ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡ ಸಮೀಪದ ಅಯ್ಯನಗುಡಿ ಗಂಗಾಧರೇಶ್ವರ ಜಾತ್ರೆಯ ಅಂಗವಾಗಿ ಮಂಗಳವಾರ ಪಟ್ಟಣದ ನಾಡಗೌಡ್ರ ದೊಡ್ಡ ಮನೆಯಿಂದ ಪ್ರಮುಖ ಬೀದಿಗಳಲ್ಲಿ ಕಳಸೋತ್ಸವದ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ಚಿಕ್ಕಮಗಳೂರಿನ ವೀರಗಾಸೆ ನೃತ್ಯ, ಕೊಟ್ಲೂರಿನ ನಂದಿಧ್ವಜ,ಕoಪ್ಲಿಯ ನಾಸಿಕ್ ಡೋಲು,ಬಳಬಟ್ಟಿ ಗಾರುಡಿ ಕುಣಿತ, ಜಾನಪದ ಹೆಜ್ಜೆಮೇಳ,ನವಿಲು ಕುಣಿತ, ಡೊಳ್ಳು ಕುಣಿತ,ಹಲಗೆ ಮೇಳ,ನಾಲತವಾಡ ಪಟ್ಟಣದ ವಿವಿಧ ಶಾಲೆಯ ಮಕ್ಕಳು ಸ್ತಬ್ಧ ಚಿತ್ರಗಳು , ಲಂಬಾಣಿ ನೃತ್ಯ ಹಾಗೂ ಸ್ಥಳೀಯ ಕಲಾವಿದರು ಮೆರವಣಿಗೆಯಲ್ಲಿ ಸಾಗಿದರು.ಪುರವಂತರು ವಿಶೇಷ ಸೇವೆ ನೀಡಿದರು.
ನಾಡಗೌಡ ಮನೆತನದ ದೊಡ್ಡಬಸವರಾಜ ನಾಡಗೌಡರ,ಪ.ಪಂ ಸದಸ್ಯ ಪೃಥ್ವಿರಾಜ ನಾಡಗೌಡರ,ಗಂಗಾಧರ ನಾಡಗೌಡರ,ರಕ್ಕಸಗಿ ಗ್ರಾಪಂ ಅಧ್ಯಕ್ಷ ರಿತೇಶ ನಾಡಗೌಡರ ಮೆರವಣಿಗೆಗೆ ಚಾಲನೆ ನೀಡಿದರು.
ಮುಖಂಡರಾದ ಪ್ರೊ.ಬಲವಂತ ಉಣ್ಣಿಬಾವಿ, ಹಣಮಂತ ಕುರಿ, ಶಿವಪ್ಪ ತಾತರೆಡ್ಡಿ,ಉಮರ ಮೂಲಿಮನಿ, ಮಹಾಂತೇಶ ಗಂಗನಗೌಡರ,ಸoಗಮೇಶ ಗಂಗನಗೌಡರ,ಪಟ್ಟಣ ಪಂಚಾಯಿತಿ ಅಧ್ಯಕ್ಷೆ v.s.ಇಲಕಲ್ ಇದ್ದರು.
ಮುದ್ದೇಬಿಹಾಳ : ತಾಲ್ಲೂಕಿನ







