ಮುದ್ದೇಬಿಹಾಳ : ಕುಂಟೋಜಿ ಗ್ರಾಮ ಪಂಚಾಯತ ವಾರ್ಡ್ ನಂಬರ್ ೩ರ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಾಂತಾ ವಿರೇಶ ಮದರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಕೆ.ಮಾಳಗೊಂಡ ಘೋಷಿಸಿದರು.
ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಫಲಿತಾಂಶ ಘೋಷಣೆ ಮಾತನಾಡಿದ ಅವರು, ಅವರ ಪ್ರತಿಸ್ಪರ್ಧಿ ಕವಿತಾ ಶಿರಗುಪ್ಪಿ ಅವರ ನಾಮಪತ್ರ ತಿರಸ್ಕೃತಗೊಂಡ ಕಾರಣ ಮದರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ವಿಜಯೋತ್ಸವದಲ್ಲಿ ಮುಖಂಡ ವಿರೇಶ ಮದರಿ,ಚಂದ್ರಶೇಖರ ಪಾಟೀಲ್, ನಾಗಲಿಂಗಯ್ಯ ಮಠ, ಗುರುಲಿಂಗಪ್ಪ ಸುಲ್ಲಳ್ಳಿ, ರವಿ ಜಗಲಿ, ಮಂಜು ಹೆಬ್ಬಾಳ, ಮಲ್ಲಿಕಾರ್ಜುನ ನಾಟೀಕಾರ, ಮಲ್ಲು ಹಿರೇಕುರುಬರ, ಗುರುನಾಥ ಮಡಿವಾಳರ, ಸಚಿನ ಚಿನ್ನಾಪೂರ,ಅನಂದ ಕಾಟಿ ಮೊದಲಾದವರು ಇದ್ದರು. ಚುನಾವಣೆ ಸಹಾಯಕರಾದ ಆಯ್.ಬಿ.ಹಿರೇಮಠ ಕಾರ್ಯನಿರ್ವಹಿಸಿದರು.