ಬೆಂಗಳೂರು: ಪ್ರತಾಪ್ ಸಿಂಹ ಮತ್ತು ನಾನು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರಿ ಹೋಗ್ತಾ ಇಲ್ಲ, ಅಪ್ಪ, ಮಕ್ಕಳ ಪಕ್ಷವಾಗಿ ಪರಿವರ್ತನೆಯಾಗಿದೆ ಎಂದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ಬಳಿಕ ಖಾಸಗಿ ಸುದ್ದಿವಾಹಿನಿ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ರಾಜ್ಯಾಧ್ಯಕ್ಷ (ವಿಜಯೇಂದ್ರ) ಮತ್ತು ಯಡಿಯೂರಪ್ಪ ಕುರಿತು ಹೈಕಮಾಂಡ್ ಗಮನಕ್ಕೆ ತರಬೇಕಿದೆ.
ಸಮಾನ ಮನಸ್ಕರು, ಸೋತ ಅಭ್ಯರ್ಥಿಗಳು, ಗೆದ್ದವರು ಎಲ್ಲರೂ ಕೂಡ ಹೈಕಮಾಂಡ್‌ಗೆ ವಿಜಯೇಂದ್ರ ಮತ್ತು ಯಡಿಯೂರಪ್ಪ ಮಾಡಿರುವ ಪಕ್ಷ ವಿರೋಧಿ ಕೆಲಸವನ್ನು ತಿಳಿಸಲು ನಿರ್ಧಾರ ಮಾಡಿದ್ದೇವೆ.
ಮೊದಲು ನಾವೆಲ್ಲರೂ ದೊಡ್ಡ ಸಭೆ ಮಾಡಲು ತೀರ್ಮಾನ ಮಾಡಿದ್ದೇವೆ. ಒಂದು ವಾರದೊಳಗೆ ಸೇರಿ, ಸಭೆ ನಡೆಸಿ ಸಭೆಯಲ್ಲಿ ಬರುವ ತೀರ್ಮಾನದಂತೆ ಹೈಕಮಾಂಡ್‌ಗೆ ದೂರು ಕೊಡಲು ತೀರ್ಮಾನ ಮಾಡಿದ್ದೇವೆ.
ನಮ್ಮ ಜೊತೆ ಸೇರುವವರು ಬಹಳ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಇಷ್ಟು ಅಸಮಾಧಾನ ಇದೆ ಅಂತಾ ನನಗೆ ಅನ್ನಿಸಿರಲಿಲ್ಲ. ಮೊನ್ನೆ ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ ಏಜೆಂಟ್ ರೀತಿ ವಿಜಯೇಂದ್ರ ಕೆಲಸ ಮಾಡುದ್ರಲ್ವಾ, ಅವರ ಮುಂದೆ ಫೈಲ್ ತಗೊಂಡ್ ಹೋಗಿ ದಯನೀಯವಾಗಿ ಒಬ್ಬ ರಾಜ್ಯಾಧ್ಯಕ್ಷರು ಪಕ್ಷಕ್ಕೆ ಶೋಭೆಯಲ್ಲ ಎಂದು ನಾ ಮಾತನಾಡಿದ ನಂತರ ಅನೇಕರು ಬಹಳ ಸತ್ಯ ಮಾತನಾಡಿದ್ದೀರಿ. ಈ ರೀತಿಯಾಗಿ ಮಾತನಾಡದೆ ಹೋದರೆ ಪಕ್ಷವೇ ಉಳಿಯುವುದಿಲ್ಲ, ಅನವಶ್ಯಕ ಪಕ್ಷ ಆಗುತ್ತೆ ಅನ್ನೋದು ಎಲ್ಲರ ಮನಸ್ಸಲ್ಲಿ ಇದೆ.
ಈ ಕುರಿತು ಚಾಮರಾಜನಗರದಿಂದ ಬೀದರ್ ವರೆಗೆ ಎಲ್ಲೆಡೆಯಿಂದ ಪೋನ್ ಬರ್ತಾ ಇದೆ. ಇದರದೇ ಸಭೆಯನ್ನ ಕೆಲವೇ ದಿನಗಳಲ್ಲಿ ಮಾಡ್ತೇವೆ ಎಂದು ಯತ್ನಾಳ್ ಹೇಳಿದ್ದಾರೆ.