ಮುದ್ದೇಬಿಹಾಳ : ವಯೋವೃದ್ಧರು, ಮಹಿಳೆಯರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಗೆ ಬ್ಯಾಂಕ್ ಮಿತ್ರ ಸೇವಾ ಕೇಂದ್ರವು ಆರ್ಥಿಕ ಚಟುವಟಿಕೆ ಕೈಗೊಳ್ಳಲು ಹಣಕಾಸು ವಹಿವಾಟು ಸುಲಭವಾಗಿ ನಡೆಸಲು ಅವಕಾಶ ಕಲ್ಪಿಸುತ್ತದೆ ಎಂದು ಕೆನರಾ ಬ್ಯಾಂಕ ವ್ಯವಸ್ಥಾಪಕ ತಮ್ಮಣ್ಣ ಅರಳಿಮಟ್ಟಿ ಹೇಳಿದರು.
ಪಟ್ಟಣದ ಹಳೇ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ಶುಕ್ರವಾರ ಬ್ಯಾಂಕ್ ಮಿತ್ರ ಗ್ರಾಹಕ ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. 20 ಸಾವಿರ ರೂ.ಗಳವರೆಗೆ ಒಬ್ಬ ಗ್ರಾಹಕರಿಗೆ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಲಾಗಿದ್ದು ಆಧಾರ್ ಕಾರ್ಡ ಇ ಕೆವೈಸಿ ಆಗಿರುವುದು ಕಡ್ಡಾಯವಾಗಿದೆ ಎಂದರು.
ತಾಳಿಕೋಟಿ ಹಿರಿಯ ಪತ್ರಕರ್ತ ಜಿ. ಟಿ. ಘೋರ್ಪಡೆ ಮಾತನಾಡಿ, ಗ್ರಾಹಕ ಮಿತ್ರ ಸೇವಾ ಕೇಂದ್ರವು ಬಡವರು, ಸಣ್ಣ ಪುಟ್ಟ ವ್ಯಾಪಾರಸ್ಥರು ಆಧಾರವಾಗಲಿದ್ದು ರಜಾ ದಿನಗಳಲ್ಲೂ ಸೇವಾಕೇಂದ್ರದಿಂದ ಹಣಕಾಸಿನ ವಹಿವಾಟು ನಡೆಸಬಹುದಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕ್ಲಸ್ಟರ್ ಹೆಡ್ ಶಶಿ ಮಿರ್ಜಿ, ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ನಿವೃತ್ತ ನೌಕರ ಸಂಘದ ಅಧ್ಯಕ್ಷ ಎಂ. ವಿ. ಮಾಟಲದಿನ್ನಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾನಪ್ಪ ನಾಯಕ, ಬೀದಿ ಬದಿ ವ್ಯಾಪಾರಿಗಳ ಸಂಘದ ಮಾಜಿ ಅಧ್ಯಕ್ಷ ಮಹೆಬೂಬ ಜಹಾಗೀರದಾರ, ಸೇವಾಕೇಂದ್ರದ ಪ್ರತಿನಿಧಿ ಡಿ. ಟಿ. ರಾಯಚೂರ(ಉದಯ), ಮುಖಂಡ ರಾಜಶೇಖರ ಹೊಳಿ ಇದ್ದರು.