ಮುದ್ದೇಬಿಹಾಳ : ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ದಿ.ನಾರಾಯಣರಾವ ಭೋಸಲೆ ಹಾಗೂ ರಾಮರಾವ ಕುಲಕರ್ಣಿ ಸ್ಮರಣಾರ್ಥ ಜ.23 ರಂದು ಸಂಜೆ 5.45ಕ್ಕೆ ಪಟ್ಟಣದ ಓಂ ಶಾಂತಿ ಭವನದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಾಗತಿಕ ಶಾಂತಿ ಹಾಗೂ ಸೌಹಾರ್ದತೆ ಕುರಿತು ಉಪನ್ಯಾಸ ನಡೆಯಲಿದೆ.ದಿವ್ಯ ಸಾನಿಧ್ಯವನ್ನು ಓಂಶಾAತಿ ಭವನದ ಬ್ರಹ್ಮಕುಮಾರಿ ಮಂಜುಳಾ ಅಕ್ಕನವರು, ಬ್ರಹ್ಮಕುಮಾರಿ ರೇಣುಕಾ ಅಕ್ಕನವರು ವಹಿಸುವರು.ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಅಧ್ಯಕ್ಷತೆ ವಹಿಸುವರು.
ಅರಿಹಂತ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಾವೀರ ಸಗರಿ,ಹನುಮಾನ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಪಿ.ಕುಲಕರ್ಣಿ , ದತ್ತಿ ದಾನಗಳಾದ ರಾಜೇಂದ್ರ ಭೋಸಲೆ,ಸರೋಜಾ ಕುಲಕರ್ಣಿ, ಕಸಾಪ ಗೌರವ ಕಾರ್ಯದರ್ಶಿ ವಾಯ್.ಎಚ್.ವಿಜಯಕರ್, ಉದ್ಯಮಿದಾರ ರವೀಂದ್ರ ಭೋಸಲೆ ಮುಖ್ಯ ಅತಿಥಿಗಳಾಗಿ ಆಗಮಿಸುವರು.ನಿವೃತ್ತ ಶಿಕ್ಷಕ ಶಂಕರ ಬೇವಿನಗಿಡದ ಉಪನ್ಯಾಸ ನೀಡುವರು.







