ಮುದ್ದೇಬಿಹಾಳ : ದೇಶದ ಪ್ರಗತಿ ಪಥದ ಚಾಲನೆಗೆ ಸಂಸ್ಕಾರ ಭರಿತ ಶಿಕ್ಷಣ ಅವಶ್ಯಕ ಎಂದು ಕ್ರೈಂ ಪಿ.ಎಸ್.ಆಯ್ ಆರ್.ಎಸ್.ಬಂಗಿ ಹೇಳಿದರು.
ಪಟ್ಟಣದ ವಿವೇಕಾನಂದ ವಿದ್ಯಾ ಪ್ರಸಾರ ಸಮಿತಿ ಅಡಿಯಲ್ಲಿ ನಡೆಯುವ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ವಿದ್ಯಾ ಸಂಸ್ಥೆಯ 40ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಹಿರಿದಾಗಿದೆ. ವ್ಯಸನಕ್ಕೆ ಒಳಗಾಗಬಾರದು. ವ್ಯಸನಮುಕ್ತ ಸದ್ಗುಣ ಯುಕ್ತ ವ್ಯಕ್ತಿಯನ್ನು ನಿರ್ಮಾಣ ಮಾಡುವಲ್ಲಿ ಮನೆ, ಶಾಲೆ, ಸಮಾಜದ ಪಾತ್ರ ಹಿರಿದಾಗಿದೆ. ಮಕ್ಕಳು ವಿದ್ಯಾರ್ಥಿಯ ದೆಸೆಯಿಂದಲೇ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ಹೊಂದಿರಬೇಕು ಎಂದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಪರಿವರ್ತನೆಗೆ ಬದಲಾದ ಪದ್ಧತಿ ಶಿಕ್ಷಣದಲ್ಲಿ ಮೂಡಿಬರಬೇಕಾಗಿದೆ. ವಿದ್ಯಾರ್ಥಿ ಜೀವನದ ಗುರಿ ಜ್ಞಾನಾರ್ಜನೆಯಾಗಿರಬೇಕು ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎA.ಬೆಳಗಲ್, ನಿವೃತ್ತ ಪ್ರಾಧ್ಯಾಪಕ ಬಿ.ಎಮ್. ಹಿರೇಮಠ, ಕರ್ನಾಟಕ ಅರ್ಬನ್ ಬ್ಯಾಂಕಿನ ವ್ಯವಸ್ಥಾಪಕಿ ಸುಮಾ ನಾಡಗೌಡ, ಅಧ್ಯಕ್ಷ ಬಿ.ಪಿ.ಕುಲಕರ್ಣಿ ಸೇರಿದಂತೆ ಗಣ್ಯರು ಮಾತನಾಡಿದರು.
ಬಿ.ಎಸ್.ಎಫ್ ಸೇನೆಗೆ ಸೇರಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಲಾಳೆಮುಶ್ಯಾಕ್ ನಾಯ್ಕೋಡಿ ಹಾಗೂ ಕಳೆದ ವರ್ಷ ಪಿ.ಯು.ಸಿ ದ್ವಿತೀಯ ವರ್ಷದಲ್ಲಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಎಸ್.ಬಿ.ವಡವಡಗಿ, ಕಾರ್ಯದರ್ಶಿ ಪ್ರಭು ಕಡಿ, ಕೋಶಾಧ್ಯಕ್ಷ ಎಮ್.ಪಿ.ದಂಡಾವತಿ, ನಿರ್ದೇಶಕರುಗಳಾದ ಬಿ.ಆರ್.ಓಸ್ವಾಲ್, ಜಿ.ಎಸ್.ಓಸ್ವಾಲ್, ಲೀಲಾ ಭಟ್ಟ, ಜಿ.ಜೆ.ಪಾದಗಟ್ಟಿ, ಶಂಕರ ಬೇವಿನಗಿಡದ, ಬಸವರಾಜ ನಾಲತವಾಡ, ಶಾಂತಾ ಭಟ್ಟ, ಸುಬಾಷ್ ಬಿದಿರಕುಂದಿ, ಮೀನಾಕ್ಷೀ ಕುಲಕರ್ಣಿ, ಉದ್ಯಮಿ ಗೋಪಾಲ ನಾವಡ, ಸಾಹಿತಿ ಅಶೋಕ ಮಣಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ರಚನಾ ಕುಲಕರ್ಣಿ ಪ್ರಾರ್ಥಿಸಿದರು.ಮುಖ್ಯಗುರುಗಳಾದ ರಾಮಚಂದ್ರ ಹೆಗಡೆ ಮತ್ತು ಶಿಕ್ಷಕಿ ರಂಜಿತಾ ಭಟ್ಟ ಸ್ವಾಗತಿಸಿದರು. ಪ್ರಾಚಾರ್ಯ ಅರುಣ ಹುನಗುಂದ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕರಾದ ವಿ.ವಿ.ಪಾಟೀಲ್ ಮತ್ತು ಶೋಭಾ ನಾಗೂರ ಕಾರ್ಯಕ್ರಮ ನಿರ್ವಹಿಸಿದರು.ಮುಖ್ಯಶಿಕ್ಷಕಿ ಸರಸ್ವತಿ ಮಡಿವಾಳರ ವಂದಿಸಿದರು. ಶಿಕ್ಷಕರುಗಳಾದ ಬಿ.ಆರ್.ಬೆಳ್ಳಿಕಟ್ಟಿ, ಮಂಜುನಾಥ ಪಡದಾಳಿ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.







