ನಂದವಾಡಗಿ: ಬಾಗಲಕೋಟೆ ಜಿಲ್ಲೆಯ ಹುನಗುಂದ /ಇಲಕಲ್ ತಾಲೂಕಿನ ಸ ಹೆ ಮ ಹಿ ಪ್ರಾ ಶಾಲೆ ನಂದವಾಡಗಿಯಲ್ಲಿ ಪೂಜ್ಯರಾದ ಮಹಾಂತ ಜೋಳಿಗೆ ಹರಿಕಾರರು ಶ್ರೀ ಮ ನಿ ಪ್ರ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಹಾಗೂ ವ್ಯಸನ ಮುಕ್ತ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ವಿದ್ಯಾರ್ಥಿನಿಯರು ವಚನ ಪ್ರಾರ್ಥನೆ ಗೀತೆಯ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಪ್ರಾಸ್ತವಿಕವಾಗಿ ಶಾಲೆಯ ಪ್ರಭಾರಿ ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರರವರು ಪೂಜ್ಯರ ಆದರ್ಶ ಜೀವನ, ಮೌಲ್ಯಗಳು, ವಚನಗಳ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಪೂಜ್ಯರ ಕೊಡುಗೆ ಅಪಾರ ಎಂದು ಹೇಳಿದರು. ಹಾಗೂ ದುಷ್ಟ ಚಟಗಳನ್ನು ಜೋಳಿಗೆಯಲ್ಲಿ ಹಾಕಿ ಬದುಕನ್ನು ಸುಂದರಗೊಳಿಸಿಕೊಳ್ಳಿರಿ ಎಂದು ಪೂಜ್ಯರು ನುಡಿದರು ಎಂದು ತಿಳಿಸಿದರು.
ವಿದ್ಯಾರ್ಥಿನಿಯರು ಪೂಜ್ಯರ ಬಗ್ಗೆ ಹಾಗೂ ದಿನಾಚರಣೆಯ ಕುರಿತು ಮಾತನಾಡಿದರು. ಹಾಗೂ ವಚನಗಳನ್ನು ಹಾಡಿದರು. ವ್ಯಸನ ಮುಕ್ತ ದಿನಾಚರಣೆಯ ಕುರಿತು ಶಾಲೆಯ ವಿದ್ಯಾರ್ಥಿನಿಯರಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ವ್ಯಸನ ಮುಕ್ತ ದಿನಾಚರಣೆಯ ನಿಮಿತ್ಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಭಾರಿ ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ, ಸಹ ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ, ಶ್ರೀಮತಿ ಜಿ ಆರ್ ನದಾಫ್, ಸಹ ಶಿಕ್ಷಕರಾದ ಶ್ರೀ ಶಿವಾನಂದ ಬಳೂಲದ, ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ, ಶ್ರೀ ಚಂದ್ರಶೇಖರ ಹುತಗಣ್ಣ, ಕುಮಾರಿ ಅಶ್ವಿನಿ ಕಪ್ಪರದ, ಉರ್ದು ಶಾಲೆಯ ಅತಿಥಿ ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ಸಹ ಶಿಕ್ಷಕರಾದ ಬಸವರಾಜ ಬಲಕುಂದಿ ನಿರ್ವಹಿಸಿದರು, ಶ್ರೀ ಚಂದ್ರಶೇಖರ ಹುತಗಣ್ಣ ಸ್ವಾಗತಿಸಿದರು. ಕುಮಾರಿ ಸಹ ಶಿಕ್ಷಕಿಯರು ಅಶ್ವಿನಿ ಕಪ್ಪರದ ವಂದಿಸಿದರು.