ಮುದ್ದೇಬಿಹಾಳ ; ಕರ್ನಾಟಕ ದಲಿತ ಸಂಘರ್ಷ ಸಮೀತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ ಅವರ ನುಡಿನಮನ ಕಾರ್ಯಕ್ರಮ ಡಿ.24 ರಂದು ಬೆಳಗ್ಗೆ 10.30ಕ್ಕೆ ಇಲ್ಲಿನ ಹುಡ್ಕೋದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಾಗಲಕೋಟ ಬುದ್ಧವಿಹಾರದ ಧಮ್ಮಪಾಲ ಬಂತೇಜಿ, ಅಂಕಲಿಮಠದ ವೀರಭದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.ಸಂಸದ ರಮೇಶ ಜಿಗಜಿಣಗಿ , ಶಾಸಕ ಸಿ.ಎಸ್.ನಾಡಗೌಡ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಶಾಸಕಿ ನಂದಿನಿ ದೇಶಮುಖ,ಮಾಜಿ ಶಾಸಕ ರಾಜು ಆಲಗೂರ,ದಲಿತ ಸಂಘರ್ಷ ಸಮಿತಿ ರಾಜ್ಯ ಹೋರಾಟಗಾರ ಎನ್.ಶಂಕರ,ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ,ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ದಸಂಸ ಹೋರಾಟಗಾರ ಅಭಿಷೇಕ ಚಕ್ರವರ್ತಿ,ರಮೇಶ ಆಸಂಗಿ ಸೇರಿದಂತೆ ತಾಲ್ಲೂಕಿನ ದಲಿತಪರ ಸಂಘಟನೆ ಒಕ್ಕೂಟದ ಮುಖಂಡರು,ಸAಘ ಸಂಸ್ಥೆಗಳ ಮುಖಂಡರು,ಜಿಪA ಮಾಜಿ ಸದಸ್ಯರು,ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿವಿಧ ದಲಿತಪರ ಸಂಘಟನೆ ಒಕ್ಕೂಟದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







