ಮುದ್ದೇಬಿಹಾಳ : ಬಿ.ಎಸ್.ಎಫ್‌ಗೆ ಆಯ್ಕೆಯಗೊಂಡ ತಾಲೂಕಿನ ಪ್ರಥಮ ಯುವತಿ ಸಿದ್ದಾಪೂರ ಪಿ.ಟಿ ಗ್ರಾಮದ ಕುಮಾರಿ ಆಯೇಷಾ ಬಂದಗೀಸಾ ವಾಲಿಕಾರ ಅವರಗೆ ಫೆ.5 ರಂದು ಸಂಜೆ 4ಕ್ಕೆ ಇಲ್ಲಿನ ಕಾರ್ಗಿಲ್ ವೀರಯೋಧರ ಸ್ಮಾರಕ ನಿರ್ಮಾಣ ಸಮಿತಿ ಹಾಗೂ ಮಾಜಿ ಸೈನಿಕರ ಸಹಯೋಗದಲ್ಲಿ ಅಭಿನಂದನಾ ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ಬಜಾರ್ ಹನುಮಂತನ ಗುಡಿಯಿಂದ ತೆರೆದ ವಾಹನದಲ್ಲಿ ಆಯೇಷಾ ಅವರನ್ನು ಮೆರವಣಿಗೆ ಮೂಲಕ ಸೈನಿಕ ಮೈದಾನಕ್ಕೆ ಕರೆತಂದು ಅವರಿಗೆ ಹಾಗೂ ಅವರ ಹೆತ್ತವರಿಗೆ ಸನ್ಮಾನ ಮಾಡಲಾಗುತ್ತದೆ ಎಂದು ಕಾರ್ಗಿಲ್ ವೀರಯೋಧರ ಸ್ಮಾರಕ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಬಸವರಾಜ ನಂದಿಕೇಶ್ವರಮಠ ತಿಳಿಸಿದ್ದಾರೆ.




