶೀಘ್ರದಲ್ಲಿ ಅನಿರೀಕ್ಷಿತ ಶುಭ ಸಮಾಚಾರಗಳು ಕೇಳಿ ಬರಲಿವೆ. ಸಮಸ್ಯೆಗಳೂ ದೂರಾಗಲಿವೆ.ಪ್ರಮುಖ ನಿರ್ಧಾರ ತೆಗೆದು ಕೊಳ್ಳಲು ಸೂಕ್ತ ಸಮಯವಿದು. ಆದರೆ ಎಲ್ಲಾ ಆಯಾಮಗಳಲ್ಲೂ ಆಲೋಚಿಸಿ, ಸಮಯ ತೆಗೆದು ಕೊಂಡು ನಿರ್ಧಾರ ಕೈಗೊಳ್ಳಿ.(ಭಕ್ತಿಯಿಂದ ಶ್ರೀ ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕನ್ಯಾ ರಾಶಿ: ಮನಸ್ಸಿಗೆ ಗೊಂದಲಗಳಿಂದ ಒತ್ತಡ ಎದುರಾಗಬಹುದು. ದೇಹ ವಿಶ್ರಾಂತಿ ಬಯಸಬಹುದು. ಆರೋಗ್ಯ ಕಡೆ ಹೆಚ್ಚಿನ ಗಮನ ಕೊಡಿ. ಇತರರ ಬಗ್ಗೆ ಅತಿಯಾದ ಆಲೋಚನೆಗಳು ಒಳ್ಳೆಯದಲ್ಲ.(ಭಕ್ತಿಯಿಂದ ಕುಲದೇವತೆ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ: ಪತ್ನಿ ಕುಟುಂಬಸ್ಥರೊಂದಿಗೆ ಉತ್ತಮ ಸಮಯ ಕಳೆಯಲಿ ದ್ದೀರಿ.ಹೊಸ ಕೆಲಸ,ಯೋಜನೆಗಳನ್ನು ಮುಂದೂಡಿ. ಹಣಕಾಸು ವಿಚಾರದಲ್ಲಿ ಎಚ್ಚರದಿಂದಿರಿ.(ಭಕ್ತಿಯಿಂದ ಶ್ರೀ ಚೌಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ: ಹಣಕಾಸಿನ ವಿಷಯದಲ್ಲಿ ನಿಮ್ಮ ಸ್ವಂತ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಪ್ರತಿಯೊಂದಕ್ಕೂ ಸಾಧ್ಯವಾದಷ್ಟು ಹೆಚ್ಚಿನ ಗಮನವನ್ನು ನೀಡಿ. ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಒಪ್ಪಂದಗಳ ಮಾಡಿಕೊಳ್ಳಲು ಒತ್ತು ನೀಡಿ.(ಭಕ್ತಿಯಿಂದ ಶ್ರೀ ಶಕ್ತಿಗಣಪತಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಧನಸ್ಸು ರಾಶಿ: ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಆದರೆ ಮೊದಲು ಚರ್ಚೆಗಳು ನಡೆಯಬೇಕು. ನೀವು ಇತರರನ್ನು ಸಂಪರ್ಕಿಸದೆ ಮುಂದಕ್ಕೆ ಧಾವಿಸುತ್ತೀರಿ. ಇದರಿಂದ ಮನಸ್ತಾಪಗಳು ಎದುರಾಗಬಹುದು. ಎಚ್ಚರವಿರಲಿ.(ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.)

