ವಿಜಯಪುರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ನಾಮಕರಣ ಮಾಡಿದ ಸಿಎಂ ಸಿದ್ದರಾಮಯ್ಯ

ವಿಜಯಪುರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ನಾಮಕರಣ ಮಾಡಿದ ಸಿಎಂ ಸಿದ್ದರಾಮಯ್ಯ

82 ಕೋಟಿ ರೂ.ವೆಚ್ಚದ ಕಾಮಗಾರಿ ಉದ್ಘಾಟನೆ,731 ಕೋಟಿ ಕೆಲಸಗಳಿಗೆ ಶಂಕುಸ್ಥಾಪನೆ

ವಿಜಯಪುರ : ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮನವರ ಹೆಸರು ನಾಮಕರಣ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ನಗರದಲ್ಲಿ ಶುಕ್ರವಾರ 82 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ, 731 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕು ಸ್ಥಾಪನೆ, 56 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು.

ಕಿತ್ತೂರು ಚೆನ್ನಮ್ಮನವರು 1857 ರ ಸಿಪಾಯಿ ದಂಗೆಗೂ ಮುನ್ನ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ್ದರು.ಚೆನ್ನಮ್ಮ ಬ್ರಿಟೀಷರ ವಿರುದ್ದ ಛಲದಿಂದ ಹೋರಾಟ ಮಾಡಿ ಥ್ಯಾಕರೆಯನ್ನು ಸೋಲಿಸಿದ್ದರು.
ನಂತರ ಎರಡನೇ ಯುದ್ದದಲ್ಲಿ ಚೆನ್ನಮ್ಮ ಸೋತರು. ಅದಕ್ಕೆ ಕಾರಣ ನಮ್ಮವರೇ,
ಇನ್ನೂರು ವರ್ಷಗಳ ಕಾಲ ಬ್ರಿಟಿಷರು ನಮ್ಮನ್ನಾಳಲು ನಮ್ಮವರನ್ನೇ ಅಧೀನರನ್ನಾಗಿ ಮಾಡಿಕೊಂಡು ಆಳಿದರು.ಚೆನ್ನಮ್ಮನ ವಿಚಾರದಲ್ಲಿಯೂ ನಮ್ಮವರೇ ಅವರ ಸೋಲಿಗೆ ಕಾರಣವೆಂದು ಸಿಎಂ ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ವೆಲೋಡ್ರಮ್ ಲೋಕಾರ್ಪಣೆ ಮಾಡಿದ್ದೇವೆ.ಈ ಭಾಗದಲ್ಲಿ ಸೈಕ್ಲಿಸ್ಟ್ ಗಳು ಹೆಚ್ಚು. ಹಿಂದೆ 2013 -18 ರಲ್ಲಿ ಸಿಎಂ ಆಗಿದ್ದಾಗ ವೆಲೋಡ್ರಮ್‌ಗೆ ಶಿಲಾನ್ಯಾಸ ಮಾಡಿದ್ದೆ.ಇಂದು ವೆಲೋಡ್ರಮ್ ಉದ್ಘಾಟನೆ ನಾವೇ ಮಾಡಿದ್ದೇವೆ.ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಹೋರಾಟ ಮಾಡಲಾಗಿದೆ.ಹಿಂದೆ ಬಿಜೆಪಿ ಸರ್ಕಾರ ಪಿಪಿಪಿ ಮಾದರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಿತ್ತು.ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ಸರ್ಕಾರಿ ಮೆಡಿಕಲ್ ಗೆ ಬೇಡಿಕೆ ಇಟ್ಟಿದ್ದರು.ನಮ್ಮ ಸರ್ಕಾರವೇ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುತ್ತದೆ ಎಂದು ಘೋಷಣೆ ಮಾಡಿದರು.

