ಶಿವಮೊಗ್ಗ: ಅಧಿಕಾರವನ್ನೆಲ್ಲ ಒಂದೇ ಕುಟುಂಬಕ್ಕೆ ನೀಡಿದರೆ ಹೀಗೆಯೇ ಆಗೋದು, ತಮಗೆ ಬೇಕಾದವರಿಗೆ ಸ್ಥಾನಮಾನ ನೀಡಿರುವುರಿಂದಲೇ ಪಕ್ಷಕ್ಕೆ ಇಂಥ ದುಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ (K.S. Eshwarappa) ಅವರು, ಬಿಜೆಪಿಯಲ್ಲಿನ ಬೆಳವಣಿಗೆ ಕುರಿತು ಬೇಸರ ವ್ಯಕ್ತಪಡಿಸಿ, ಯಡಿಯೂರಪ್ಪ ಕುಟುಂಬದ ಕಡೆಗೆ ಬೊಟ್ಟು ಮಾಡಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ 12 ಜನ ಬೆಳಗಾವಿಯಲ್ಲಿ ಸಭೆ ನಡೆಸಿದ್ದು, ನನಗೆ ಆಘಾತವಾಗಿದೆ. ಅವರು ಬೆಳಗಾವಿಯ ಬಳಿಕ ಬೆಂಗಳೂರಿನಲ್ಲಿ ಸಭೆ ನಡೆಸುವುದಾಗಿ ಹೇಳಿದ್ದು, ಅವರು ಪಾದಯಾತ್ರೆ ನಡೆಸಿದರೆ ಗಲ್ಲಿ ಗಲ್ಲಿಗಳಲ್ಲಿ ಬಿಜೆಪಿ ಎರಡಾಗುತ್ತದೆ. ಕೇಂದ್ರ ನಾಯಕರು ಮಧ್ಯ ಪ್ರವೇಶಿಸದೇ ಹೋದರೆ ಪ್ರತಿ ತಾಲೂಕಿನಲ್ಲೂ ಪಕ್ಷ ಇಭ್ಭಾಗವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Join Our Telegram: https://t.me/dcgkannada
ಬೆಳಗಾವಿಯಲ್ಲಿ ಸಭೆ ನಡೆಸಿದ ನಾಯಕರು ಸಂಘಟನೆಯಲ್ಲಿದ್ದರು, ಪಕ್ಷ ಕಟ್ಟಿದವರು. ತಮಗೆ ಏನು ನೋವಾಗಿದೆ ಎಂದು ಹೇಳಿಕೊಂಡಿಲ್ಲ. ಅವರು ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ. 12 ಜನ ಮಾತ್ರ ಸಭೆ ನಡೆಸಿದ್ದಾರೆ ಎಂದುಕೊಂಡು ಕೇಂದ್ರ ನಾಯಕರು ನಿರ್ಲಕ್ಷ್ಯ ಮಾಡಬಾರದು ಎಂದರು.
ಪಕ್ಷದಡಿ ಕೆಲಸ ಮಾಡಿದ್ದರೂ ಬಹಳ ಜನರಿಗೆ ನೋವಿದೆ. ಲೋಕಸಭಾ ಚುನಾವಣೆ ಸಂದರ್ಭ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು. ಯಡಿಯೂರಪ್ಪ ಅವರ ಕುಟುಂಬದ ಕೈಗೆ ಅಧಿಕಾರ ನೀಡಿದ್ದಕ್ಕೇ ಪಕ್ಷ 27 ರಿಂದ 17 ಸ್ಥಾನಕ್ಕೆ ಇಳಿದಿದ್ದು. ಈಗ ಜೆಡಿಎಸ್ ಹೊಂದಾಣಿಕೆ ಮಾಡದೆ ಹೋಗಿದ್ದರೆ ಹೇಗೆ ಎಂದು ಈಶ್ವರಪ್ಪ (K.S. Eshwarappa) ಪ್ರಶ್ನಿಸಿದರು.
ಇದನ್ನೂ ಓದಿ: BJP Rebel Leaders: ಬಿಜೆಪಿಯಲ್ಲೀಗ 20 ಬಣ! ಕೂಡಲಸಂಗಮ to ಬಳ್ಳಾರಿ ಪಾದಯಾತ್ರೆಗೆ ಡೇಟ್ ಫಿಕ್ಸ್?
22 ಭಿನ್ನಮತೀಯ ಶಾಸಕರು ನಡೆಸಬೇಕೆಂದಿರುವ ಪಾದಯಾತ್ರೆಯನ್ನು ತಡೆಯಲೇಬೇಕು, ಈ ಪಾದಯಾತ್ರೆಯ ಬಗ್ಗೆ ಕೇಂದ್ರದ ನಾಯಕರೂ ಕಿವಿಗೆ ಹಾಕಿಕೊಳ್ಳದೆ ಹೋದರೆ ರಾಜ್ಯದಲ್ಲಿ ಪಕ್ಷಕ್ಕೆ ದುರ್ದೆಶೆ ಶುರುವಾಗಿದೆ ಅಂತಲೇ ಅರ್ಥ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 66 ಸ್ಥಾನ ಮಾತ್ರ ಗಳಿಸಿದ್ದ ಪಕ್ಷ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೆಷ್ಟು ಸ್ಥಾನಗಳಿಗೆ ಕುಸಿಯಲಿದೆಯೋ ಎಂದು ಈಶ್ವರಪ್ಪ ಹೇಳಿದರು.