ವಿಶೇಷ ವರದಿ
ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸನ್ 2024-29ನೇ ಸಾಲಿನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಲಾಗುತ್ತಿದ್ದು ತಾಲ್ಲೂಕಿನಲ್ಲಿರುವ 30 ಇಲಾಖೆಗಳಲ್ಲಿರುವ ನೌಕರರು ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾಗಲು ತುರುಸಿನ ಪೈಪೋಟಿ ಕಂಡು ಬಂದಿದೆ.
ಈಗಾಗಲೇ 29 ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಮಾಡಲಾಗಿದೆ ಎನ್ನಲಾಗುತ್ತಿದ್ದು ಈ ಬಗ್ಗೆ ಚುನಾವಣಾಧಿಕಾರಿಗಳಾಗಲೀ, ಸಹಾಯಕ ಚುನಾವಣಾಧಿಕಾರಿಗಳಾಗಲೀ ಚುನಾವಣಾ ಕೇಂದ್ರ ಸ್ಥಾಪಿಸಿರುವ ಕೊಠಡಿಯ ಬಳಿ ಯಾವುದೇ ಮಾಹಿತಿಯನ್ನು ಪ್ರಕಟಿಸದೇ ಇರುವುದು ತೀವ್ರ ಅನುಮಾನಕ್ಕೆ ಕಾರಣವಾಗಿದೆ.
ಮಾಹಿತಿ ಪ್ರಕಾರ ಮತಕ್ಷೇತ್ರ ಸಂಖ್ಯೆ 6 ರಿಂದ ಬಂದಗಿಪಟೇಲ್ ಇಬ್ರಾಹಿಂಪಟೇಲ್ ಗಣಿಯಾರ ಹಾಗೂ ಶಂಕರಗೌಡ ಬಸನಗೌಡ ಬಿರಾದಾರ ಶಿಕ್ಷಣ ಇಲಾಖೆಯಿಂದ ಕಣದಲ್ಲಿ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
ನೌಕರರ ಸಂಘಕ್ಕೆ ಹಿಂದಿನ ಅಧ್ಯಕ್ಷರ ಸ್ಥಾನಕ್ಕೆ ಪ್ರಭಾವಿ ನೌಕರರನ್ನೇ ತರುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆದಿದ್ದು ಇದಕ್ಕೆ ಒಪ್ಪದವರಿಗೆ ನಾನಾ ರೀತಿಯಲ್ಲಿ ಬೆದರಿಕೆಗಳು, ಒತ್ತಡಗಳನ್ನು ಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಚುನಾವಣಾಧಿಕಾರಿಯೂ ಆಗಿರುವ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್.ಕಟ್ಟಮನಿ ಅವರು, ಕಣದಲ್ಲಿ ಇಬ್ಬರೇ ಉಳಿದಿದ್ದು ಮತದಾನ ನಡೆಯಲಿದೆ ಎಂದು ತಿಳಿಸಿದರು.
ಆದರೆ ಅವಿರೋಧವಾಗಿ ಆಯ್ಕೆಯಾದವರು ಯಾರು ಎಂಬ ಮಾಹಿತಿ ನೀಡಲು ಹಿಂದೇಟು ಹಾಕಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.ಸ್ವತಃ ಅವಿರೋಧವಾಗಿ ಆಯ್ಕೆಯಾದವರಲ್ಲೇ ತಳಮಳ ಶುರುವಾಗಿದೆ.ಅಂತಿಮ ದಿನದಂದು ಯಾರು ಪದಾಧಿಕಾರಿಗಳನ್ನಾಗಿ ಘೋಷಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ ಎಂದು ಕೆಲವು ಇಲಾಖೆಯ ನೌಕರರು ತಮ್ಮ ಆತಂಕ ಹೊರ ಹಾಕಿದ್ದಾರೆ.
—
ಅ.21 ರಂದೇ ಅಂತಿಮವಾಗಿ ಕಣದಲ್ಲಿ ಉಳಿದವರ ಪಟ್ಟಿ ಪ್ರಕಟಿಸಬೇಕಿತು.ಚುನಾವಣಾಧಿಕಾರಿಗಳು ಯಾರದ್ದೋ ಮರ್ಜಿಗೆ ಒಳಗಾಗಿ ಕೆಲಸ ಮಾಡುತ್ತಿದ್ದಾರೆ. ಭಾಗ -೧ ಭಾಗ 2 ಎಂದು ವಿಂಗಡಿಸಲಾಗಿದ್ದು ಅದರಲ್ಲಿ ಶಿಕ್ಷಣ ಇಲಾಖೆಯಿಂದ ಮೂವರು ಅವಿರೋಧ ಎನ್ನುತ್ತಿದ್ದಾರೆ.ಆದರೆ ಭಾಗ 2 ರಲ್ಲಿ ಇರುವವರು ಒಂದರಲ್ಲಿ ಅವಿರೋಧ ಆಯ್ಕೆ ಎಂದು ಘೋಷಿಸಿದ್ದಾರೆ.ಆದರೆ ಈವರೆಗೂ ಪಟ್ಟಿ ಪ್ರಕಟಿಸಿಲ್ಲ. ತಾಲ್ಲೂಕಿನ ನೌಕರರಿಗೆ ಚುನಾವಣೆಯ ಕುರಿತು ಸರಿಯಾದ ಮಾಹಿತಿಯನ್ನೇ ನೀಡಲಾಗಿಲ್ಲ.ಎಲ್ಲವನ್ನೂ ಗುಪ್ತವಾಗಿ ಮಾಡುತ್ತಿರುವುದು ಯಾರನ್ನು ಮೆಚ್ಚಿಸಲು ಎಂಬುದು ತಿಳಿದಿಲ್ಲ ಎಂದು
ಚುನಾವಣೆಯಲ್ಲಿ ಕಣದಲ್ಲಿ ಉಳಿದಿರುವ ಬಂದಗಿಪಟೇಲ್ ಗಣಿಯಾರ ಆರೋಪಿಸಿದ್ದಾರೆ.