ಯಾರೂ ಇದಕ್ಕಾಗಿ ಹೋರಾಟ ಮಾಡುವುದು ಅವಶ್ಯಕತೆಯಿಲ್ಲ.ಜಿಲ್ಲೆಯಲ್ಲಿ ಪಿಪಿಪಿ ಮಾಡೆಲ್ ಮೆಡಿಕಲ್ ಕಾಲೇಜು ಬೇಡ ಎಂದು ಹೋರಾಟ ಮಾಡುತ್ತಿದ್ದರು.ಹಿಂದಿನ ಬಿಜೆಪಿ ಸರ್ಕಾರ ಪಿಪಿಪಿ ಮಾಡೆಲ್ ಮೆಡಿಕಲ್ ಕಾಲೇಜು ಘೋಷಣೆ ಮಾಡಿತ್ತು.ಆದರೆ ನಾವು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುತ್ತೇವೆ ಎಂದು ಹೇಳಿದರು.
ನಿಮ್ಮಿಂದಲೇ ಕಳೆದ ಚುನಾವನೆಯಲ್ಲಿ 136 ಸ್ಥಾನ ಗೆದ್ದಿದ್ದು ಜಿಲ್ಲೆಯ 8 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ.ಅದರಿಂದಲೇ ನಾವು ಸರ್ಕಾರ ಮಾಡಲು ಸಾದ್ಯವಾಗಿದೆ.136 ಸ್ಥಾನ ಗೆಲ್ಲಲು ನಿಮ್ಮ ಆಶಿರ್ವಾದ ಕಾರಣವೆಂದ ಸಿಎಂ, 45 ವರ್ಷಗಳಿಂದ ರಾಜ್ಯ ಸುತ್ತಾಡುತ್ತಿದ್ದೇನೆ.ಹಲವಾರು ಬಾರಿ ವಿಜಯಪುರಕ್ಕೆ ಬಂದಿದ್ದೇನೆ ಬಂದಾಗ ನೀವು ಆಶೀರ್ವಾದ ಮಾಡಿದ್ದೀರಿ.ಇಂದು ಯತ್ನಾಳ ಹಲವಾರು ಬೇಡಿಕೆಗಳನ್ನು ನೀಡಿದ್ದಾರೆ.ನಗರದಲ್ಲಿ ಮೇಲ್ಸೇತುವೆಗೆ 162 ಕೋಟಿ ಹಣ ಕೇಳಿದ್ದಾರೆ.ಅದನ್ನು ಮಾಡಿಕೊಡುತ್ತೇನೆಂದು ಎಂದು ಸಿಎಂ ಘೋಷಣೆ ಮಾಡಿದರು.

ಕನಕದಾಸ ವೃತ್ತದಿಂದ ಶಿವಾಜಿ ಚೌಕ್‌ವರೆಗೂ ಮೇಲ್ಸೇತುವೆ ಮಾಡುತ್ತೇವೆ.7 ವರ್ಷ 239 ದಿನಗಳ ಕಾಲ ಸಿಎಂ ಆಗಿದ್ದ ಅರಸು, ಅವರಿಗಿಂತ ಹೆಚ್ಚು ಕಾಲ ಸಿಎಂ ಆಗಿದ್ದೇನೆ.ಇದಕ್ಕೆ ನಿಮ್ಮೆಲ್ಲರ ಆಶಿರ್ವಾದ ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿ ಖರ್ಗೆ ಅವರ ಆಶಿರ್ವಾದ ಕಾರಣ.ಹೆಚ್ಚು ಕಾಲ ಸಿಎಂ ಆಗಲು ಜನರು ಕಾರಣ ಅದಕ್ಕಾಗಿ ಎಲ್ಲ ಜನರಿಗೆ ಅಭಿನಂದಿಸುತ್ತೇನೆ.ಜಿಲ್ಲೆಯ ಸಚಿವ ಎಂ ಬಿ ಪಾಟೀಲ ಹಾಗು ಇತರರು ನನಗೆ ಸನ್ಮಾನ ಮಾಡಿರೋ ಕಾರಣ ಅವರನ್ನೂ ಅಭಿನಂದಿಸುವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ತಡವಾಗಿ ಬಂದ ಕಾರಣ ತಪ್ಪಾಗಿದೆ. ಇದಕ್ಕಾಗಿ ತಮ್ಮೆಲ್ಲರ ಕ್ಷಮೆ ಕೋರುತ್ತೇನೆ ಎಂದು ಹೇಳಿದರು.ಡಿಸಿಎಂ ಡಿ.ಕೆ.ಶಿವಕುಮಾರ,ಸಚಿವರಾದ ಎಂ.ಬಿ.ಪಾಟೀಲ,ಶಿವಾನAದ ಪಾಟೀಲ,ಡಾ.ಎಚ್.ಸಿ.ಮಹದೇವಪ್ಪ,ರಾಮಲಿಂಗಾರೆಡ್ಡಿ ಸೇರಿದಂತೆ ಜಿಲ್ಲೆಯ ಶಾಸಕರು,ಜನಪ್ರತಿನಿಧಿಗಳು,ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Latest News

