ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೇಮರೆಡ್ಡಿ ಮೇಟಿ,ಉಪಾಧ್ಯಕ್ಷರಾಗಿ ಬಾಬು ಸೂಳಿಭಾವಿ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ತಲಾ ಒಂದೊAದೇ ನಾಮಪತ್ರ ಸಲ್ಲಿಕೆ ಆದ ಹಿನ್ನೆಲೆಯಲ್ಲಿ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಎಸ್.ಉತ್ನಾಳ ತಿಳಿಸಿದರು.
ಎರಡನೇ ಅವಧಿಗೆ ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಹೇಮರೆಡ್ಡಿ ಮೇಟಿ ಮಾತನಾಡಿ, ಆಡಳಿತ ಮಂಡಳಿಯ ಸದಸ್ಯರ ವಿಶ್ವಾಸವನ್ನು ನಾವು ಉಳಿಸಿಕೊಳ್ಳುತ್ತೇವೆ.ಹಿಂದಿನವರು ಮಾಡಿದ ಲೋಪಗಳು ರೈತರಿಗೆ ಸಮಸ್ಯೆಯನ್ನು ಉಂಟು ಮಾಡಿದ್ದವು.ಆದರೆ ನಾವು ಕಳೆದ ಅವಧಿಯಲ್ಲಿ 700ಕ್ಕೂ ಹೆಚ್ಚು ರೈತರಿಗೆ ಸಾಲ ಸೌಲಭ್ಯ ನೀಡಿದ್ದೇವೆ.ರಸಗೊಬ್ಬರ,ಬೀಜದ ಮಳಿಗೆ ಆರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದೇವೆ.ಸಂಘಕ್ಕೆ ಸ್ವಂತ ನಿವೇಶನ ಖರೀದಿಸಿದ್ದು ಮುಂದಿನ ವರ್ಷ ಸೊಸೈಟಿಯ ವಾರ್ಷಿಕ ಸಭೆಯನ್ನು ಸಂಘದ ನೂತನ ಕಟ್ಟಡದಲ್ಲಿಯೇ ನಡೆಸುವ ಕಾರ್ಯವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಬಾಬು ಸೂಳಿಭಾವಿ ಮಾತನಾಡಿದರು.ಸಂಘದ ಸದಸ್ಯರಾದ ಸಿಂಧೂಬಲ್ಲಾಳ ನಾಡಗೌಡ, ಸುನೀಲ ಸೂಳಿಭಾವಿ,ಸೋಮಪ್ಪ ಮೇಟಿ,ಬಸವರಾಜ ಪಾಟೀಲ,ಲಕ್ಕಪ್ಪ ಸೋಮನಾಳ, ಶಾಂತಪ್ಪ ಸಂಕನಾಳ,ಮಡಿವಾಳಪ್ಪ ತಳವಾರ, ಶೇಖಪ್ಪ ಚಲವಾದಿ, ಪಾರ್ವತಿ ಸಾಲಿಮಠ, ಸಿದ್ದಮ್ಮ ಬಿರಾದಾರ, ಗ್ರಾಮದ ಮುಖಂಡರಾದ ನೀಲಕಂಠರಾವ ನಾಡಗೌಡ(ಅಪ್ಪುಧಣಿ), ಶ್ರೀಶೈಲ ಮೇಟಿ, ಡಿ.ಬಿ.ಬೇಲಾಳ, ಮಂಜುನಾಥ ಚಲವಾದಿ,ಗೌಡಪ್ಪಗೌಡ ಪಾಟೀಲ,ಪ್ರಕಾಶ ಬಿರಾದಾರ, ಅಂದಾನಯ್ಯ ಸಾಲಿಮಠ ಮೊದಲಾದವರು ಇದ್ದರು.







