ನ.16 ರಂದು ವಿಜಯಪುರದಲ್ಲಿ ಪದಗ್ರಹಣ : ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ : ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ಮುದ್ದೇಬಿಹಾಳ : ಬಂಜಾರಾ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು, ಸಮಾಜದ ಮಕ್ಕಳು ಶೈಕ್ಷಣಿಕ,ಔದ್ಯೋಗಿಕ ಕ್ಷೇತ್ರದಲ್ಲಿ ಏಳ್ಗೆ ಸಾಧಿಸಲು ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಶ್ರಮಿಸಲಿದೆ ಎಂದು ಎಆಯ್‌ಬಿಎಸ್‌ಎಸ್ ಸಂಘದ ಜಿಲ್ಲಾ ಉಪಾಧ್ಯಕ್ಷ ರವಿ ನಾಯಕ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಮುದ್ದೇಬಿಹಾಳ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.

ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಾನಂದ ಲಮಾಣಿ ಮಾತನಾಡಿ, ನ.16 ರಂದು ವಿಜಯಪುರದ ಗೋಲ್ಡನ್ ಹೈಟ್ಸ್ ಹೊಟೇಲ್‌ನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮಕ್ಕೆ ಹಲವಾರು ರಾಜಕೀಯ ಧುರೀಣರು,ಸಂಘದ ಜಿಲ್ಲಾ,ರಾಜ್ಯ ಮುಖಂಡರು ಆಗಮಿಸಲಿದ್ದು ತಾಲ್ಲೂಕಿನಲ್ಲಿ ಆಯ್ಕೆಯಾಗಿರುವ ಎಲ್ಲ ಪದಾಧಿಕಾರಿಗಳು ಆಗಮಿಸುವಂತೆ ತಿಳಿಸಿದರು.

ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಬಹಾದ್ದೂರ ರಾಠೋಡ ಮಾತನಾಡಿ, ಬಂಜಾರ ಜನಾಂಗದವರ ನೋವು,ನಲಿವು ಸಮಸ್ಯೆಗಳು ಎದುರಾದಾಗ ಸಂಘ ಅವರ ನೆರವಿಗೆ ಬರಲಿದೆ ಎಂದು ತಿಳಿಸಿದರು.ತಾಪಂ ಮಾಜಿ ಸದಸ್ಯ ಪ್ರೇಮಸಿಂಗ ಚವ್ಹಾಣ, ರಮೇಶ ನಾಯಕ,ಏಕನಾಥ ಸೀತಿಮನಿ, ಬಾಲಚಂದ್ರ ಚವ್ಹಾಣ ಇದ್ದರು.

ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಪದಾಧಿಕಾರಿಗಳು : ಬಿ.ಎಸ್.ಜಾಧವ(ಗೌರವಾಧ್ಯಕ್ಷ), ಬಹಾದ್ದೂರ ರಾಠೋಡ(ಅಧ್ಯಕ್ಷ),ಅಶೋಕ ರಾಠೋಡ,ಕೃಷ್ಣಾ ಚವ್ಹಾಣ(ಕಾರ್ಯಾಧ್ಯಕ್ಷರು),ಲಕ್ಷö್ಮಣ ರಾಠೋಡ,ಸತೀಶ ಲಮಾಣಿ,ಬಾಲಪ್ಪ ರಾಠೋಡ,ವಾಲು ರಾಠೋಡ(ಉಪಾಧ್ಯಕ್ಷ),ಲಕ್ಷö್ಮಣ ಲಮಾಣಿ(ಪ್ರಧಾನ ಕಾರ್ಯದರ್ಶಿ),ಏಕನಾಥ ಲಮಾಣಿ(ಸಹ ಕಾರ್ಯದರ್ಶಿ),ಡಿ.ಬಿ.ಲಮಾಣಿ(ಖಜಾಂಚಿ),ಸತೀಶ ರಾಠೋಡ,ಜಗದೀಶ ನಾಯಕ,ರಾಜಕುಮಾರ ಚವ್ಹಾಣ(ಸಂಘಟನಾ ಕಾರ್ಯದರ್ಶಿ), ಯುವ ಘಟಕ : ಅನಿಲ ನಾಯಕ(ಗೌರವಾಧ್ಯಕ್ಷ), ಡಾ.ಸಂತೋಷ ನಾಯಕ(ಅಧ್ಯಕ್ಷ), ಚಂದ್ರಶೇಖರ ರಾಠೋಡ(ಕಾರ್ಯಾಧ್ಯಕ್ಷ), ಜಗದೀಶ ಚವ್ಹಾಣ, ಅನಿಲ ಚವ್ಹಾಣ,ಸುನೀಲ ಚವ್ಹಾಣ, ವಿಶಾಲ ಚವ್ಹಾಣ(ಉಪಾಧ್ಯಕ್ಷರು), ಅನೀಲ ರಾಠೋಡ(ಪ್ರಧಾನ ಕಾರ್ಯದರ್ಶಿ), ಸಚಿನ ಚವ್ಹಾಣ(ಸಹ ಕಾರ್ಯದರ್ಶಿ),ಕಿರಣ ರಾಠೋಡ(ಖಜಾಂಚಿ), ಅನಿಲ ರಾಠೋಡ, ಪರಶುರಾಮ ರಾಠೋಡ,ಸೀತಾರಾಮ ರಾಠೋಡ(ಸಂಘಟನಾ ಕಾರ್ಯದರ್ಶಿಗಳು)

