ಮುದ್ದೇಬಿಹಾಳ : ತಾಲ್ಲೂಕಿನ ಬೈಲಕೂರ ಗ್ರಾಮದ ಬೈಲಾದ್ರೇಶ್ವರ ಜಾತ್ರಾ ಮಹೋತ್ಸವ ಮಾ.19 ರಿಂದ 21ರವರೆಗೆ ಹಮ್ಮಿಕೊಳ್ಳಲಾಗಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾ.19 ರಂದು ಬೆಳಗ್ಗೆ 8ಕ್ಕೆ ಮ್ಯಾಟ್ ಮೇಲೆ ಕಬಡ್ಡಿ ಪಂದ್ಯಾವಳಿ,ಮದ್ಯಾಹ್ನ 3ಕ್ಕೆ ಗಡಿಗೆ ಒಡೆಯುವ ಸ್ಪರ್ಧೆ, ರಾತ್ರಿ 9.30ಕ್ಕೆ ಸನ್ಮಾನ ಸಮಾರಂಭ, ರಾತ್ರಿ 10.30ಕ್ಕೆ ಅರುಣೋದಯ ಸಾಂಸ್ಕೃತಿಕ ಜಾನಪದ ನೃತ್ಯ ನಡೆಯಲಿದೆ.
ಮಾ.20 ರಂದು ಬೆಳಗ್ಗೆ 10ಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ಬೈಲಾದ್ರೇಶ್ವರ ಬೆಳ್ಳಿ ಮೂರ್ತಿ ಹಾಗೂ ಗಂಗಸ್ಥಳಕ್ಕೆ ಕರೆಲಾಗುವುದು.ಮದ್ಯಾಹ್ನ 1ಕ್ಕೆ ಎತ್ತಿನಗಾಡಿ ರೇಸ್,ಸಾಯಂಕಾಲ 4ಕ್ಕೆ ಸ್ಲೋ ಬೈಕ್ ರೇಸ್,ಅಂದೇ ರಾತ್ರಿ ಕೊಂಡ ತುಂಬಿಸುವುದು ನಡೆಯಲಿದೆ.
ಮಾ.21 ರಂದು ಬೆಳಗ್ಗೆ ಎಲೆಪೂಜೆ ಮತ್ತು ಕುಂಕುಮ ಪೂಜೆ,ನಂತರ ಹಲಗಿ ಮೇಳ ಹಾಗೂ ಬಾಳೆಕಂಬ,ಕಳಸದ ಮೆರವಣಿಗೆ ಸಂಜೆ 6ಕ್ಕೆ ಕೊಂಡ ತುಳುಕಿಸುವ ಕಾರ್ಯಕ್ರಮ ನಡೆಯಲಿದೆ.ಸಂಜೆ 7.30ಕ್ಕೆ ಚಿತ್ತಾಕಾರದ ಮದ್ದು ಸುಡುವ ಕಾರ್ಯಕ್ರಮ ರಾತ್ರಿ 9ಕ್ಕೆ ಕೆಎಸ್ಆರ್ಟಿಸಿ ನೌಕರರಿಗೆ ಸನ್ಮಾನ , ಅಂದೇ ರಾತ್ರಿ 10.30ಕ್ಕೆ ಬೈಲಕೂರ ನವತರುಣ ನಾಟ್ಯಸಂಘದಿAದ ಹಮ್ಮಿಕೊಂಡಿರುವ ಧರ್ಮದ ಮನೆಗೆ ಕರ್ಮದ ಕಿಚ್ಚು ನಾಟಕ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