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ಮುದ್ದೇಬಿಹಾಳ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ:   ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ

ಚಿಣ್ಣರ ಬಣ್ಣದೋಕುಳಿ ಸಡಗರ ಹೆಚ್ಚಿಸಿದ ವರ್ಣರಂಜಿತ ಕಾರಂಜಿ

ಚಿಣ್ಣರ ಬಣ್ಣದೋಕುಳಿ ಸಡಗರ ಹೆಚ್ಚಿಸಿದ ವರ್ಣರಂಜಿತ ಕಾರಂಜಿ

ಮುದ್ದೇಬಿಹಾಳ : ಬಣ್ಣದ ಹಬ್ಬ ಪ್ರೀತಿ ಮತ್ತು ವಸಂತಗಳ ಸಂಕೇತವಾಗಿ ಆಚರಿಸಲಾಗುವ ಪ್ರಮುಖ ಹಿಂದೂ

ಮುದ್ದೇಬಿಹಾಳ : ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮುದ್ದೇಬಿಹಾಳ : ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮುದ್ದೇಬಿಹಾಳ : ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಹಳೇ ಸರಕಾರಿ

ಬಾಕಿ ಬಿಲ್ ಪಾವತಿಗೆ ಆಗ್ರಹ :                                             ಮಾ.6 ರಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಬೃಹತ್ ಹೋರಾಟ

ಬಾಕಿ ಬಿಲ್ ಪಾವತಿಗೆ ಆಗ್ರಹ : ಮಾ.6 ರಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಬೃಹತ್ ಹೋರಾಟ

ಮುದ್ದೇಬಿಹಾಳ : ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದೆರಡೂವರೆ ವರ್ಷಗಳಿಂದ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸದೇ ಇರುವ ಕಾರಣದಿಂದ ಗುತ್ತಿಗೆದಾರರ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಯ್.ಎಂ.ಪಟ್ಟಣಶೆಟ್ಟಿ ಹೇಳಿದರು. ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಸಭಾಭವನದಲ್ಲಿ ಭಾನುವಾರ ತಾಲ್ಲೂಕು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರದಲ್ಲಿ 30 ಸಾವಿರ ಕೋಟಿಗೂ ಅಧಿಕ ಬಿಲ್ ಪಾವತಿಸುವುದು ಬಾಕಿ ಉಳಿಸಿಕೊಂಡಿರುವುದರಿAದ ಎಲ್ಲ ಹಂತದ

ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ

ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ

ಮುದ್ದೇಬಿಹಾಳ : ರೈತಾಪಿ ಕುಟುಂಬದಲ್ಲಿ ಜನಿಸಿ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಎಂ.ಎಸ್.ಕೊಪ್ಪ ಅವರು ಆರಂಭಿಸಿರುವ ಶಾಲೆ ಬಡವರ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು. ಮುದ್ದೇಬಿಹಾಳ ತಾಲ್ಲೂಕು ಇಂದು ಶಿಕ್ಷಣಕ್ಕೆ ಒಳ್ಳೆಯ ಹೆಸರು ಮಾಡಿದೆ.ಬಿಎಎಸ್ ಶಾಲೆ, ಅಂಜುಮನ್ ಸಂಸ್ಥೆ,ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆ,ನಾಗರಬೆಟ್ಟ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