Cyber ​​crime Facebook friendship

Cyber crime : ಫೇಸ್ ಬುಕ್‌ ಗೆಳೆತನ.. ಲಕ್ಷ ಲಕ್ಷ ಪೀಕಿದ ವಂಚಕಿ?!

Cyber crime : ಫೇಸ್ ಬುಕ್‌ ಗೆಳೆತನ.. ಲಕ್ಷ ಲಕ್ಷ ಪೀಕಿದ ವಂಚಕಿ?!

ಮಂಡ್ಯ: ವ್ಯಕ್ತಿಯೊಬ್ಬರಿಗೆ ವಂಚಕರು ಯುವತಿಯ ಸೋಗಿನಲ್ಲಿ ಫೋಟೋ ಕಳಿಸಿ ಮದುವೆಯಾಗುವುದಾಗಿ ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಘಟನೆ (Cyber crime) ಪಾಂಡವಪುರದಲ್ಲಿ ಬೆಳಕಿಗೆ ಬಂದಿದೆ.

Join Our Telegram: https://t.me/dcgkannada

ಅರ್ಚಕನಾಗಿ ಕೆಲಸ ಮಾಡಿಕೊಂಡಿರುವ ವಿಜಯ್ ಕುಮಾರ್ ಮೋಸ ಹೋದ ವ್ಯಕ್ತಿ. ಅವರು ಸೈಬರ್ ಕ್ರೈಂ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.

ಪಾಂಡವಪುರದ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಿಜಯ್ ಕುಮಾರ್ ಗೆ ಫೇಸ್ ಬುಕ್ ಮೂಲಕ ವ್ಯಕ್ತಿಯೊಬ್ಬರ ಪರಿಚಯವಾಗಿದೆ. ಆಕೆಯ ಪ್ರೊಫೈಲ್ ಫೋಟೋ ಹಾಗೂ ಇತರೆ ವಿವರಗಳನ್ನು ನೋಡಿ ವಿಜಯ್ ಮೋಸ ಹೋಗಿದ್ದಾರೆ. ಆಕೆಯೂ ಸಹ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಬಳಿಕ ಪ್ರೇಮ ನಿವೇದನೆ ಮಾಡಿಕೊಂಡಿದ್ದಳು!

ಬಳಿಕ ತಾನು ಓದುತ್ತಿರುವ ವಿದ್ಯಾರ್ಥಿನಿಯಾಗಿದ್ದು ತನಗೆ ಫೀಸ್, ವಸತಿ ಹಾಗೂ ಊಟಕ್ಕೆ ಬೇಕೆಂದು ಹಣ ಪೀಕಲು ಶುರು ಮಾಡಿದ್ದಾಳೆ. ಹೀಗೆ, ಹಂತಹಂತವಾಗಿ (Cyber crime)1.38 ಲಕ್ಷ ರೂಪಾಯಿ ಕೊಟ್ಟು ವಿಜಯ್ ಕುಮಾ‌ರ್ ಕೈ ಖಾಲಿ ಮಾಡಿಕೊಂಡಿದ್ದರು.

ಇದನ್ನೂ‌ ಓದಿ: Viral Video: ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನ..! ಕಾಮಾಂಧನನ್ನು ತಿವಿದು ಬಿಸಾಕಿದ ಕಾಮಧೇನು..! (ವಿಡಿಯೋ)

ತಾನುಬ್ಬಳು ಅನಾಥ ಹುಡುಗಿಯಾಗಿದ್ದು, ತನಗೆ ತಂದೆತಾಯಿ ಯಾರೂ ಇಲ್ಲ ಎಂದು ಸುಳ್ಳು ಹೇಳಿದ್ದ ವಂಚಕಿ, ನಿಮ್ಮನ್ನೇ ಮದುವೆಯಾಗುತ್ತೇನೆ ಎಂದು ವಿಜಯ್ ಕುಮಾ‌ರ್ ಅವರಿಗೆ ನಂಬಿಸಿದ್ದಾಳೆ.

ಜೊತೆಗೆ, ತಾನು ಓದು ಮುಗಿದ ಬಳಿಕ ನಿಮ್ಮ ಎಲ್ಲ ಹಣ ವಾಪಸ್ ಸಹ ನೀಡುತ್ತೇನೆ ಎಂದು ಅವರ ಬಳಿ ಸಾಲ ಮಾಡಿಸಿ ಹಾಗೂ ಅವರ ದ್ವಿಚಕ್ರ ವಾಹನ ಮಾರಿಸಿ ಆ ಹಣವನ್ನೂ ಪಡೆದಿದ್ದಾಳೆ.

ಈ ಪ್ರಕ್ರಿಯೆ ಕೊನೆಗಾಣದಿದ್ದಾಗ ತಾನು ಮೋಸ ಹೋಗಿರುವುದು ವಿಜಯ್ ಕುಮಾ‌ರ್ ಅವರಿಗೆ ಅರಿವಾಗಿತ್ತು. ಹೀಗಾಗಿ, 9676345605 ನಂಬರ್ ನಿಂದ ಕರೆ ಮಾಡಿ ತನಗೆ ವಂಚಿಸಿರುವ ವ್ಯಕ್ತಿಯಿಂದ ನ್ಯಾಯ ಕೊಡಿಸಬೇಕೆಂದು ವಿಜಯ್ ಕುಮಾರ್ ದೂರು ದಾಖಲಿಸಿದ್ದಾರೆ.

