ದಾಬಸ್‌ಪೇಟೆ: ಯುವತಿ ಜತೆಗೆ ಕಾರಿ ನಲ್ಲಿ ಹೋಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ಕಾರಿನಿಂದ ಯುವಕನೊಬ್ಬ ಕೆಳಗೆ ಬಿದ್ದಿರುವ (Car Accident) ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Join Our Telegram: https://t.me/dcgkannada
ಇಸ್ಲಾಂಪುರದ ಸುಫಿಯಾನ್ (20)ಕೆಳಗೆ ಬಿದ್ದ ಯುವಕ, (Car Accident) ಕುಣಿಗಲ್ ರಸ್ತೆಯ ಜಾಸ್ ಟೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಯುವಕ ಹಾಗೂ ಯುವತಿ ಇಬ್ಬರೂ ಕಾರಿನಲ್ಲಿ ತೆರಳಿದ್ದರು.
ಯುವತಿ ಕಾರು ಚಾಲನೆ ಮಾಡುತ್ತಿದ್ದು ಇದ್ದಕ್ಕಿದಂತೆ ಕಾರಿನ ಬಾಗಿಲು ತೆಗೆದು ಕೆಳಗೆ ಬಿದ್ದಿದ್ದಾನೆನ್ನಲಾಗಿದೆ. (Car Accident) ಸಣ್ಣಪುಟ್ಟ ಗಾಯಗಳಾಗಿದ್ದು, ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಅನರ್ಹತೆ: ವಿನೇಶ್ ಫೋಗಟ್‌ರಿಂದ ಪದಕ ಕಸಿಯಲಾಗಿದೆ ಎಂದು ಟ್ವೀಟ್ ಮಾಡಿದ ಕ್ರಿಕೆಟ್ ದೇವರು!
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.