ಹುನಗುಂದ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (PLD) ಬ್ಯಾಂಕ್ ಅಧ್ಯಕ್ಷರಾಗಿ ಶಿವನಗೌಡ ಭೀಮನಗೌಡ ಜಡಿಯಪ್ಪಗೌಡ್ರ, ಉಪಾಧ್ಯಕ್ಷರಾಗಿ ಪ್ರಭಾಕರ ಸಿದ್ರಾಮಪ್ಪ ನಾಗರಾಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ನಿರ್ದೇಶಕ ಮಂಡಳಿಯ 14 ಸ್ಥಾನಗಳ ಪೈಕಿ ಹತ್ತು ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ ನಾಲ್ಕು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೂವರು ಬಿಜೆಪಿ ಬೆಂಬಲಿತರು ಹಾಗೂ ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದರು.
ಪಿಎಲ್‌ಡಿ ಬ್ಯಾಂಕ್‌ನ ನಾಲ್ಕು ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ವೀರೇಶ ಸಂಗನಗೌಡ ಗೌಡರ (ಜಂಬಲದಿನ್ನಿ ಸಾಮಾನ್ಯ), ರುದ್ರಪ್ಪ ವೀರಪ್ಪ ಶೀಲವಂತರ (ಹಿರೇಶಿಂಗನಗುತ್ತಿ ಸಾಮಾನ್ಯ), ಲೀಲಾವತಿ ಸಿದ್ದನಗೌಡ ಪಾಟೀಲ(ಸೂಳೇಭಾವಿ ಸಾಮಾನ್ಯ ಮಹಿಳೆ) ಬಿಜೆಪಿ ಬೆಂಬಲಿತರು, ಇನ್ನು ಶಿವನಗೌಡ ಭೀಮನಗೌಡ ಜಡಿಯಪ್ಪಗೌಡ (ನಂದವಾಡಗಿ ಸಾಮಾನ್ಯ) ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದರು.
ಅವಿರೋಧವಾಗಿ ಆಯ್ಕೆಯಾದವರ ವಿವರ:
ಮಹಾಲಿಂಗಪ್ಪ ರಾಚಪ್ಪ ಕಾಶಪ್ಪನವರ (ಸಾಮಾನ್ಯ, ಧನ್ನೂರ), ಶಿವಕುಮಾರಯ್ಯ ಬಸಯ್ಯ ಬಿನ್ನೇದ(ಸಾಮಾನ್ಯ, ನಾಗೂರ), ಮಲ್ಲಪ್ಪ ಮಹಾಂತಪ್ಪ ಬಿಸರಡ್ಡಿ (ಸಾಮಾನ್ಯ, ಚಿತ್ತರಗಿ), ಪ್ರಭಾಕರ ಸಿದ್ರಾಮಪ್ಪ ನಾಗರಾಳ (ಸಾಮಾನ್ಯ, ಅಮೀನಗಡ), ಸುವರ್ಣಾ ಗಂಗಪ್ಪ ಇಲಕಲ್ಲ (ಮಹಿಳಾ, ಹುನಗುಂದ), ನೂರಪ್ಪ ಮೊತಪ್ಪ ಲಮಾಣಿ(ಪರಿಶಿಷ್ಟ ಜಾತಿ, ಇಳಕಲ್), ಸೋಮೇಶ್ವರ ಹುಲ್ಲಪ್ಪ ಬಲಕುಂದಿ (ಪರಿಶಿಷ್ಟ ಪಂಗಡ, ಗುಡೂರು ಎಸ್.ಸಿ), ಖಾಜಾಸಾಬ್ ಮಹಮದ್‌ಸಾಬ್ ಮುದುಗಲ್ (ಹಿಂದುಳಿದ ವರ್ಗ ಅ,ಕರಡಿ), ಬಾಲನಗೌಡ ಹನಮಂತಗೌಡ ಪಾಟೀಲ (ಹಿಂದುಳಿದ ವರ್ಗ ಅ,ಕೂಡಲಸಂಗಮ), ಶೇಖರಪ್ಪ ಗುರಪ್ಪ ಬಾದ ವಾಡಗಿ ( ಬಿನ್‌ಸಾಲಗಾರ) ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಆಕಾಶಕ್ಕೆ ಹಾರಿದ ವಿಮಾನದ ಭಾಗಗಳು ಭೂಮಿಗೆ ಬಿದ್ದವು..!
ಒಟ್ಟಾರೆಯಾಗಿ ಚುನಾವಣೆಯಲ್ಲಿ ಮೂವರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದರೂ ಕೂಡಾ ನಂದವಾಡಗಿ ಕ್ಷೇತ್ರದಿಂದ ಗೆಲುವು ಸಾಧಿಸಿದ ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೊತೆಗೆ ಹತ್ತು ಅವಿರೋಧ ಆಯ್ಕೆಯಾಗಿರುವ ಅಭ್ಯರ್ಥಿಗಳು ಕಾಂಗ್ರೆಸ್ ಬೆಂಬಲಿತರಾಗಿರುವುದರಿಂದ ಪಿಎಲ್‌ಡಿ ಬ್ಯಾಂಕ್ ಅಧಿಕಾರ ಕಾಂಗ್ರೆಸ್ ಬೆಂಬಲಿಗರ ಪಾಲಾಗಿದೆ.
Hunagund: PLD ಬ್ಯಾಂಕ್ ಗೆ ಚಿಕ್ಕಆದಾಪೂರದ ಶಿವನಗೌಡ ಜಡಿಯಪ್ಪಗೌಡ್ರ ಅಧ್ಯಕ್ಷ, ನಾಗರಾಳ ಉಪಾಧ್ಯಕ್ಷ.. ಶಾಸಕರಿಂದ ಅಭಿನಂದನೆ.. pic.twitter.com/CC9WPk3emR
— dcgkannada (@dcgkannada) September 6, 2024