ತಾನು ಬೆಂಗಳೂರಿನಲ್ಲಿರುವುದಾಗಿ ಹೇಳಿರುವ ಯುವತಿಯ ಸುಳಿವು ಹೈದರಾಬಾದ್ ನಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಸೈಬ‌ರ್ ಕ್ರೈಂ ವಿಭಾಗದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Latest News

ಐಪಿಎಲ್‌ ಪಂದ್ಯ ನಿಷೇಧಕ್ಕೆ ಸಚಿವ ಸಂತೋಷ್‌ ಲಾಡ್‌ ಆಗ್ರಹ

ಐಪಿಎಲ್‌ ಪಂದ್ಯ ನಿಷೇಧಕ್ಕೆ ಸಚಿವ ಸಂತೋಷ್‌ ಲಾಡ್‌ ಆಗ್ರಹ

ಬೆಂಗಳೂರು: ಭಾರತ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಪಾಕಿಸ್ತಾನವು ಭಾರತದ ನಾಗರಿಕರನ್ನು ಗುರಿಯಾಗಿರಿಸಿ

ಚೆನ್ನೈ ವಿರುದ್ಧ ಸೋಲು : ಪ್ಲೇ ಆಪ್ ನಿಂದ ಕೋಲ್ಕತ್ತ ಔಟ್

ಚೆನ್ನೈ ವಿರುದ್ಧ ಸೋಲು : ಪ್ಲೇ ಆಪ್ ನಿಂದ ಕೋಲ್ಕತ್ತ ಔಟ್

ಕೋಲ್ಕತ್ತ: ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ವಿರುದ್ಧ ಸೋಲುವ ಮೂಲಕ

ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ನಾಲತವಾಡ: ಕೆಎಸ್ಆರ್.ಟಿಸಿ ಬಸ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ಆರೇಶಂಕರ ಕ್ರಾಸ್

ಅಭ್ಯುದಯ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಅಭ್ಯುದಯ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮುದ್ದೇಬಿಹಾಳ : ಪಟ್ಟಣದ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಮುದ್ದೇಬಿಹಾಳ, ಕೋಳೂರು, ಅಡವಿ

ನಿಶ್ಚಿತಾರ್ಥದ ಮನೆಯಿಂದ ಮಸಣದೆಡಗೆ: ಅಪಘಾತದಲ್ಲಿ ಕಮರಿದ ಮದುವೆಯ ಕನಸು

ನಿಶ್ಚಿತಾರ್ಥದ ಮನೆಯಿಂದ ಮಸಣದೆಡಗೆ: ಅಪಘಾತದಲ್ಲಿ ಕಮರಿದ ಮದುವೆಯ ಕನಸು

ನಿಶ್ಚಿತಾರ್ಥದ ಖುಷಿಯಲ್ಲಿ ಪಯಣ ಬೆಳೆಸಿದ ಕುಟುಂಬಕ್ಕೆ ಇಂದು ಬೆಳಗ್ಗಿನ ಜಾವ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನಿಶ್ಚಿತಾರ್ಥ ಮುಗಿಸಿಕೊಂಡು ಬಾಗಲಕೋಟ ಜಿಲ್ಲೆಯ ಕುಳಗೇರಿ ಕ್ರಾಸ್ ಗೆ ತೆರಳುತ್ತಿರುಬ ಕುಟುಂಬ ಅಪಘಾತಕ್ಕೆ ಬಲಿಯಾಗಿದೆ. ಶ್ವೇತಾ ಎಬ ಯುವತಿ ಎರಡು ದಿನಗಳ‌ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಹೊಸ ಬಾಳ‌ ಸಂಗಾತಿ ಹಾಗೂ ಹೊಸ ಜೀವನದ ಕನಸಿನೊಂದಿಗೆ ಕಾರನ್ನೇರಿ ಪಯಣ ಬೆಳೆಸಿದ್ದಳು. ವಿಧಿಯ ಮುಂದೆ, ಅಪಘಾತದಲ್ಲಿ ಕನಸು ನುಚ್ಚು ನೂರಾಗಿದೆ. ಎರಡು ದಿನಗಳ ಹಿಂದೆ ಸಾಗರ

ಕೃಷ್ಣಾ ನದಿಯ ನೀರನ್ನು ಕುಡಿಯಲು ಒದಗಿಸಬೇಕು ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು: ಅಂಬೇಡ್ಕರ್ ಸೇನೆ ಒತ್ತಾಯ

ಕೃಷ್ಣಾ ನದಿಯ ನೀರನ್ನು ಕುಡಿಯಲು ಒದಗಿಸಬೇಕು ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು: ಅಂಬೇಡ್ಕರ್ ಸೇನೆ ಒತ್ತಾಯ

ಲಿಂಗಸಗೂರು: ತಾಲ್ಲೂಕಿನ ಚಿತ್ತಾಪೂರ ಗ್ರಾಮದಲ್ಲಿ ಬೋರವೇಲ್ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಗ್ರಾಮದ ಜನರಿಗೆ ಯೋಗ್ಯವಾದ ಕೃಷ್ಣ ನದಿಯ ನೀರನ್ನು ಒದಗಿಸಬೇಕು ಎಂದು ಸಹಾಯಕ ಆಯುಕ್ತರಿಗೆಅಂಬೇಡ್ಕರ ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕಳೆದ ವರ್ಷ ಬೇಸಿಗೆಯಲ್ಲಿ ಚಿತ್ತಾಪೂರ ಗ್ರಾಮದ ಸಂಪೂರ್ಣ ಜನರಿಗೆ ವಾಂತಿ ಬೇಧಿಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದರು. ಇಡೀ ರಾಜ್ಯಾದ್ಯಂತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಬೇಟಿ ನೀಡಿ, ಹತೋಟಿಗೆ ತರುವ