Latest News

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗೆ ಬಿರಾದಾರ ನೇಮಕ

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗೆ ಬಿರಾದಾರ ನೇಮಕ

ಮುದ್ದೇಬಿಹಾಳ : ಪಟ್ಟಣದ ಏಪಿಎಂಸಿ ವರ್ತಕ ಮಲ್ಲನಗೌಡ ಬಿರಾದಾರ ಅವರನ್ನು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸೋಣ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸೋಣ

ಮುದ್ದೇಬಿಹಾಳ : ಮುಸ್ಲಿಂ ಸಮಾಜದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಇಸ್ಲಾಂ ಕಮೀಟಿಗೆ ಆಡಳಿತ ಮಂಡಳಿ

ಬಸರಕೋಡ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ : ಮತ್ತೆ ಹೇಮರೆಡ್ಡಿ ಮೇಟಿ ಪೆನಲ್‌ಗೆ ಮುನ್ನಡೆ

ಬಸರಕೋಡ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ : ಮತ್ತೆ ಹೇಮರೆಡ್ಡಿ ಮೇಟಿ ಪೆನಲ್‌ಗೆ ಮುನ್ನಡೆ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 12

MUDDEBIHAL :  ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

MUDDEBIHAL : ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ಸಮೀಪದಲ್ಲಿ ಕಾಲುವೆಯಲ್ಲಿ ಕಾಲು ಜಾರಿ ಮೂವರು ಬಿದ್ದಿರುವ ಘಟನೆ

3500 ರೂ.ದರ ನಿಗದಿಗೊಳಿಸುವವರೆಗೂ ಕಬ್ಬು ಪೂರೈಕೆ ಸ್ಥಗಿತಕ್ಕೆ ರೈತರ ನಿರ್ಧಾರ

3500 ರೂ.ದರ ನಿಗದಿಗೊಳಿಸುವವರೆಗೂ ಕಬ್ಬು ಪೂರೈಕೆ ಸ್ಥಗಿತಕ್ಕೆ ರೈತರ ನಿರ್ಧಾರ

ಮುದ್ದೇಬಿಹಾಳ : ಕಬ್ಬಿಗೆ 3500 ರೂ.ದರ ನಿಗದಿ ಮಾಡುವವರೆಗೂ ಕಬ್ಬು ಕಟಾವು ಮಾಡಲು ಕಾರ್ಖಾನೆಯವರು ಆದೇಶ ನೀಡಬಾರದು.ಅಲ್ಲಿಯವರೆಗೂ ನಾವು ಹೋರಾಟ ಬಿಟ್ಟು ಕದಲುವುದಿಲ್ಲ ಎಂದು ರೈತ ಮುಖಂಡರು ತಿಳಿಸಿದರು. ತಾಲ್ಲೂಕಿನ ಯರಗಲ್ ಮದರಿ ಬಳಿ ಇರುವ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಟ್ರಾö್ಯಕ್ಟರ್‌ಗಳನ್ನು ತಂಗಡಗಿ ಗ್ರಾಮದ ಸಮೀಪದಲ್ಲಿರುವ ಅಮರಗೋಳ ಕ್ರಾಸ್‌ನಲ್ಲಿ ನಿಲುಗಡೆ ಮಾಡಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಈ ನಿರ್ಧಾರವನ್ನು ಅಧಿಕಾರಿಗಳಿಗೆ ಪ್ರತಿಭಟನಾಕಾರರು ತಿಳಿಸಿದ್ದಾರೆ. ರೈತ ಸಂಘದ ಅಧ್ಯಕ್ಷ ಬಾಲಪ್ಪಗೌಡ

ಮುದ್ದೇಬಿಹಾಳ : ತಾಪಂ ಸಹಾಯಕ ನಿರ್ದೇಶಕರಾಗಿ ಗಣಾಚಾರಿ(ಪ್ರ) ನೇಮಕ

ಮುದ್ದೇಬಿಹಾಳ : ತಾಪಂ ಸಹಾಯಕ ನಿರ್ದೇಶಕರಾಗಿ ಗಣಾಚಾರಿ(ಪ್ರ) ನೇಮಕ

ಮುದ್ದೇಬಿಹಾಳ : ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ನೂರು ದಿನಗಳ ಖಾತರಿ ಕೊಡುವ ಯೋಜನೆಯಾಗಿದ್ದು 370 ರೂ.ದಿನಗೂಲಿ ನೀಡುತ್ತಿದೆ ಎಂದು ತಾಪಂ ನೂತನ ಪ್ರಭಾರ ಸಹಾಯಕ ನಿರ್ದೇಶಕ ಎಸ್.ಎಸ್.ಗಣಾಚಾರಿ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಹಿಂದಿನ ಅಧಿಕಾರಿ ಪಿ.ಎಸ್.ಕಸನಕ್ಕಿ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೇಮಕವಾದ ಬಳಿಕ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ರೈತರ ಹೊಲದಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಕೆಲಸಗಳಿಗೆ ಪಂಚಾಯಿತಿಯಿAದ ಆದ್ಯತೆ