ಮುಸ್ಲಿಂ ಸಮಾಜದವರಿಂದ ಮನವಿ: ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಒದಗಿಸಲು ಆಗ್ರಹ

ಮುಸ್ಲಿಂ ಸಮಾಜದವರಿಂದ ಮನವಿ: ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಒದಗಿಸಲು ಆಗ್ರಹ

ಮುದ್ದೇಬಿಹಾಳ : ಪೂರ್ವದ ಕಾಲದಿಂದಲೂ ಹಿರಿಯರು ನಮ್ಮ ಸಮಾಜದವರು ಯಾರೇ ನಿಧನ ಹೊಂದಿದರೂ ಅವರ ಶವ ಸಂಸ್ಕಾರವನ್ನು ಗ್ರಾಮದ ಬಿರಾದಾರ ಎಂಬುವರ ಜಮೀನಿನಲ್ಲಿ ಮಾಡುತ್ತ ಬಂದಿದ್ದರು.ಆದರೆ ಈಗ ಆ ಜಮೀನಿನ ಮಾಲೀಕರು ಶವಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದು ಸರ್ಕಾರದಿಂದ ಮುಸ್ಲಿಂ ಸಮಾಜಕ್ಕೆ ಸ್ಮಶಾನ ಭೂಮಿ ಒದಗಿಸಬೇಕು ಎಂದು ತಾಲ್ಲೂಕಿನ ಶಿರೋಳ ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿ ಪದಾಧಿಕಾರಿಗಳು ಈಚೇಗೆ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ಗ್ರಾಮದ ಮುಸ್ಲಿಂ ಸಮಾಜದ ಬಾಂಧವರು ತಹಶೀಲ್ದಾರ್ ಕೀರ್ತಿ ಚಾಲಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ರಹಿಮಾನಸಾ ಮುದ್ನಾಳ , ಮುಖಂಡ ಅಬ್ದುಲರಜಾಕ ತಮದಡ್ಡಿ ಮಾತನಾಡಿ, ಗ್ರಾಮದಲ್ಲಿರುವ ಸವಳು ಜವಳು ಜಮೀನಿನಲ್ಲಿ ಸ್ಮಶಾನ ಭೂಮಿ ಹಂಚಿಕೆ ಮಾಡಬೇಕು.ಅಲ್ಲಿ ಬೆಳೆಯೂ ಬರುವುದಿಲ್ಲ.ಸರ್ಕಾರ ಭೂಮಿ ಖರೀದಿ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಅನಾದಿ ಕಾಲದಿಂದಲೂ ನಮ್ಮ ಸಮಾಜದವರ ಹಿರಿಯರ ಗೋರಿಗಳು ಅಲ್ಲಿಯೇ ಇದ್ದು ಶುಕ್ರವಾರ ಹಾಗೂ ಹಬ್ಬದ ದಿನಗಳಲ್ಲಿ ಹಿರಿಯರನ್ನು ಸ್ಮರಿಸುವ ಕಾರ್ಯ ಮಾಡುವ ಮೂಲಕ ಭಾವನಾತ್ಮಕ ಸಂಬAಧ ಉಳಿಸಿಕೊಂಡಿದ್ದೇವೆ.ಅದನ್ನು ಉಳಿಸಿಕೊಡಬೇಕು ಎಂದು ತಹಶೀಲ್ದಾರ್‌ಗೆ ವಿನಂತಿಸಿದರು.

ಗ್ರಾಮದಲ್ಲಿರುವ ಸರ್ಕಾರಿ ಸ್ವಾಮ್ಯದ ಜಮೀನು ರಿ.ಸ.ನಂ 110/1 ರಲ್ಲಿ 1-18 ಎಕರೆ ಇದ್ದು ಅಲ್ಲಿ ಹೊಸ ಸ್ಮಶಾನಕ್ಕೆ ಜಾಗೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು. ಕಮೀಟಿಯ ಕಾರ್ಯದರ್ಶಿ ಬಷೀರಹ್ಮದ ತಮದಡ್ಡಿ, ಶೌಕತ್‌ಅಲಿ ತಾರನಾಳ,ಮುಖಂಡ ಎಚ್.ಆರ್.ಬಾಗವಾನ, ಅಬ್ದುಲರಜಾಕ ನದಾಫ, ಚಾಂದಸಾ ನದಾಫ,ಮಹ್ಮದರಫೀಕ ಮುದ್ನಾಳ,ಮುರ್ತುಜಖಾದರ ತಮದಡ್ಡಿ,ಯಾಸೀನ ಮುದ್ನಾಳ ಇದ್ದರು.

Latest News

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ:                                           ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ:                            ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್‌ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,