ಲಿಂಗಸಗೂರ ಘಟಕದ ಕೆ.ಎಸ್.ಆರ್.ಟಿ.ಸಿ. ಬಸ್ ಲಿಂಗಸಗೂರನಿಂದ ಮುದ್ದೇಬಿಹಾಳಕ್ಕೆ ತೆರಳುವಾಗ ಬಸ್ ಸ್ಟೇರಿಂಗ್ ಕಟ್ ಆಗಿದೆ. ಚಾಲಕನ ಮುಂಜಾಗ್ರತಾ ಕ್ರಮದಿಂದ ಬಸ್ ನಲ್ಲಿನ 22 ಜನರ ಪ್ರಾಣ ಉಳಿದಿದೆ. ನಾಗರ ಪಂಚಮಿ ಹಬ್ಬದಂದು ದೊಡ್ಡ ಅನಾಹುತ ತಪ್ಪಿದೆ.
ಲಿಂಗಸಗೂರನಿಂದ ಮುದ್ದೇಬಿಹಾಳಕ್ಕೆ ತೆರಳುವ ಬಸ್ ನಲ್ಲಿ ಸುಮಾರು 22 ಜನ ಪ್ರಯಾಣಿಕರಿದ್ದರು. ಬಸ್ ಸ್ಟೇರಿಂಗ್ ಕಟ್ ಆಗಿದ್ದರಿಂದ ಅವರಿಗೆ ಏನು ಆಗುತ್ತಿದೆ ಎಂದು ತಿಳಿಯುವದರಲ್ಲಿ ಅಚಾತುರ್ಯ ನಡೆದಿದೆ. ಏಕಾಏಕಿ ಬಸ ಟೇರಿಂಗ್ ಕಟ್ ಆಗಿರುವುದು ತಿಳಿದ ಚಾಲಕ ಮೆಹಬೂಬ್ ಬಲಕ್ಕೆ ಜಮೀನಿನಲ್ಲಿ ತಿರುಗಿಸಿ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.
ಅದೃಷ್ಟದಿಂದ ಅಪಘಾತದಲ್ಲಿ ಪ್ರಾಣಾಯಘಾತವಾಗಿಲ್ಲ ಎಂದು ಪ್ರಯಾಣಿಕರು ಮಾತನಾಡತೊಡಗಿದರು. ನಿರ್ವಾಹಕ ಶಂಕರ್ ಗೌಡರಿಗೆ ಎಡ ಕಾಲಿನಲ್ಲಿ ಒಳಪೆಟ್ಟು ಹಾಗೂ ಒಬ್ಬ ಹಿರಿಯ ವ್ಯಕ್ತಿಯ ಎಡ ಕಣ್ಣಿನ ಮೇಲಬ್ದಿಯ ಮೇಲಭಾಗದಲ್ಲಿ ಗಾಯಗಳಾಗಿವೆ. ಸ್ಥಳಕ್ಕೆ ನಾರಾಯಣಪುರ ಪೋಲಿಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡಡದುಕೊಂಡರು.
ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