BJP letter to police to prevent defamation of portraits

ಭಾವಚಿತ್ರಗಳಿಗೆ ಅಪಮಾನ ತಡೆಗಟ್ಟಲು ಪೊಲೀಸರಿಗೆ ಬಿಜೆಪಿ ಪತ್ರ

ಭಾವಚಿತ್ರಗಳಿಗೆ ಅಪಮಾನ ತಡೆಗಟ್ಟಲು ಪೊಲೀಸರಿಗೆ ಬಿಜೆಪಿ ಪತ್ರ

ಯತ್ನಾಳ ಆಪ್ತ, ಜಿಪಂ ಮಾಜಿ ಉಪಾಧ್ಯಕ್ಷ ದೇಸಾಯಿ ವಿರುದ್ಧ ಕ್ರಮಕ್ಕೆ ಆಗ್ರಹ

ಮುದ್ದೇಬಿಹಾಳ : ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಅವರನ್ನು ಉಚ್ಚಾಟಿಸಿದ್ದನ್ನು ವಿರೋಧಿಸುವ ನೆಪದಲ್ಲಿ ಪ್ರತಿಭಟನಾ ರ‍್ಯಾಲಿ ನೆಪವಾಗಿಟ್ಟುಕೊಂಡು ಬಿಜೆಪಿ ನಾಯಕರ ಭಾವಚಿತ್ರಗಳಿಗೆ ಅಪಮಾನಿಸುವುದನ್ನು ತಡೆಗಟ್ಟುವಂತೆ ಇಲ್ಲಿನ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಪೊಲೀಸ್ ಠಾಣೆಗೆ ಭಾನುವಾರ ಪತ್ರ ನೀಡಿದ್ದಾರೆ.

ಈ ಕುರಿತು ಸಿಪಿಐಗೆ ಬರೆದಿರುವ ಪತ್ರದಲ್ಲಿ ಏ.7 ರಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹಾಗೂ ಕಾಂಗ್ರೆಸ್‌ನ ಕೆಲವು ಮುಖಂಡರಗಳ ನೇತೃತ್ವದಲ್ಲಿ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಿ ಬಿಜೆಪಿ ನಾಯಕರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಭಾವಚಿತ್ರಗಳಿಗೆ ಅಪಮಾನಿಸುವ ಉದ್ದೇಶವಿದ್ದು ಜಿಲ್ಲೆಯ ಬೇರೆ ಕಡೆಯಿಂದ ಜನರನ್ನು ಕರೆಯಿಸಿ ಬಿಜೆಪಿ ನಾಯಕರ ಭಾವಚಿತ್ರಗಳಿಗೆ ಅಪಮಾನಿಸಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಕಂಡು ಬಂದಿದ್ದು ಕೂಡಲೇ ಇಂತಹ ಬೆಳವಣಿಗೆಯನ್ನು ಪೊಲೀಸರು ತಡೆಗಟ್ಟಬೇಕುರ‍್ಯಾಲಿಯಲ್ಲಿ ಬಿಜೆಪಿ ನಾಯಕರ ಭಾವಚಿತ್ರಗಳನ್ನು ಬಳಸುವುದಕ್ಕೆ ನಿರ್ಬಂಧಿಸಬೇಕು ಎಂದು ತಿಳಿಸಲಾಗಿದೆ.

ಬಿಜೆಪಿ ಪಕ್ಷದ ನಾಯಕರನ್ನು ಅವಮಾನಿಸುತ್ತಾ ಸಾಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ಇದಕ್ಕೂ ಮೀರಿ ಬಿಜೆಪಿ ನಾಯಕರ ಭಾವಚಿತ್ರಗಳನ್ನು ಬಳಸಿ ಅವಮಾನಿಸಿದ್ದೇ ಆದಲ್ಲಿ ಉಗ್ರ ಪ್ರತಿರೋಧ ತೋರಬೇಕಾಗುತ್ತದೆ. ಇದರಿಂದ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿ ಶಾಂತಿಭಂಗವಾದಲ್ಲಿ ಅದಕ್ಕೆ ಪೊಲೀಸ್ ಇಲಾಖೆಯಯೇ ಹೊಣೆ ಹೊರಬೇಕಾಗುತ್ತದೆ ಎಂದು ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಸಿಪಿಐಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Latest News

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಧಾರವಾಡ, ಜುಲೈ 1: ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆ,

ಆರ್.ಎಂ.ಎಸ್.ಎ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಆರ್.ಎಂ.ಎಸ್.ಎ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಯ ಸನ್

ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ

ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ

ಮುದ್ದೇಬಿಹಾಳ : ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು ಕೂಡಲೇ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕೆಂದು ಆಗ್ರಹಿಸಿ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ಹುನಗುಂದ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಮರೇಶ ನಾಗೂರ ಹಾಗೂ ಪ್ರಧಾನ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ ಇದೇ 29 ನೇ ಭಾನುವಾರ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ದಿ ಗ್ರಾಂಡ್‌ ಕ್ಯಾಸಲ್‌, ಗೇಟ್‌ ಸಂಖ್ಯೆ 6 ರಲ್ಲಿ ಸಂಜೆ 5 ರಿಂದ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯೋಗದಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ವಿಶ್ವದ ಐವರು ಶ್ರೇಷ್ಠ ಯೋಗ ಸಾಧಕರಿಗೆ ಪ್ರಶಸ್ತಿ

ನಾರಾಯಣಪುರ ಅಣೆಕಟ್ಟೆ ನಿಂದ 1,10,000 ಕ್ಯೂಸೆಕ್ ನೀರು ಬಿಡುವ ಸಾಧ್ಯತೆ

ನಾರಾಯಣಪುರ ಅಣೆಕಟ್ಟೆ ನಿಂದ 1,10,000 ಕ್ಯೂಸೆಕ್ ನೀರು ಬಿಡುವ ಸಾಧ್ಯತೆ

ನಾರಾಯಣಪುರ : ಅಣೆಕಟ್ಟಿನ ಪ್ರಸ್ತುತ ನೀರಿನ ಸಂಗ್ರಹವು 80.27% ಇರುತ್ತದೆ. ಕೃಷ್ಣಾ ನದಿಗೆ ಹೊರಹರಿವು 84,445 ಕ್ಯೂಸೆಕ್ ಇರುವದರಿಂದ ಆಣೆಕಟ್ಟಿನ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಅಣೆಕಟ್ಟೆಯ ಹೊರಹರಿವು ಹೆಚ್ಚಾಗಲಿದೆ ಎಂದು ಪರಿಗಣಿಸಲಾಗಿದೆ. ನಾರಾಯಣಪುರ ಆಣೆಕಟ್ಟೆಗೆ ಸುಮಾರು 1,10,000 ಕ್ಯೂಸೆಕ್ ಒಳಹರಿವು ಬರುವ ಸಾಧ್ಯತೆಯಿದೆ. ಮದ್ಯಾಹ್ನ 3 ಗಂಟೆ ನಂತರ, ಪ್ರಸ್ತುತ ಇರುವ ಹೊರಹರಿವನ್ನು 84,445 ಕ್ಯೂಸೆಕ್ ರಿಂದ 1,10,000 ಕ್ಯೂಸೆಕ್ ಗೆ ಹಂತ ಹಂತವಾಗಿ ಹೆಚ್ಚಿಸಲಾಗುವುದು