ಕುಳಗೇರಿ ಕ್ರಾಸ್: ಹುಬ್ಬಳ್ಳಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದ ಕಾರು ಕುಳಗೇರಿ ಕ್ರಾಸ್ ನ ನಯರಾ ಪೆಟ್ರೋಲ್ ಪಂಪ್ ಹತ್ತಿರ ಅಪಘಾತಕ್ಕಿಡಾಗಿದೆ. ತಂದೆ-ತಾಯಿ ಹಾಗೂ ಮಗ ಕಾರ್ ನಲ್ಲಿದ್ದರು. ಮಗ ಕಾರ್ ಚಲಾಯಿಸುತ್ತಿದ್ದರು.
ತಂದೆಗೆ ತೀವ್ರವಾದ ಗಾಯಗಳಾಗಿದ್ದು, ರಮೇಶ ಶಿವಲಿಂಗಪ್ಪ ಸಜ್ಜನವರ (60) ಎಂದು ಗುರುತಿಸಲಾಗಿದೆ. ಮಗ ಆಯುಷ್ (30) ಕಾರು ಚಲಾಯಿಸುತ್ತಿದ್ದರು. ಪೆಟ್ರೋಲ್ ಪಂಪ್ ಹತ್ತಿರ ಬೈಕ್ ಸವಾರನ್ನು ಉಳಿಸಲು ಹೋಗಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ರಭಸವಾಗಿ ಡಿಕ್ಕಿ ಹೊಡೆದ ಕಾರಣಕ್ಕೆ ಕಾರು ನುಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ತಂದೆ ರಮೇಶ ಅವರಿಗೆ ತೀವ್ರತರವಾದ ಗಾಯಗಳಾಗಿವೆ. ಮಗ ಆಯುಷ್ಯ ಅವರಿಗೆ ಸ್ವಲ್ಪ ಪ್ರಮಾಣದಲ್ಲಿ ಗಾಯಗಳಾಗಿವೆ. ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರಾದ ಸಿದ್ದು ಬಿರಾದಾರ ಹಾಗೂ ರವಿ ಮರೆನ್ನವರ ರವರು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ.