Collision between two bikes in Bagalkote: Three dead including a lecturer

ಬಾಗಲಕೋಟೆಯಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ: ಉಪನ್ಯಾಸಕಿ ಸೇರಿ ಮೂವರ ದುರ್ಮರಣ

ಬಾಗಲಕೋಟೆಯಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ: ಉಪನ್ಯಾಸಕಿ ಸೇರಿ ಮೂವರ ದುರ್ಮರಣ

ಬಾಗಲಕೋಟೆ: ನಗರದ ಹೆಲಿಪ್ಯಾಡ್‌ ರಸ್ತೆಯಲ್ಲಿ ಸಂಭವಿಸಿದ ಎರಡು ಬೈಕ್ ‌ಗಳ ನಡುವಿನ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada

ಬಾಗಲಕೋಟೆ ಬಿವಿವಿಯ ಶ್ರುತಿ ವಂದಕುದರಿ (32 ವರ್ಷ), ಡೆಂಟಲ್ ಕಾಲೇಜ್ ಉಪನ್ಯಾಸಕಿ ರಜನಿ ವಂದಕುದರಿ (34 ವರ್ಷ), ಸಾಪ್ಟವೇರ್ ಇಂಜಿನಿಯರ್ ಅಭಿಷೇಕ್ ದೋತ್ರಿ (20 ವರ್ಷ) ಮೃತರು ಎಂದು ಗುರುತಿಸಲಾಗಿದೆ.

ಸ್ಕೂಟಿಯಲ್ಲಿದ್ದ ಮಹಿಳೆಯರು ಡಿವೈಡರ್ ಕ್ರಾಸ್ ಮಾಡಿ ಅಡ್ಡ ಬಂದು ವೇಗವಾಗಿ ಹೊರಟಿದ್ದ ಯಮಹಾ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ.

ಅಪಘಾತದ ರಭಸಕ್ಕೆ ಬೈಕ್‌ಗಳು ಪೀಸ್ ಪೀಸ್ ಆಗಿವೆ. ಸ್ಥಳಕ್ಕೆ ಬಾಗಲಕೋಟೆ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Hunagund: PLD ಬ್ಯಾಂಕ್ ಗೆ ಚಿಕ್ಕ‌ಆದಾಪೂರದ ಶಿವನಗೌಡ ಜಡಿಯಪ್ಪಗೌಡ್ರ ಅಧ್ಯಕ್ಷ, ನಾಗರಾಳ ಉಪಾಧ್ಯಕ್ಷ.. ಶಾಸಕರಿಂದ ಅಭಿನಂದನೆ.. (ವಿಡಿಯೋ ನೋಡಿ)

ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

Latest News

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಬೆಂಗಳೂರು: ಮಹಿಳೆಯ ಗರ್ಭಕೋಶದಿಂದ ಮಹತ್ವದ ಶಸ್ತ್ರ ಚಿಕಿತ್ಸೆ ನಡೆಸಿದ ರಾಜಾಜಿನಗರದ ಇಎಸ್‌ಐಸಿ, ಎಂಸಿ ಪಿಜಿಐಎಂಎಸ್‌ಆರ್

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ನಾರಾಯಣಪುರ : ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕೊಡೇಕಲ್ ಉಪತಶೀಲ್ದಾರ ಕಲ್ಲಪ್ಪ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

​ ಮುಧೋಳ : ದೇಶಾಭಿಮಾನ ಪ್ರತಿಯೊಬ್ಬರಲ್ಲಿ ಸ್ವಪ್ರೇರಣೆಯಿಂದ ಮೂಡಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಧಾರವಾಡ, ಆ.15: ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಧನ್ಯವಾದ ಹೇಳಲು ಮತ್ತು ಅವರ ಮೌಲ್ಯಗಳನ್ನು ನೆನಪಿಸಿಕೊಳ್ಳಲು ಒಂದು ಅವಕಾಶ. ನಮ್ಮ ಧ್ವಜವನ್ನು ಹಾರಿಸುವುದು, ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವುದು ಮತ್ತು ಏಕತೆಯ ಮನೋಭಾವವನ್ನು ರೂಢಿಸಿಕೊಳ್ಳುವ ದಿನವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ್ ಅವರು ಹೇಳಿದರು. ಧಾರವಾಡ ಜಿಲ್ಲಾಡಳಿತವು ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಮುದ್ದೇಬಿಹಾಳ : ರೈತರ ಬೆಳೆದ ಬೆಳೆ ವಿವರಗಳನ್ನು ದಾಖಲಿಸುವಲ್ಲಿ ಬೆಳೆಯ ಸಮೀಕ್ಷೆದಾರರ ಪಾತ್ರವು ಅತಿ ಮುಖ್ಯವಾಗಿದ್ದು ಅವರ ಬೇಡಿಕೆಯಂತೆ ಐಡಿ ಕಾರ್ಡ್ ಹಾಗೂ ಕಿಟ್ ವಿತರಿಸಲಾಗಿದೆ ಎಂದು ತಹಸೀಲ್ದಾರ್ ಕೀರ್ತಿ ಚಾಲಕ್ ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರ ಹಾಗೂ ಸರ್ಕಾರದ ಪ್ರತಿನಿಧಿಯಾಗಿ ಈ ಬೆಳೆ ಸಮೀಕ್ಷೆದಾರರು ಕಾರ್ಯನಿರ್ವಹಿಸಲಿದ್ದಾರೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಎಸ್. ಡಿ. ಭಾವಿಕಟ್ಟಿ, ಕೃಷಿ ಅಧಿಕಾರಿಗಳಾದ ಗೋವಿಂದರೆಡ್ಡಿ