ಅವಿರೋಧ ಆಯ್ಕೆಗೆ ವಿಫಲ ಕಸರತ್ತು: ಸರ್ಕಾರಿ ನೌಕರರ ಸಂಘದ ಚುನಾವಣೆ ಗುಪ್ತ ಗುಪ್ತ…!
ಅವಿರೋಧ ಆಯ್ಕೆಗೆ ವಿಫಲ ಕಸರತ್ತು: ಸರ್ಕಾರಿ ನೌಕರರ ಸಂಘದ ಚುನಾವಣೆ ಗುಪ್ತ ಗುಪ್ತ…!
Latest News
ಅರ್ಜುನ ಆಸ್ಪತ್ರೆ ಸಹಯೋಗ: ನವಜಾತ ಶಿಶುಗಳ ನಿಯಮಿತ ಆರೈಕೆ ಅಗತ್ಯ-ಡಾ.ಪರಶುರಾಮ
ಮುದ್ದೇಬಿಹಾಳ : ನವಜಾತ ಶಿಶುಗಳ ನಿಯಮಿತ ಆರೈಕೆಯಿಂದ ಆರೋಗ್ಯಪೂರ್ಣವಾದ ಮಗು ಸಮಾಜದಲ್ಲಿ ಬೆಳವಣಿಗೆ ಹೊಂದಲು
ಸಿಂಗಲ್ ಟೆಂಡರ್‌ಗೆ ಅವಕಾಶ ಕೊಡುವುದಿಲ್ಲ: ಸುಳ್ಳು ಹೇಳುವುದೇ ಶಾಸಕ ನಾಡಗೌಡರ ಕಾಯಕ-ನಡಹಳ್ಳಿ
ಮುದ್ದೇಬಿಹಾಳ : ಇವತ್ತಿನ ಶಾಸಕ ಅಪ್ಪಾಜಿ ನಾಡಗೌಡರಿಗೆ ಸರಕಾರದಿಂದ ಹಣ ತರುವ ಯೋಗ್ಯತೆ ಇಲ್ಲ.
ನ.17 ರಂದು ಆಶಾ ಕಾರ್ಯಕರ್ತೆಯರಿಗೆ ನವಜಾತ ಶಿಶುಗಳ ಆರೈಕೆ ಉಚಿತ ತರಬೇತಿ ಶಿಬಿರ
ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್
ಕೊಣ್ಣೂರು ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ
ಮುದ್ದೇಬಿಹಾಳ : ತಾಲ್ಲೂಕಿನ ಕೊಣ್ಣೂರು ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಗೆ
ಕಬ್ಬು ತುಂಬಿದ್ದ ಟ್ರ್ಯಾಲಿ ಪಲ್ಟಿ: ಕಾರ್ಖಾನೆ ಕಾರ್ಮಿಕ ದುರ್ಮರಣ
ಮುದ್ದೇಬಿಹಾಳ : ಕಬ್ಬನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್-ಟ್ರ್ಯಾಲಿ ಕಬ್ಬಿನ ರಾಶಿ ಸಮೇತ ಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಗರಸಂಗಿ ಕ್ರಾಸ್ ಬಳಿ ನ.12ರ ಮಂಗಳವಾರ ಸಂಜೆ ಸುಮಾರು 7 ಗಂಟೆಗೆ ನಡೆದಿದೆ.ತಾಲ್ಲೂಕಿನ ಹಿರೇಮುರಾಳ ಗ್ರಾಮದ ಸಂಗಮೇಶ ಚಲವಾದಿ (35) ಮೃತಪಟ್ಟ ವ್ಯಕ್ತಿ.ಸಂಗಮೇಶ, ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ತನ್ನ ಕೆಲಸ ಮುಗಿದ ನಂತರ ಬೈಕ್ ನಲ್ಲಿ ತನ್ನೂರಿಗೆ ಹೊರಟಿದ್ದರು. ಎದುರಿಗೆ ಕಬ್ಬು
ಮುದ್ದೇಬಿಹಾಳ : ಕುಂಟೋಜಿ ಗ್ರಾ.ಪಂ ಉಪ ಚುನಾವಣೆಈ ಕಾರಣಕ್ಕೆ ಅಭ್ಯರ್ಥಿ ನಾಮಪತ್ರ ರಿಜೆಕ್ಟ್…!
ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಆಯ್ಕೆ ಬಯಸಿ ಸಲ್ಲಿಕೆಯಾಗಿದ್ದ ಎರಡು ನಾಮಪತ್ರಗಳಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ಮದ್ಯಾಹ್ನ 1 ಗಂಟೆಯಿಂದ ನಾಮಪತ್ರಗಳ ಪರಿಶೀಲನೆ ಕಾರ್ಯವನ್ನು ನಾಮಪತ್ರ ಸಲ್ಲಿಸಿದ್ದ ಶಾಂತಾ ಮದರಿ ಹಾಗೂ ಕವಿತಾ ಶಿರಗುಪ್ಪಿ ಅವರ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳು ನಡೆಸಿದರು.ಈ ವೇಳೆ ಕವಿತಾ ಶಿರಗುಪ್ಪಿ ಅವರು ಸಲ್ಲಿಸಿದ್ದ ನಾಮಪತ್ರದ ಜೊತೆಗೆ ಮೀಸಲಾತಿ