ಹುಬ್ಬಳ್ಳಿ : ಧಾರವಾಡ ವಿಭಾಗದ ನೊಂದಾಯಿತ ಕಾರ್ಮಿಕ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯಲಿರುವ ಧರಣಿಯಲ್ಲಿ ಧಾರವಾಡ ವಿಭಾಗ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಯಿಂದ ಪ್ರಮುಖ ಕಾರ್ಮಿಕ ಮುಖಂಡರು ಭಾಗವಹಿಸುತ್ತಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಹುಬ್ಬಳ್ಳಿಯ ಕಾರ್ಮಿಕರ ಭವನದವರೆಗೂ ರ್ಯಾಲಿ ಮೂಲಕ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಕಾರ್ಮಿಕ ಸಚಿವರು ಸ್ಥಳಕ್ಕೆ ಆಗಮಿಸಿಲಿದ್ದಾರೆ.
ನಮ್ಮ ಮನವಿಗೆ ಸ್ಪಂದಿಸದಿದ್ದಲಿ, ಅನಿರ್ದಿಷ್ಟ ಅವಧಿ ಧರಣಿ ಕೂರಲಿದ್ದೇವೆ. ಆದಕಾರಣ ರಾಜ್ಯದ ಕಾರ್ಮಿಕರೆಲ್ಲರೂ ಈ ಪ್ರತಿಭಟನೆಯಲ್ಲಿ ಭಾಗಿ ಆಗುವಂತೆ ರಾಜ್ಯದ ಎಲ್ಲಾ ಕಾರ್ಮಿಕ ಮುಖಂಡರು ಮತ್ತು ನೆರವು ಅಶ್ವಥ್ ಟಿ ಮರೀಗೌಡ್ರು ಕರೆ ನೀಡಿದ್ದಾರೆ
ವರದಿಗಾರ : ಶಿವು ರಾಠೋಡ