ಮಕರ ರಾಶಿ: ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ವಿಚಲಿತರಾಗದಿರಿ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ಕೈಚೆಲ್ಲದಿರಿ. ಸಿಕ್ಕ ಉತ್ತಮ ಸಮಯನ್ನು ಸದ್ಬಳಕೆ ಮಾಡಿಕೊಳ್ಳಿ.(ಭಕ್ತಿಯಿಂದ ಶ್ರೀ ಗ್ರಾಮದೇವತೆ ದರ್ಶನ ಮಾಡಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ: ಉದ್ವೇಗಕ್ಕೊಳಗಾಗದಿರಿ. ಇಂದಿನ ಗ್ರಹಗತಿಗಳು ನಿಮ್ಮ ರಾಶಿಯ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ. ಒತ್ತಡಗಳು ಎದುರಾದರೂ ಸೂಕ್ತ ರೀತಿಯಲ್ಲಿ ನಿಭಾಯಿಸಲಿದ್ದೀರಿ.(ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮೀನ ರಾಶಿ: ಜೀವನ ಮುಂದಿನ ಹಾದಿಯ ಸ್ಪಷ್ಟ ಚಿತ್ರಣಗಳು ನಿಮಗೆ ತಿಳಿದಿದೆ. ನಿಮ್ಮ ಹಾದಿಯಲ್ಲಿ ಇತರರು ಬರದಂತೆ ನೋಡಿಕೊಳ್ಳಿ. ಗೊಂದಲಕ್ಕೊಳಕಾಗದಿರಿ. ದೃಢ ನಿರ್ಧಾರವಿರಲಿ. ಮುಂದೆ ದೊಡ್ಡ ಸವಾಲುಗಳು ಎದುರಾಗಲಿದ್ದು, ಅದನ್ನು ಎದುರಿಸಲು ಸಿದ್ಥರಾಗಿರಿ.
(ಭಕ್ತಿಯಿಂದ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.) Astrology

ತಿಥಿ : ತ್ರಯೋದಶಿ
ನಕ್ಷತ್ರ : ಪುಷ್ಯ ನಕ್ಷತ್ರ .

ರಾಹುಕಾಲ: 09:00AM ರಿಂದ 10:30AM
ಗುಳಿಕಕಾಲ:06:00AM ರಿಂದ 07:30AM
ಯಮಗಂಡಕಾಲ:01:30PM ರಿಂದ 03:00PM

Latest News

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಉಡುಪಿ ಅಕ್ಟೋಬರ್ ೧೦: ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಿತ ರಕ್ಷಣೆಗೆ ನಮ್ಮ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ಬೆಂಗಳೂರು : ಋತುಚಕ್ರ ರಜೆ ನೀತಿ - 2025ಕ್ಕೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮದ ರೈತ ಸಂಗಪ್ಪ ಗೌಡರ ಸಾಲದ ಬಾಧೆ ತಾಳದೇ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಮುದ್ದೇಬಿಹಾಳ : ಪಟ್ಟಣದ ಹುಡ್ಕೋಗೆ ತೆರಳುವ ದ್ವಾರದಲ್ಲಿ ಸ್ಥಾಪಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತದ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ತುಮಕೂರು, ಅ.8: ಅಸಂಘಟಿತ ವಲಯದಲ್ಲಿ ದುರ್ಬಲರಾಗಿರುವ ಕಾರ್ಮಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಆಶಾ ದೀಪ ಯೋಜನೆ, ಗಿಗ್ ಕಾರ್ಮಿಕರ ವಿಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಹೇಳಿದರು. ನಗರ ಹೊರವಲಯದ ಶ್ರೀ ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ʼತುಮಕೂರು ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ;                             ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ; ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

** ಹೆಬ್ಬಾಳ** ಮುದ್ದೇಬಿಹಾಳ : ಆಗಷ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಹಲವಾರು ಬೆಳೆಗಳು ನೀರಲ್ಲಿ ನಿಂತಿದ್ದು ಅನ್ನದಾತ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿ ಭಾಗದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬಹುತೇಕ ಎಲ್ಲ ಬೆಳೆಗಳು ಕೊಳೆತಿವೆ. ಉಳ್ಳಾಗಡ್ಡಿ, ಹತ್ತಿ, ತೊಗರಿ,ಮೆಕ್ಕೆಜೋಳ,ದ್ರಾಕ್ಷಿ,ಬಾಳೆ,ಟೊಮ್ಯಾಟೋ ಅತಿವೃಷ್ಟಿಯಿಂದ ಹೊಲದಲ್ಲಿಯೇ ಹಾಳಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ರೈತ ಬಸವರಾಜ ಕುಂಟೋಜಿ, ಅತೀವೃಷ್ಟಿಯಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ.ಮಳೆ