ಮುದ್ದೇಬಿಹಾಳ : ಪಟ್ಟಣದ ಶ್ರೀ ಬನಶಂಕರಿ ದೇವಿ ರಥೋತ್ಸವ ಶನಿವಾರ ಸಾವಿರಾರು ಭಕ್ತಸಮೂಹದ ಜಯಘೋಷಗಳ ಮಧ್ಯೆ ವೈಭವದಿಂದ ಜರುಗಿತು.
ಶನಿವಾರ ಬೆಳಗ್ಗೆ ದೇವಿಗೆ ಮಹಾರುದ್ರಾಭಿಷೇಕ, ಬೆಳಗಿನ ಜಾವ ಚಂಡಿ ಹವನ ನಡೆಸಲಾಯಿತು.ದೇವಿಯ ರಥದ ಕಳಸವು ಶಂಕರಪ್ಪ ಗುಡ್ಡದ ಅವರ ಮನೆಯಿಂದ ಹೊರಟು ಕಾಳಿಕಾದೇವಿ ಗಂಗಸ್ಥಳಕ್ಕೆ ತೆರಳಿ ಮರಳಿ ತು.ಸಂಜೆ ಶಿರೋಳ ಗ್ರಾಮದಿಂದ ರಥೋತ್ಸವದ ಹಗ್ಗದ ಮಿಣಿ(ಹಗ್ಗ)ದ ಮೆರವಣಿಗೆ ಆಗಮಿಸಿತು.
ಸಂಜೆ 6.25ಕ್ಕೆ ದೇವಿಯ ಮಹಾರಥೋತ್ಸವ ಸಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ಜರುಗಿತು.ಬನಶಂಕರಿ ದೇವಿ ನಿನ್ನ ಪಾದಕ ಶಂಭುಕೋ, ಬನದೇವಿ ನಿನ್ನ ಪಾದಕ ಶಂಭುಕೋ ಎಂದು ಭಕ್ತರು ಘೋಷಣೆಗಳನ್ನು ಹಾಕಿದರು.ರಥಕ್ಕೆ ಉತ್ತತ್ತಿ,ಬಾಳೆಹಣ್ಣು,ನಿಂಬೆಹಣ್ಣು,ಲಾಡು ಎಸೆದು ಭಕ್ತಿ ಸಮರ್ಪಿಸಿದರು. ಪುರವಂತರು,ಸುಮoಗಲಿಯರು ಕಳಸದ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.ಪಿಎಸ್‌ಐ ಸಂಜಯ ತಿಪರೆಡ್ಡಿ ಅವರ ನೇತೃತ್ವದಲ್ಲಿ ಎಎಸ್‌ಐ ಕೆ.ಎಸ್.ಅಸ್ಕಿ, ಚಿದಂಬರ ಕುಲಕರ್ಣಿ,CRIME ಪಿಎಸ್‌ಐ ಆರ್.ಎಸ್.ಭಂಗಿ ಸಿಬ್ಬಂದಿ ಬಿಗಿ ಬಂದೋಬಸ್ತ್ ವಹಿಸಿದ್ದರು.ಜಾತ್ರೆಯ ನಿಮಿತ್ಯ ವಿವಿಧ ದಾನಿಗಳಿಗೆ ಸನ್ಮಾನ ಮಾಡಲಾಯಿತು.ಐದು ದಿನವೂ ಅನ್ನಸಂತರ್ಪಣೆ ದಾನಿಗಳ ನೆರವಿನಿಂದ ಕೈಗೊಳ್ಳಲಾಗಿತ್ತು.
ಅಗ್ನಿ ಮಹೋತ್ಸವ : ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಪುರವಂತರಾದ ಕಾಂತು ಹೆಬ್ಬಾಳ ಅಗ್ಗಿ ಉತ್ಸವದ ಪೂಜೆ ನಡೆಸಿದರು.ರಾತ್ರಿ ಸಾವಿರಾರು ಜನರು ಅಗ್ಗಿ ಹಾಯ್ದು ತಮ್ಮ ಭಕ್ತಿ ಸಮರ್ಪಿಸಿದರು.





